ಮಹಿಳೆಯರಿಗೆ ಉಚಿತ ಬಸ್ ಸಾರಿಗೆ ಆರಂಭಿಸಿದ ಈ ಮಹಾನಗರ ಪಾಲಿಕೆ..!

ಲಾತೂರ್ ಮಹಾನಗರ ಪಾಲಿಕೆಯು ಮಹಿಳೆಯರಿಗಾಗಿ ಉಚಿತ ಬಸ್ ಸೇವೆಯನ್ನು ಪ್ರಾರಂಭಿಸಿದೆ, ಇದು ದೇಶದಲ್ಲೇ ಮೊದಲನೆಯದು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿನ ಶಿವಾಜಿ ಚೌಕ್‌ನಲ್ಲಿ ಶುಕ್ರವಾರದಂದು ಮಹಾರಾಷ್ಟ್ರ ಸಚಿವ ಅಮಿತ್ ದೇಶಮುಖ್ ಅವರು ಈ ಸೇವೆಗೆ ಚಾಲನೆ ನೀಡಿದರು.

Written by - Zee Kannada News Desk | Last Updated : Mar 19, 2022, 10:17 PM IST
  • ಇದು ಶೈಕ್ಷಣಿಕ ಉದ್ದೇಶಗಳಿಗಾಗಿ ಲಾತೂರ್‌ಗೆ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ" ಎಂದು ದೇಶಮುಖ್ ಹೇಳಿದರು.
ಮಹಿಳೆಯರಿಗೆ ಉಚಿತ ಬಸ್ ಸಾರಿಗೆ ಆರಂಭಿಸಿದ ಈ ಮಹಾನಗರ ಪಾಲಿಕೆ..!  title=

ನವದೆಹಲಿ: ಲಾತೂರ್ ಮಹಾನಗರ ಪಾಲಿಕೆಯು ಮಹಿಳೆಯರಿಗಾಗಿ ಉಚಿತ ಬಸ್ ಸೇವೆಯನ್ನು ಪ್ರಾರಂಭಿಸಿದೆ, ಇದು ದೇಶದಲ್ಲೇ ಮೊದಲನೆಯದು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.ಇಲ್ಲಿನ ಶಿವಾಜಿ ಚೌಕ್‌ನಲ್ಲಿ ಶುಕ್ರವಾರದಂದು ಮಹಾರಾಷ್ಟ್ರ (Maharashtra ) ಸಚಿವ ಅಮಿತ್ ದೇಶಮುಖ್ ಅವರು ಈ ಸೇವೆಗೆ ಚಾಲನೆ ನೀಡಿದರು.

ಇದನ್ನೂ ಓದಿ: Best Captain: ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ ನಾಯಕ..?

ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಸ್ಮಾರ್ಟ್ ಕಾರ್ಡ್ ನೀಡಲಾಗುವುದು.ಬಸ್‌ಗಳಲ್ಲಿ ಮಹಿಳಾ ಅಟೆಂಡರ್‌ಗಳು ಇರುತ್ತಾರೆ ಮತ್ತು ಯೋಜನೆಗೆ ಸಂಬಂಧಿಸಿದ ಸಿಬ್ಬಂದಿ ಪೊಲೀಸ್ ಪರಿಶೀಲನೆಗೆ ಒಳಗಾಗುತ್ತಾರೆ.ಇದು ಶೈಕ್ಷಣಿಕ ಉದ್ದೇಶಗಳಿಗಾಗಿ ಲಾತೂರ್‌ಗೆ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ" ಎಂದು ದೇಶಮುಖ್ ಹೇಳಿದರು.

ಇದನ್ನೂ ಓದಿ: Harbhajan Singh : ಧೋನಿ ಬಗ್ಗೆ ಹೇಳಿಕೆ ನೀಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಹರ್ಭಜನ್ ಸಿಂಗ್!

ಮಾಲಿನ್ಯವನ್ನು ಎದುರಿಸಲು ಪರಿಸರ ಸ್ನೇಹಿ ಇಂಧನ ಮತ್ತು ವಿದ್ಯುತ್‌ನಲ್ಲಿ ಬಸ್‌ಗಳನ್ನು ಓಡಿಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವಂತೆ ಲಾತೂರ್ ಮಹಾನಗರ ಪಾಲಿಕೆ ಸಾರಿಗೆ ಸಮಿತಿಯನ್ನು ಕೇಳಿದೆ.ಈ ಸಮಾರಂಭದಲ್ಲಿ ಪೌರಾಯುಕ್ತ ಅಮನ್ ಮಿತ್ತಲ್ ಮತ್ತು ಮೇಯರ್ ವಿಕ್ರಾಂತ್ ಗೋಜಮುಂಡೆ ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News