ನವದೆಹಲಿ : ರಿಲಯನ್ಸ್ ಜಿಯೋ ಅಗ್ಗದ ಪ್ಲಾನ್ ಗಳು (Jio recharge plan) ಮತ್ತು ಆಫರ್ ಗಳನ್ನು ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಜಿಯೋ ಯಾವಾಗಲೂ ತನ್ನ ಪ್ಲಾನ್ ಗಳನ್ನು ಬದಲಾಯಿಸುತ್ತಲೇ ಇರುತ್ತದೆ. ಈಗ ರಿಲಯನ್ಸ್ ಜಿಯೋ (Reliance Jio) ತನ್ನ ಎರಡು ಅಗ್ಗದ ಯೋಜನೆಗಳನ್ನು ನಿಲ್ಲಿಸಿದೆ. ಆ ಪ್ಲಾನ್ ಗಳೆಂದರೆ 39 ರೂ ಮತ್ತು 69 ರೂ . ಪ್ಲಾನ್. ಈ ಎರಡೂ ಯೋಜನೆಗಳು ಹೆಚ್ಚು ಪ್ರಸಿದ್ದಿಯಾಗಿದ್ದು, ಬಹಳಷ್ಟು ಜನರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಆದರೆ, ಈಗ ಕಂಪನಿ ಈ ಎರಡು ಪ್ಲಾನ್ ಗಳನ್ನೂ ನಿಲ್ಲಿಸಿದೆ. ಇದರ ಜೊತೆ, ಜಿಯೋ ಭರ್ಜರಿ ಆಫರ್ ಅನ್ನು ಕೂಡ ಸ್ಥಗಿತಗೊಳಿಸಿದೆ. ಕೆಲವು ಸಮಯದ ಹಿಂದೆ, ಜಿಯೋ 'ಬೈ ಒನ್ ಗೆಟ್ ಒನ್ ಫ್ರೀ ಆಫರ್ ಅನ್ನು ಆರಂಭಿಸಿತ್ತು. ಈಗ ಅದನ್ನು ಕೂಡಾ ನಿಲ್ಲಿಸಲಾಗಿದೆ.
ಜಿಯೋದ 39 ರೂ ಪ್ಲಾನ್ನ ಪ್ರಯೋಜನಗಳು :
ಜಿಯೋ ಫೋನಿನ ಅಗ್ಗದ ಪ್ಲಾನ್ (Jio recharge plan) ಆಗಿರುವ 39 ರೂ. ಯೋಜನೆಯಲ್ಲಿ, ಬಳಕೆದಾರರು 14 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ದಿನಕ್ಕೆ 100MB ಡೇಟಾ ಕೂಡಾ ಸಿಗುತ್ತಿತ್ತು. ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಮಾಡುವ ಸೌಲಭ್ಯವೂ ಇತ್ತು. ಈ ಯೋಜನೆಯಲ್ಲಿ ಒಟ್ಟು 1.4GB ಡೇಟಾ ಲಭ್ಯವಿತ್ತು. ಇದಲ್ಲದೇ, ಜಿಯೋ ಆಪ್ಗಳ (Jio app) ಉಚಿತ ಚಂದಾದಾರಿಕೆಯೂ ಈ ಯೋಜನೆಯಲ್ಲಿ ಸಿಗುತ್ತಿತ್ತು.
ಇದನ್ನೂ ಓದಿ : SBI Platinum Deposits : ಸೆಪ್ಟೆಂಬರ್ 14 ರೊಳಗೆ ಎಸ್ ಬಿಐ ಯಲ್ಲಿ ಈ ವಿಶೇಷ ಡಿಪಾಸಿಟ್ ಮಾಡಿಸಿದರೆ ಸಿಗಲಿದೆ ಅಧಿಕ ಬಡ್ಡಿ
69 ರೂ ಪ್ಲಾನ್ನ ಪ್ರಯೋಜನಗಳು :
69 ರೂ ಪ್ಲಾನ್ (Jio Plan) ಕೂಡ ಜಿಯೋ ವೆಬ್ಸೈಟ್ನಲ್ಲಿ ಕಾಣಿಸುತ್ತಿಲ್ಲ. ಈ ಯೋಜನೆಯಲ್ಲಿ ಕೂಡಾ14 ದಿನಗಳ ವ್ಯಾಲಿಡಿಟಿ ಇತ್ತು. ದಿನಕ್ಕೆ 0.5 GB ಡೇಟಾ ಮತ್ತು ಉಚಿತ ಕರೆ ಮಾಡುವ ಸೌಲಭ್ಯವೂ, ಈ ನೆಟ್ವರ್ಕ್ನಲ್ಲಿ ಸಿಗುತ್ತಿತ್ತು. ಅಂದರೆ, ಇದರಲ್ಲಿ 7 ಜಿಬಿ ಡೇಟಾ ಸಿಗುತ್ತಿತ್ತು. ಇದಲ್ಲದೇ, ಜಿಯೋ ಆಪ್ಗಳ ಉಚಿತ ಚಂದಾದಾರಿಕೆಯೂ ಈ ಯೋಜನೆಯಲ್ಲಿ ಲಭ್ಯವಿತ್ತು.
ಈಗ ಈ ಪ್ಲಾನ್ ಗಳ ಬದಲಿಗೆ 75 ರೂ . ರೀಚಾರ್ಜ್ ಮಾಡಬೇಕಾಗುತ್ತದೆ :
ಈಗ ಬಳಕೆದಾರರು 75 ರೂಪಾಯಿಗಳ ಯೋಜನೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಲ್ಲಿ 28 ದಿನಗಳ ವ್ಯಾಲಿಡಿಟಿ ಇರುತ್ತದೆ. ದಿನಕ್ಕೆ 100MB ಡೇಟಾ ಮತ್ತು ಅನ್ಲಿಮಿಟೆಡ್ ಕಾಲಿಂಗ್ (Unlimited calling) ಸೌಲಭ್ಯ ಇರುತ್ತದೆ. ಇದಲ್ಲದೇ ಜಿಯೋ ಆಪ್ಗಳ ಉಚಿತ ಚಂದಾದಾರಿಕೆಯೂ ಲಭ್ಯವಿರುತ್ತದೆ. ಎಲ್ಲಾ ಸೌಲಭ್ಯಗಳು 39ರೂ. ಪ್ಲಾನ್ ನಂತೆಯೇ ಇದ್ದು, ಪ್ಲಾನ್ ವ್ಯಾಲಿಡಿಟಿ ಮಾತ್ರ 28 ದಿನಗಳವರೆಗೆ ಇರಲಿದೆ.
ಇದನ್ನೂ ಓದಿ : EPF Withdrawal Claim: ಈ 5 ಕಾರಣಗಳಿಂದಾಗಿ ನಿಮ್ಮ EPF ಕ್ಲೇಮ್ ಅನ್ನು ತಿರಸ್ಕರಿಸಬಹುದು, ಇಲ್ಲಿದೆ ಫುಲ್ ಡೀಟೇಲ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.