ಚೆನ್ನೈ: ಮದುವೆಯಲ್ಲಿ ಸೋದರ ಸಂಬಂಧಿಯೊಂದಿಗೆ ನೃತ್ಯ ಮಾಡಿದ್ದಕ್ಕೆ ವಧುವಿಗೆ ಭಾವಿ ಪತಿಯೊಬ್ಬ ಕಪಾಳಮೋಕ್ಷ(Groom Allegedly Slaps Bride) ಮಾಡಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ. ಸಾರ್ವಜನಿಕವಾಗಿ ತನ್ನ ಭಾವಿ ಗಂಡನಿಂದ ಅವಮಾನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ವಧು ಮದುವೆಯನ್ನೇ ರದ್ದುಗೊಳಿಸಿದ್ದು, ನಿಗದಿತ ದಿನಾಂಕ ಮತ್ತು ಸಮಯಕ್ಕೆ ತಮ್ಮ ಸಂಬಂಧಿ ಯುವಕನೊಂದಿಗೆ ಮದುವೆ(Bride Marries Another)ಯಾಗಿದ್ದಾಳೆ.


COMMERCIAL BREAK
SCROLL TO CONTINUE READING

ಈ ಘಟನೆಯಿಂದ ನಿರಾಸೆಗೊಳಗಾದ ವರ ಇದೀಗ ಪಂರುತಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಆರತಕ್ಷತೆ ಮತ್ತು ಮದುವೆಗಾಗಿ ಖರ್ಚು ಮಾಡಿರುವ 7 ಲಕ್ಷ ರೂ. ಪರಿಹಾರ(Groom Seeks Compensation) ನೀಡುವಂತೆ ಕೋರಿದ್ದಾನೆ. ಅಲ್ಲದೆ ವಧು ಮತ್ತು ಆಕೆಯ ಕುಟುಂಬದವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೂಡ ಮಾಡಿದ್ದಾನೆ.   


ಇದನ್ನೂ ಓದಿ: Funny Video : ಟಗರಿನ ಜೊತೆ ಮೋಜು ಮಸ್ತಿಗಿಳಿದ ವ್ಯಕ್ತಿ, ಇಲ್ಲಿದೆ ನಕ್ಕು ನಗಿಸೋ ವಿಡಿಯೋ


ಪೊಲೀಸರ ಮಾಹಿತಿ ಪ್ರಕಾರ, ಚೆನ್ನೈ(Tamil Nadu)ನ ಖಾಸಗಿ ಸಂಸ್ಥೆಯೊಂದರಲ್ಲಿ ಹಿರಿಯ ಇಂಜಿನಿಯರ್ ಆಗಿ ಉದ್ಯೋಗದಲ್ಲಿರುವ ಪಂರುತಿ ಬಳಿಯ ಪೆರಿಯಕಟ್ಟುಪಾಳ್ಯಂ ಮೂಲದ ಯುವಕ ಮತ್ತು ಪನ್ರುತಿಯ ಸ್ನಾತಕೋತ್ತರ ಪದವಿ ಪಡೆದಿರುವ ಮಹಿಳೆ ಪೋಷಕರು ಮತ್ತು ಎರಡೂ ಕುಟುಂಬದ ಹಿರಿಯರ ಆಶೀರ್ವಾದದೊಂದಿಗೆ ನವೆಂಬರ್ 6 ರಂದು ಔಪಚಾರಿಕವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರಂತೆ.


ಜನವರಿ 19ರಂದು ಪಂರುತಿಯಲ್ಲಿ ಆರತಕ್ಷತೆ ಮತ್ತು ಮರುದಿನ ಕಡಂಪುಲಿಯೂರು ಗ್ರಾಮದಲ್ಲಿ ಮದುವೆ ಸಮಾರಂಭವನ್ನು ನಡೆಸಲು ಕುಟುಂಬಗಳು ನಿರ್ಧರಿಸಿದ್ದವು. ಕೆಲವು ಸಮುದಾಯಗಳ ಸಂಪ್ರದಾಯದಂತೆ ಮದುವೆಯ ಹಿಂದಿನ ದಿನ ಆರತಕ್ಷತೆಗಾಗಿ ಸಂಘಟಕರು ಡಿಜೆಯನ್ನು ಸಹ ಏರ್ಪಡಿಸಿದ್ದರು. ವರ ಮತ್ತು ವಧು ಸಂತೋಷದಿಂದ ಡಿಜೆ ಟ್ಯೂನ್‌ಗಳಿಗೆ ನೃತ್ಯ(Wedding Dance)ಮಾಡುತ್ತಿದ್ದರು. ಈ ಮಧ್ಯೆ ವಧುವಿನ ಸೋದರಸಂಬಂಧಿಯೊಬ್ಬ ಬಂದು ಆಕೆಯ ಕೈಗಳನ್ನು ಹಿಡಿದು ನೃತ್ಯ ಮಾಡಿದ್ದಾನೆ. ತನ್ನ ಭಾವಿ ಪತ್ನಿಯ ಕೈಹಿಡಿದು ಡ್ಯಾನ್ಸ್ ಮಾಡಿದ್ದು ವರನ ಕಣ್ಣು ಕೆಂಪಗಾಗಿಸಿದೆ. ಇದರಿಂದ ಕೆರಳಿದ ಆತ ಎಲ್ಲವರ ಮುಂದೆಯೇ ವಧುವಿಗೆ ಕಪಾಳಮೋಕ್ಷ ಮಾಡಿದ್ದಾನೆ.


ವರನ ಕಪಾಳಮೋಕ್ಷದಿಂದ ಆಘಾತ ಮತ್ತು ಅವಮಾನಕ್ಕೆ ಒಳಗಾದ ವಧು ಕೂಡಲೇ ಮದುವೆಯನ್ನು ರದ್ದು(Wedding Called Off)ಗೊಳಿಸಿದ್ದಾಳೆ. ಆಕೆಯ ನಿರ್ಧಾರವನ್ನು ಪೋಷಕರು ಸಹ ಅನುಮೋದಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ತಮ್ಮ ಸಂಬಂಧಿಕರಲ್ಲೇ ಒಬ್ಬ ಸೂಕ್ತ ವರನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದು, ಮರುದಿನ ಬೆಳಿಗ್ಗೆ ವಧು ನಿಗದಿತ ಸಮಯ, ದಿನಾಂಕ ಮತ್ತು ಹೊಸ ಸ್ಥಳದಲ್ಲಿ ಹೊಸ ವರನ ಜೊತೆಗೆ ಮದುವೆಯಾಗಿದ್ದಾಳೆ. ಇತ್ತ ವರ ಕೂಡ ವಧು ಮತ್ತು ಆಕೆಯ ಕುಟುಂಬದ ವಿರುದ್ಧ ನೀಡಿರುವ ದೂರಿನಲ್ಲಿ ಆರತಕ್ಷತೆ ಹಾಗೂ ಮದುವೆಗೆ 7 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಿದ್ದೇವೆ. ತಮಗೆ ಪರಿಹಾರ ಕೊಡಿಸಲು ಸಹಾಯ ಮಾಡಬೇಕೆಂದು ಪೊಲೀಸರ ಬಳಿ ಮನವಿ ಮಾಡಿದ್ದಾನೆ.


ಇದನ್ನೂ ಓದಿ: Anand Singh : ಆನಂದ್ ಸಿಂಗ್ ಉಸ್ತುವಾರಿ ಬದಲಾವಣೆ : ಅಭಿಮಾನಿಗಳಿಂದ ಭುಗಿಲೆದ್ದ ಆಕ್ರೋಶ!


ಈ ಬಗ್ಗೆ ಮಾತನಾಡಿರುವ ಪಂರುತಿ ಮಹಿಳಾ ಪೊಲೀಸ್(Panruti Police Station) ಇನ್ಸ್‌ ಪೆಕ್ಟರ್ ಎಸ್.ವಲ್ಲಿ, ‘ತನ್ನ ಸೋದರಸಂಬಂಧಿಯೊಂದಿಗೆ ನೃತ್ಯ ಮಾಡಿದ್ದಕ್ಕೆ ವಧುವಿಗೆ ವರನು ಕಪಾಳಮೋಕ್ಷ ಮಾಡಿದ್ದಾನೆಂಬ ಆರೋಪ ಕೇಳಿಬಂದಿದೆ. ನಂತರ ವಧು ಆ ವರನನ್ನು ತಿರಸ್ಕರಿಸಿದ್ದು, ಆಕೆಯ ಪೋಷಕರು ಬೇರೆ ಪುರುಷನೊಂದಿಗೆ ಆಕೆಯ ವಿವಾಹ ಮಾಡಿಸಿದ್ದಾರೆ. ನಾವು ಎರಡೂ ಕಡೆಯಿಂದ ದೂರುಗಳನ್ನು ಸ್ವೀಕರಿಸಿದ್ದು, ವಿಚಾರಣೆಗೆ ಬರುವಂತೆ ಎರಡು ಕಡೆಯ ಕಕ್ಷಿದಾರರಿಗೆ ಸೂಚಿಸಿದ್ದೇವೆ’ ಅಂತಾ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.