ನವದೆಹಲಿ: ಮದುವೆ ಮನೆಯಲ್ಲಿ ಸಂಭ್ರಮದ ವಾತಾವರಣವೇ ತುಂಬಿ ತುಳುಕುತ್ತಿರುತ್ತದೆ. ಡ್ಯಾನ್ಸ್, ಹಾಡು, ಮೋಜು-ಮಸ್ತಿ, ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹ ಮಹೋತ್ಸವ(Indian Wedding Program)ಗಳು ಪೂರ್ಣಗೊಳ್ಳುವುದಿಲ್ಲ. ಬಂಧು-ಬಳಗ, ಸ್ನೇಹಿತರು, ಸಂಬಂಧಿಕರು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಖುಷಿಯನ್ನು ಹೆಚ್ಚಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮದುವೆ ಮನೆಯಲ್ಲಿ ನಡೆಯುವ ಹಲವು ಪ್ರಸಂಗಗಳ ವಿಡಿಯೋಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿವೆ. ಅದೇ ರೀತಿಯ ಮತ್ತೊಂದು ವಿಡಿಯೋ ನೆಟಿಜನ್ ಗಳ ಗಮನ ಸೆಳೆಯುತ್ತಿದೆ.


COMMERCIAL BREAK
SCROLL TO CONTINUE READING

ಹೌದು, ಮದುವೆಯಾದ ಜೋಶ್ ನಲ್ಲಿ ವೇದಿಕೆ ಮೇಲೆಯ ವಧು-ವರರು(Bride and Groom) ಸಖತ್ ಆಗಿ ಸ್ಟೆಪ್ಸ್ ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವರಮಾಲಾ ಸಮಾರಂಭ ಆರಂಭವಾಗುವ ಮುನ್ನ ವೇದಿಕೆಯಲ್ಲಿ ವಧು-ವರರು ಸಂಗಡಿಗರ ಜೊತೆಗೆ ಭಾಂಗ್ರಾ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.  



ಇದನ್ನೂ ಓದಿ: ಎರಡು ಅಗ್ಗದ Planಗಳನ್ನು ಕೈ ಬಿಟ್ಟ Jio,ಜೊತೆಗೆ ಈ ಆಫರ್ ಕೂಡಾ ಸ್ಥಗಿತ


ಮದುವೆಯಾದ ಖುಷಿಯಲ್ಲಿ ವರನಂತೂ ಫುಲ್ ಜೋಶ್ ನಲ್ಲಿರುತ್ತಾನೆ. ಹೀಗಾಗಿ ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದಾನೆ. ಆದರೆ ವಧು ಆರಂಭದಲ್ಲಿ ಸ್ವಲ್ಪ ನಾಚಿ ನೀರಾಗುತ್ತಾಳೆ. ಇತರ ನೃತ್ಯಗಾರರ ಜೊತೆಗೆ ವರ ಸಖತ್ ಆಗಿ ಭಾಂಗ್ರಾ ಬೀಟ್‌ಗಳಿಗೆ ಡ್ಯಾನ್ಸ್(Bhangra Dance) ಮಾಡಿದ್ದಾನೆ. ವರನ ಹುರುಪು ಮತ್ತು ಉತ್ಸಾಹ ನೋಡಿದ ನಂತರ ವಧು ಕೂಡ ಆತನ ಜೊತೆ ಡ್ಯಾನ್ಸ್ ಮಾಡಿದ್ದಾಳೆ. ನೃತ್ಯದ ನಂತರ ನವದಂಪತಿ ವರಮಾಲಾ ಸಮಾರಂಭದಲ್ಲಿ ಹಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ವೇದಿಕೆಗೆ ಆಗಮಿಸಿದ ಅವರ ಸ್ನೇಹಿತರು ಮತ್ತು ಸಂಬಂಧಿಕರು ಶುಭ ಹಾರೈಸಿದ್ದಾರೆ.


ಇದನ್ನೂ ಓದಿ: SBI Platinum Deposits : ಸೆಪ್ಟೆಂಬರ್ 14 ರೊಳಗೆ ಎಸ್ ಬಿಐ ಯಲ್ಲಿ ಈ ವಿಶೇಷ ಡಿಪಾಸಿಟ್ ಮಾಡಿಸಿದರೆ ಸಿಗಲಿದೆ ಅಧಿಕ ಬಡ್ಡಿ


ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ನೂತನ ವಧು-ವರರ ಮದುವೆ ಜೋಶ್ ಗೆ ಅನೇಕ ನೆಟಿಜನ್ ಗಳು ಫಿದಾ ಆಗಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಶುಭ ಹಾರೈಸಿದ್ದಾರೆ. ಸಾವಿರಾರು ಜನರು ವಿಡಿಯೋವನ್ನು ಲೈಕ್ ಮಾಡಿದ್ದು, ಅನೇಕರು ಶೇರ್ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.