Viral Photo: ಶರ್ಟ್-ಪ್ಯಾಂಟ್ ಧರಿಸಿ, ತಲೆಗೆ ರುಮಾಲು ಸುತ್ತಿ, ಟಕ್ ನಲ್ಲಿ ಬೀದಿಗಿಳಿದ ಗಜರಾಜನ ಗಾಂಭೀರ್ಯ ನಡೆ
Viral Photo - ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ ಸಾಮಾಜಿಕ ಮಾಧ್ಯಮವಾಗಿರುವ Twitter ನ ತಮ್ಮ ಖಾತೆಯಲ್ಲಿ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಅವರು ಆನೆಯೊಂದರ ಫೋಟೋವೊಂದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಇದೀಗ ಭಾರಿ ವೈರಲ್ ಆಗಿದೆ. ಈ ಆನೆಯ ಫ್ಯಾಶನ್ ಅವತಾರ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ನವದೆಹಲಿ: Viral Photo - ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಸಾಮಾಜಿಕ ಮಾಧ್ಯಮ (Social Media) ತಾಣ ಟ್ವಿಟರ್‌ನಲ್ಲಿ (Twitter) ಬಹಳ ಸಕ್ರಿಯರಾಗಿದ್ದಾರೆ. ಅವರು ಆಗಾಗ ಕೆಲ ಆಶ್ಚರ್ಯಕರ ವೀಡಿಯೊಗಳು ಮತ್ತು ಫೋಟೋಗಳನ್ನು ತಮ್ಮ ಖಾತೆಯ ಮೂಲಕ ಹಂಚಿಕೊಳ್ಳುತ್ತಾರೆ. ಭಾರತದ ಸ್ಥಳೀಯ ಪ್ರತಿಭೆಗಳನ್ನು ಉತ್ತೇಜಿಸಲು ಅವರು ಯಾವಾಗಲು ಮುಂದಿರುತ್ತಾರೆ. . ಅವರ ಖಾತೆಯಲ್ಲಿ ಹಂಚಿಕೊಂಡ ಫೋಟೋ ಹಾಗೂ ವಿಡಿಯೋಗಳು ತಕ್ಷಣಕ್ಕೆ ವೈರಲ್ (Viral Photo)ಆಗುತ್ತವೆ.
ಎಲ್ಲರ ಮನಗೆದ್ದ ಗಜರಾಜನ ಗಜ ನಡೆ
ಭಾರತದಲ್ಲಿ ಆನೆಗಳನ್ನು ವಿವಿಧ ರೂಪಗಳಲ್ಲಿ ಕಾಣಲಾಗುತ್ತದೆ. ಕೆಲವೆಡೆ ಆನೆಗೆ (Elephant) ಪೂಜೆ ಸಲ್ಲಿಸಿದರೆ, ಇನ್ನೂ ಕೆಲ ಕಡೆ ಸವಾರಿ ನಡೆಸಲಾಗುತ್ತದೆ. ಹಲವೆಡೆ ಆನೆಗಳನ್ನು ಸರ್ಕಸ್ ನಲ್ಲಿ ಬಳಸಲಾದರೆ, ಉಳಿದ ಕಡೆಗೆ ಟಿವಿ, ಧಾರಾವಾಹಿ ಹಾಗೂ ಸಿನಿಮಾಗಳಲ್ಲಿಯೂ ಕೂಡ ಆನೆಗಳು ಕಾಣಿಸಿಕೊಳ್ಳುತ್ತವೆ. ತನ್ನ ದೊಡ್ಡ ಗಾತ್ರದ ಶರೀರ ಹಾಗೂ ಉದ್ದನೆಯ ಸೊಂಡಿಗಾಗಿ ಹೆಸರುವಾಸಿಯಾಗಿರುವ ಆನೆಯ ನಡೆ ಭಾರಿ ಗಾಂಭೀರ್ಯತೆಯಿಂದ ಕೂಡಿರುತ್ತದೆ.
ಇದನ್ನೂ ಓದಿ-Viral Video: ವಕೀಲರ ಜಾಗದಲ್ಲಿ ಖಟ್ಲೆ ವಾದ ಮಂಡಿಸಲು ಬಂತು ಮಾರ್ಜಾಲ!
ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ ಸಾಮಾಜಿಕ ಮಾಧ್ಯಮವಾಗಿರುವ Twitter ನ ತಮ್ಮ ಖಾತೆಯಲ್ಲಿ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಅವರು ಆನೆಯೊಂದರ ಫೋಟೋವೊಂದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಇದೀಗ ಭಾರಿ ವೈರಲ್ ಆಗಿದೆ. ಈ ಆನೆಯ ಫ್ಯಾಶನ್ ಅವತಾರ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇನ್ಕ್ರೆಡಿಬಲ್ ಇಂಡಿಯಾ ಎಂಬ ಫೋಟೋ ಶೀರ್ಷಿಕೆಯಡಿ ಆನಂದ್ ಮಹಿಂದ್ರಾ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
Viral Photo) ಆಗಲು ಬಹಳ ಸಮಯಾವಕಾಶ ಬೇಕಾಗಿಲ್ಲ. ಫೋಟೋ ದಲ್ಲಿರುವ ಆನೆ ಬಿಳಿ ಬಣ್ಣದ ಪಾಕೆಟ್ ಇರುವ ಪ್ಯಾಂಟ್ ಜೊತೆಗೆ ನೇರಳೆ ಬಣ್ಣದ ಶರ್ಟ್ ಧರಿಸಿದೆ. ಅಷ್ಟೇ ಅಲ್ಲ ಈ ಆನೆ ಬೆಲ್ಟ್ ಕೂಡ ಧರಿಸಿದ್ದು, ತಲೆಗೆ ಕೆಂಪು ಮತ್ತು ಗೋಲ್ಡನ್ ಕಲರ್ ರುಮಾಲು ಕಟ್ಟಿಕೊಂಡಿದೆ. ಈ ಆನೆಯ ಛಾಯಾಚಿತ್ರಕ್ಕೆ ಇದುವರೆಗೆ ಸುಮಾರು 4 ಸಾವಿರ ಜನ ತಮ್ಮ ಲೈಕ್ ನೀಡಿದ್ದಾರೆ.
ಇದನ್ನೂ ಓದಿ-Viral Video: ತನ್ನ ಮಾಲೀಕನನ್ನು Bike Ride ಮಾಡಿಸುತ್ತಿದೆ ಈ ಶ್ವಾನ, Swag ನೀವು ನೋಡಿ
ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕ ಪ್ರೀತಿ
ಸಾಮಾಜಿಕ ಮಾಧ್ಯಮದಲ್ಲಿ ಆನೆಯ ಈ ಭಾವಚಿತ್ರಕ್ಕೆ ಅಪಾರ ಪ್ರೀತಿ ವ್ಯಕ್ತವಾಗುತ್ತಿದೆ. ಟ್ವಿಟರ್ಥಿಗಳು ಅಪಾರ ಸಂಖ್ಯೆಯಲ್ಲಿ ಇದನ್ನು ರೀಟ್ವೀಟ್ ಮಾಡುತ್ತಿದ್ದಾರೆ ಹಾಗೂ ಕಾಮೆಂಟ್ಸ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಲವರು ಈ ಆನೆಯ ರಾಜನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಉಳಿದವರು ಆನೆಯನ್ನು ಬಂಧಮುಕ್ತಗೊಳಿಸಬೇಕು ಎಂದೂ ಕೂಡ ಹೇಳುತ್ತಿದ್ದಾರೆ.
ಇದನ್ನೂ ಓದಿ-Tiger Laughing Video: ತರಬೇತುದಾರನ ಕಚಗುಳಿಗೆ ನಕ್ಕ ಹುಲಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.