Yamaha Festive Offers: ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್ ಘೋಷಿಸಿದ ಯಮಹಾ ಮೋಟಾರ್ ಇಂಡಿಯಾ

Yamaha Announces Festive Offers: ಯಮಹಾ ಮೋಟಾರ್ ಇಂಡಿಯಾ (Yamaha Motor India ) ಇತ್ತೀಚೆಗೆ ಫಾಸಿನೋ 125 ಫೈ ಹೈಬ್ರಿಡ್ (Fascino 125 Fi Hybrid), ರೇ ಜಡ್ಆರ್ 125 ಎಫ್ಐ (Ray ZR 125 FI), ರೇ ಜಡ್ಆರ್ ಸ್ಟ್ರೀಟ್ ರ್ಯಾಲಿ 125 ಎಫ್ಐ (Ray ZR Street Rally 125 FI) ಅನ್ನು ಬಿಡುಗಡೆ ಮಾಡಿದೆ.

Written by - Yashaswini V | Last Updated : Sep 11, 2021, 02:12 PM IST
  • ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಮಾರಾಟವನ್ನು ಹೆಚ್ಚಿಸಲು ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್ ನೀಡುತ್ತಿದೆ
  • ಈ ಕೊಡುಗೆ ಈ ತಿಂಗಳ ಅಂತ್ಯದವರೆಗೆ ಅಂದರೆ 30 ಸೆಪ್ಟೆಂಬರ್ ವರೆಗೆ ಮಾನ್ಯವಾಗಿರುತ್ತದೆ
  • ನೀವು ಯಮಹಾ ವಾಹನವನ್ನು ಖರೀದಿಸುವ ಯೋಚನೆಯಲ್ಲಿದ್ದರೆ, ಈ ಅವಕಾಶವು ನಿಮಗೆ ಪ್ರಯೋಜನಕಾರಿಯಾಗಬಹುದು
Yamaha Festive Offers:  ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್ ಘೋಷಿಸಿದ ಯಮಹಾ ಮೋಟಾರ್ ಇಂಡಿಯಾ  title=
Yamaha Festive Offers

ನವದೆಹಲಿ: Yamaha Announces Festive Offers- ಹಬ್ಬದ ಸಮಯದಲ್ಲಿ ಯಮಹಾ ಮೋಟಾರ್ ಇಂಡಿಯಾ  (Yamaha Motor India)  ಕಂಪನಿಯು ಮಾರಾಟವನ್ನು ಹೆಚ್ಚಿಸಲು ದ್ವಿಚಕ್ರ ವಾಹನಗಳ ಮೇಲೆ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ. ಯಮಹಾ ಹಬ್ಬದ ಸೀಸನ್ ಆರಂಭದೊಂದಿಗೆ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಈ ಕೊಡುಗೆ ಭಾರತದಲ್ಲಿ ಲಭ್ಯವಿರುವ ಯಮಹಾ ಸ್ಕೂಟರ್‌ಗಳಲ್ಲಿ ಮಾನ್ಯವಾಗಿರುತ್ತದೆ. ಯಮಹಾ ಮೋಟಾರ್ ಇಂಡಿಯಾ (Yamaha Motor India) ಇತ್ತೀಚೆಗೆ ಫಾಸಿನೋ 125 ಫೈ ಹೈಬ್ರಿಡ್ (Fascino 125 Fi Hybrid), ರೇ ಜಡ್ಆರ್ 125 ಎಫ್ಐ (Ray ZR 125 FI), ರೇ ಜಡ್ಆರ್ ಸ್ಟ್ರೀಟ್ ರ್ಯಾಲಿ 125 ಎಫ್ಐ (Ray ZR Street Rally 125 FI) ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್‌ಗಳಿಗೂ ಈ ಕೊಡುಗೆ ಅನ್ವಯವಾಗುತ್ತದೆ. 

ಈ ಕೊಡುಗೆ ಈ ತಿಂಗಳ ಅಂತ್ಯದವರೆಗೆ ಅಂದರೆ 30 ಸೆಪ್ಟೆಂಬರ್ ವರೆಗೆ ಮಾನ್ಯವಾಗಿರುತ್ತದೆ. ನೀವು ಯಮಹಾ ವಾಹನವನ್ನು ಖರೀದಿಸುವ ಯೋಚನೆಯಲ್ಲಿದ್ದರೆ, ಈ ಅವಕಾಶವು ನಿಮಗೆ ಪ್ರಯೋಜನಕಾರಿಯಾಗಬಹುದು. ಕೊಡುಗೆಯೊಂದಿಗೆ, ಕಂಪನಿಯು ಗ್ರಾಹಕರಿಗೆ ಒಂದು ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ಗೆಲ್ಲುವ ಅವಕಾಶವನ್ನೂ ನೀಡುತ್ತಿದೆ. ಎಫ್‌ಐ ಹೈಬ್ರಿಡ್, ಯಮಹಾ ರೇ ಜಡ್ಆರ್ 125 ಎಫ್‌ಐ (Ray ZR 125 FI), ಯಮಹಾ ರೇ ಜಡ್ಆರ್ ಸ್ಟ್ರೀಟ್ ರ್ಯಾಲಿ 125 ಎಫ್‌ಐ  (Ray ZR Street Rally 125 FI) ಮತ್ತು ಯಮಹಾ ಫಾಸಿನೋ 125 ಎಫ್‌ಐಗಳ ಹೈಬ್ರಿಡ್  (Fascino 125 Fi Hybrid) ಅಲ್ಲದ ಆವೃತ್ತಿಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. 

ಇದನ್ನೂ ಓದಿ- IRCTC Tickets Booking: ರೈಲು ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯಲ್ಲಿ ಬದಲಾವಣೆ, ಈಗ ಟಿಕೆಟ್ ಬುಕಿಂಗ್‌ಗೆ ಈ ದಾಖಲೆಗಳು ಅತ್ಯಗತ್ಯ

ಈ ರೀತಿ ಒಂದು ಲಕ್ಷ ರೂಪಾಯಿಗಳನ್ನು ಗೆಲ್ಲಬಹುದು:
ಜುಲೈ 2021 ರಲ್ಲಿ ಬಿಡುಗಡೆಯಾಗಲಿರುವ ಯಮಹಾ ಫಾಸಿನೋ 125 ಫೈ ಹೈಬ್ರಿಡ್ (Yamaha Fascino 125 Fi Hybrid) ಮೇಲೆ ಕಂಪನಿಯು 5,000ರೂ. ಕ್ಯಾಶ್ ಬ್ಯಾಕ್ ಅಥವಾ 999ರೂ. ಡೌನ್ ಪೇಮೆಂಟ್ ಘೋಷಿಸಿದೆ. ಇದರೊಂದಿಗೆ, ಕಂಪನಿಯು ಗ್ರಾಹಕರಿಗೆ ಮೊದಲಿನಿಂದ ಹಣ ಗಳಿಸುವ ಮತ್ತು ಆಫರ್‌ಗಳನ್ನು ಗೆಲ್ಲುವ ಅವಕಾಶವನ್ನು ಕೂಡ ನೀಡುತ್ತಿದೆ. ವಾಸ್ತವವಾಗಿ, ತಮಿಳುನಾಡು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿ ಈ ವಾಹನವನ್ನು ಖರೀದಿಸುವಾಗ ಗ್ರಾಹಕರಿಗೆ ಸ್ಕ್ರ್ಯಾಚ್ ಮತ್ತು ವಿನ್ ಆಫರ್ ನೀಡಲಾಗುತ್ತಿದೆ. ಅದರ ಅಡಿಯಲ್ಲಿ ವಾಹನ ಖರೀದಿಸುವವರು ಒಂದು ಲಕ್ಷ ರೂಪಾಯಿಗಳನ್ನು ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ. 

ಇದನ್ನೂ ಓದಿ- Aadhaar Card: ವಾಹನದ ಸಂಖ್ಯೆಯಂತೆ, ಈಗ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಾ? UIDAI ನೀಡಿದೆ ಈ ಮಾಹಿತಿ

ಈ ಕಾರಣದಿಂದಾಗಿ, ಸೆಪ್ಟೆಂಬರ್‌ನಲ್ಲಿ ಸ್ಕೂಟರ್ ಖರೀದಿಸುವುದು ಲಾಭದಾಯಕ ವ್ಯವಹಾರವಾಗಿದೆ:
ಯಮಹಾ ಮೋಟಾರ್ ಇಂಡಿಯಾ (Yamaha Motor India) ಗ್ರಾಹಕರನ್ನು ಸೆಳೆಯಲು ಈ ಹಿಂದೆಯೂ ಕೂಡ ಇಂತಹ ಕೊಡುಗೆಗಳನ್ನು ನೀಡಿತ್ತು. ಒಂದೆಡೆ ಇದು ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ,  ಮತ್ತೊಂದೆಡೆ, ಅಂತಹ ಸಂದರ್ಭಗಳಲ್ಲಿ, ಕಂಪನಿಯ ವಾಹನಗಳ ಮಾರಾಟವೂ ಹೆಚ್ಚಾಗುತ್ತದೆ. ವಿಶೇಷ ವಿಷಯವೆಂದರೆ ಸೆಪ್ಟೆಂಬರ್ 2021 ರಲ್ಲಿ ಯಮಹಾ ಸ್ಕೂಟರ್ ಖರೀದಿಸಲು ಯೋಜಿಸುತ್ತಿರುವ ಗ್ರಾಹಕರು 2,999ರೂ.ಗಳ ನಿಶ್ಚಿತ ಉಡುಗೊರೆಯನ್ನು ಪಡೆಯುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News