Vijay Rupani Risigned: ಗುಜರಾತ್ ನಲ್ಲಿ (Gujarat) ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. CM ವಿಜಯ್ ರೂಪಾನಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶನಿವಾರ ರಾಜ್ಯಪಾಲರನ್ನು ಭೇಟಿಯಾಗಿರುವ ಅವರು ತಮ್ಮ ರಾಜೀನಾಮೆ ಪತ್ರವನ್ನು ಆವರಿಗೆ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದ ರೂಪಾನಿ
ನಂತರ ಮಾತನಾಡಿರುವ ವಿಜಯ್ ರೂಪಾನಿ (Vijay Rupani) ಗುಜರಾತ್ ಜನತೆ ಮಾತು ಪಕ್ಷದ ನೇತೃತ್ವಕ್ಕೆ ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ತಮಗೆ ಕೇಂದ್ರ ಸಚಿವ ಅಮಿತ್ ಷಾ (Amit Shah) ಅವರಿಂದ ಸಾಕಷ್ಟು ಬೆಂಬಲ ಸಿಕ್ಕಿದ್ದು, ತಮ್ಮ ರಾಜೀನಾಮೆಯ ಬಳಿಕ ರಾಜ್ಯದಲ್ಲಿ ಹೊಸ ನಾಯಕತ್ವಕ್ಕೆ ಜವಾಬ್ದಾರಿ ನಿರ್ವಹಿಸುವ ಅವಕಾಶ ಸಿಗಲಿದೆ. ನನಗೆ 5 ವರ್ಷಗಳ ಕಾಲ ಈ ಜವಾಬ್ದಾರಿ ನೀಡಲಾಗಿತ್ತು ಮತ್ತು ನನ್ನಂತಹ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಇದು ತುಂಬಾ ದೊಡ್ಡ ಅವಕಾಶವಾಗಿತ್ತು ಎಂದು ರೂಪಾನಿ ಹೇಳಿದ್ದಾರೆ. 


ಇದನ್ನೂ ಓದಿ-SBI Alert:ಈ ಕೆಲಸ ಮಾಡದೇ ಹೋದಲ್ಲಿ ನಿಂತೇ ಹೋಗಬಹುದು ಬ್ಯಾಂಕಿಂಗ್ ಸೇವೆ


ಗುಜರಾತ್ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದ ರೂಪಾನಿ
ಮುಂದಿನ ಚುನಾವಣೆಯಲ್ಲಿ ಬಿಜೆಪಿ (BJP)ಸಂಪೂರ್ಣ ಹುಮ್ಮಸ್ಸಿನಿಂದ  ಹೋರಾಡುತ್ತದೆ ಮತ್ತು ಚುನಾವಣೆಯಲ್ಲಿ ಗೆಲುವು ದಾಖಲಿಸುತ್ತದೆ. ನನಗೆ ಈ ಜವಾಬ್ದಾರಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ರೂಪಾಣಿ ಹೇಳಿದ್ದಾರೆ. ವಿವಿಧ ಸಮಯಗಳಲ್ಲಿ ಪಕ್ಷವು ಜವಾಬ್ದಾರಿಗಳನ್ನು ಬದಲಿಸುತ್ತಲೇ ಇದೆ ಮತ್ತು ಇದೇ  ಸಂಚಿಕೆಯಲ್ಲಿ ತಾವೂ ಕೂಡ ರಾಜೀನಾಮೆ ನೀಡಿದ್ದೇನೆ ಎಂದು ಅವರು ಹೇಳಿದ್ದು, ಗುಜರಾತ್ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದಿದ್ದಾರೆ. 


ಇದನ್ನೂ ಓದಿ-ನವೆಂಬರ್ ನಲ್ಲಿ ಮದುವೆಯಾಗುವುದಕ್ಕೆ ಜನ ಹಿಂದೇಟು ಹಾಕುವುದಕ್ಕೆ ಇದೇ ಕಾರಣ..!


ಈ ಮುಖಂಡ ನೂತನ ಮುಖ್ಯಮಂತ್ರಿಯಾಗುವ ಸಾಧ್ಯತೆ
ಕಳೆದ ಚುನಾವಣೆಯಲ್ಲಿ ಬಿಜೆಪಿ ಗುಜರಾತ್‌ನಲ್ಲಿ ಸೋಲಿನಿಂದ ಪಾರಾಗಿದೆ. ಕೊನೆಯ ಕ್ಷಣದಲ್ಲಿ, ಪಿಎಂ ನರೇಂದ್ರ ಮೋದಿಯವರು ಸ್ವತಃ ಗುಜರಾತ್‌ನಲ್ಲಿ ಮುಂಚೂಣಿಯಲ್ಲಿದ್ದರು. ಅದರ ನಂತರ ಬಿಜೆಪಿ ಅಲ್ಪ ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ವಿಜಯ್ ರೂಪಾನಿ ರಾಜೀನಾಮೆ ನಂತರ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ಗುಜರಾತ್‌ನ ಹೊಸ ಸಿಎಂ ಮಾಡುವ ಸಾಧ್ಯತೆ ಇದೆ ಎಂಬ ಊಹಾಪೋಹಗಳಿವೆ. ಪಕ್ಷ ಇದನ್ನು ಮಾಡಿದರೆ, ರಾಜ್ಯದಲ್ಲಿ ಪಟೇಲರನ್ನು ಸಿಎಂ ಮಾಡುವ ಬೇಡಿಕೆಯನ್ನು ಕೂಡ ಈಡೇರಿದಂತಾಗಲಿದೆ. ನಿತಿನ್ ಪಟೇಲ್ (Nitin Patel) ಹೊರತಾಗಿ ಇನ್ನಿಬ್ಬರು ನಾಯಕರು ಕೂಡ ಸಿಎಂ ಹುದ್ದೆಯ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ-Yamaha Festive Offers: ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್ ಘೋಷಿಸಿದ ಯಮಹಾ ಮೋಟಾರ್ ಇಂಡಿಯಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.