ನವದೆಹಲಿ: ಜನವರಿ 27 ರಂದು ಹೂಡಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿರುವುದರಿಂದ ಈ ವಾರಾಂತ್ಯದ ವೇಳೆಗೆ ಏರ್ ಇಂಡಿಯಾವನ್ನು (Air India) ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
"ಏರ್ ಇಂಡಿಯಾದ ಹೂಡಿಕೆಯನ್ನು 27 ಜನವರಿ 2022 ರಂದು ಮಾಡಲು ನಿರ್ಧರಿಸಲಾಗಿದೆ. ಜನವರಿ 20 ರಂದು ಮುಕ್ತಾಯವಾದ ಬ್ಯಾಲೆನ್ಸ್ ಶೀಟ್ ಅನ್ನು ಇಂದು ಜನವರಿ 24 ರಂದು ಒದಗಿಸಬೇಕು. ಆದ್ದರಿಂದ ಅದನ್ನು ಅವರು ಪರಿಶೀಲಿಸಬಹುದು ಮತ್ತು ಯಾವುದೇ ಬದಲಾವಣೆಗಳನ್ನು ಬುಧವಾರದಂದು ಕಾರ್ಯಗತಗೊಳಿಸಬಹುದು" ಎಂದು ಏರ್ ಇಂಡಿಯಾದ ಹಣಕಾಸು ನಿರ್ದೇಶಕ ವಿನೋದ್ ಹೆಜ್ಮಾಡಿ ಉದ್ಯೋಗಿಗಳಿಗೆ ತಿಳಿಸಿದ್ದಾರೆ.
"ನಾವು ಹೂಡಿಕೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ಎಲ್ಲಾ ಬೆಂಬಲವನ್ನು ನೀಡುವಲ್ಲಿ ಇದುವರೆಗೆ ಅತ್ಯುತ್ತಮವಾದ ಕೆಲಸವನ್ನು ಮಾಡಿದ್ದೇವೆ. ಮುಂದಿನ ಮೂರು ದಿನಗಳು ನಮ್ಮ ಇಲಾಖೆಗೆ ಕಠಿಣವಾಗಿರುತ್ತದೆ. ನಾವು ಕೈಬಿಡುವ ಮೊದಲು ಈ ಕೊನೆಯ ಮೂರು ನಾಲ್ಕು ದಿನಗಳಲ್ಲಿ ನಿಮ್ಮ ಅತ್ಯುತ್ತಮವಾದ ಕೆಲಸ ನೀಡಲು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ" ಹೆಜಮಾಡಿ ಹೇಳಿದ್ದಾರೆ.
ನೌಕರರ ಸಹಕಾರವನ್ನು ಕೋರಿದ ಹೆಜಮಾಡಿ, "ನಮಗೆ ನೀಡಿದ ಕೆಲಸವನ್ನು ಪೂರ್ಣಗೊಳಿಸಲು ನಾವು ತಡರಾತ್ರಿಯಲ್ಲಿ ಕೆಲಸ ಮಾಡಬೇಕಾಗಬಹುದು. ನಾನು ಎಲ್ಲರ ಸಹಕಾರವನ್ನು ಕೋರುತ್ತೇನೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'Pandemic' ನಿಂದ 'Endemic' ನತ್ತ ಸಾಗುತ್ತಿರುವ ಕೊರೊನಾ: AIIMS ರೋಗಶಾಸ್ತ್ರಜ್ಞರಿಂದ ಹೊರಬಿತ್ತು ಮಹತ್ವದ ಮಾಹಿತಿ
ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು, "ಕೆಲವು ಕಾರಣದಿಂದ ಜನವರಿ 27 ರ ಸಮಯವನ್ನು ಮುಂದೂಡಿದರೆ ತಿಂಗಳ ಅಂತ್ಯದವರೆಗೆ ವಿತರಣಾ ಪ್ರಕ್ರಿಯೆಯನ್ನು ಮಾಡಬೇಕಾಗಿದೆ" ಎಂದು ಹೇಳಿದರು.
ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯ ನಂತರ, Tata Sons Pvt Ltd ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ Talace Pvt Ltd ಗೆ ಸರ್ಕಾರವು ಕಳೆದ ವರ್ಷ ಅಕ್ಟೋಬರ್ 8 ರಂದು ಏರ್ ಇಂಡಿಯಾವನ್ನು18,000 ಕೋಟಿ ರೂ.ಗೆ ಮಾರಾಟ ಮಾಡಿತ್ತು.
2021 ರ ಅಕ್ಟೋಬರ್ 11ರಂದು ಟಾಟಾ ಸಮೂಹಕ್ಕೆ ಲೆಟರ್ ಆಫ್ ಇಂಟೆಂಟ್ (LoI) ನೀಡಲಾಯಿತು. 18,000 ಕೋಟಿ ರೂ.ಗೆ ಮಾರಾಟ ಮಾಡುವ ಆಸಕ್ತಿ ಇದೆ ಎಂಬ ಪತ್ರವನ್ನು ಕೇಂದ್ರ ಸರ್ಕಾರ ಟಾಟಾ ಸಮೂಹಕ್ಕೆ (Tata Group) ನೀಡಿತು. ಅಕ್ಟೋಬರ್ 25ರಂದು ಷೇರು ಖರೀದಿ ಒಪ್ಪಂದಕ್ಕೆ (SPA) ಸಹಿ ಹಾಕಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.