Viral Poster: ಮನೆ ಕೆಲಸದವರು, ಡ್ರೈವರ್ ಅಥವಾ ಡೆಲಿವರಿ ಬಾಯ್ ಗಳು ಲಿಫ್ಟ್ ಬಳಕೆ ಮಾಡಿದರೆ ರೂ.300 ದಂಡ
Shocking News: ಫ್ರೀಲಾನ್ಸ್ ಫೋಟೋ ಜರ್ನಲಿಸ್ಟ್ ವೋಬ್ಬರು ಫೋಟೋವೊಂದನ್ನು ಕ್ಲಿಕ್ಕಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೌದು, ಆ ಪೋಸ್ಟರ್ನಲ್ಲಿ ಮನೆ ಕೆಲಸದವರು, ಡೆಲಿವರಿ ಬಾಯ್ ಗಳಿಗೆ ಲಿಫ್ಟ್ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಬರೆದಿದೆ.
Hyderabad Lift Usage Notice - ಭಾರತದಂತಹ ದೇಶದಲ್ಲಿ ವರ್ಗವಾದ (Classism) ಮತ್ತು ತಾರತಮ್ಯ (Discrimination) ಹೊಸ ಸಂಗತಿಯಲ್ಲ. ಆದರೆ, ದುಃಖಕರ ಸಂಗತಿ ಎಂದರೆ ಮನೆಕೆಲಸದವರು (House Maids), ಡೆಲಿವರಿ (Delivery Boys) ಮಾಡುವವರು ಇತ್ಯಾದಿ ವರ್ಗದವರು ದಿನನಿತ್ಯದ ತಾರತಮ್ಯಕ್ಕೆ ಒಳಗಾಗುವ ಇಂತಹ ಅನೇಕ ನಿದರ್ಶನಗಳಿವೆ. ಇದೇ ರೀತಿಯ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದ್ದು, ಕೆಲಸದ ಮೆಡ್ ಗಳು, ಡೆಲಿವರಿ ಬಾಯ್‌ಗಳು ಮತ್ತು ಚಾಲಕರು ತಾರತಮ್ಯಕ್ಕೆ ಗುರಿಯಾಗಿದ್ದಾರೆ. ಹೈದರಾಬಾದ್‌ನ (Hyderabad) ಹೌಸಿಂಗ್ ಸೊಸೈಟಿಯೊಂದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಛೀಮಾರಿ ಹಾಕಲಾಗುತ್ತಿದೆ. ಕಾರಣ ಈ ಸೊಸೈಟಿ ಕೆಲಸಗಾರರು, ಚಾಲಕರು ಮತ್ತು ಡೆಲಿವರಿ ಬಾಯ್‌ಗಳು ಮುಖ್ಯ ಲಿಫ್ಟ್ ಅನ್ನು ಬಳಸದಂತೆ ನೋಟಿಸ್ ಅಂಟಿಸಿದ್ದು, ಒಂದು ವೇಳೆ ಅವರು ಬಳಸಿದರೆ 300 ರೂ. ದಂಡ ವಿಧಿಸಲಾಗುವುದು ಎಂದು ಹೇಳಿದೆ.
ಸ್ವತಂತ್ರ ಫೋಟೋ ಜರ್ನಲಿಸ್ಟ್ ವೋಬ್ಬರು ಫೋಟೋ ಹಂಚಿಕೊಂಡಿದ್ದಾರೆ
ಸ್ವತಂತ್ರ ಫೋಟೋ ಜರ್ನಲಿಸ್ಟ್ ಹರ್ಷ ವದ್ಲಮಣಿ (Harsha Vadlamani) ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಹೈದರಾಬಾದ್‌ನ ಯಾವುದೋ ಒಂದು ಪ್ರದೇಶದಲ್ಲಿರುವ ಲಿಫ್ಟ್‌ನ ಹೊರಗೆ ಈ ರೀತಿಯ ನೋಟಿಸ್ ನೋಡಿರುವ ಅವರು ಆಶ್ಚರ್ಯಚಕಿತರಾಗಿದ್ದಾರೆ. ಕೂಡಲೆ ಅವರು ಅದರ ಫೋಟೋ ಕ್ಲಿಕ್ಕಿಸಿ, ಅದನ್ನು ತಮ್ಮ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಹರ್ಷ್ ಹಂಚಿಕೊಂಡಿರುವ ಚಿತ್ರದಲ್ಲಿ, 'ಸೇವಕರು, ಚಾಲಕರು ಅಥವಾ ಡೆಲಿವರಿ ಬಾಯ್‌ಗಳು ಮುಖ್ಯ ಲಿಫ್ಟ್ ಅನ್ನು ಬಳಸಿದರೆ, 300 ರೂ ದಂಡ ವಿಧಿಸಲಾಗುವುದು' ಎಂದು ಹೇಳಲಾಗಿದೆ.
ಇದನ್ನೂ ಓದಿ-Accindent Viral Video: ಸಾವಿನ ಬಾಯಿಗೆ ಬಂದ ವ್ಯಕ್ತಿ 'ಯಮರಾಜ'ನಿಂದ ತಪ್ಪಿಸಿಕೊಂಡಿದ್ದು ಹೀಗೆ!
ಫೋಟೋ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್ ನಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದೆ
ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟರ್ ವೈರಲ್ ಆಗಿದ್ದು, ಬಿಲ್ದಿಂಗ್ ಅಥಾರಿಟಿ ತಾರತಮ್ಯ ಧೋರಣೆಯನ್ನು ನೆಟ್ಟಿಗರು ವ್ಯಾಪಕವಾಗಿ ಟೀಕಿಸುತ್ತಿದ್ದಾರೆ. ಆದರೆ, ಇನ್ನೊಂದೆಡೆ ಕೆಲವರು ಈ ವಿಷಯವನ್ನು ಸಮರ್ಥಿಸಿ ಕೊಳ್ಳುತ್ತಿದ್ದಾರೆ.ಇದನ್ನು ಕೋವಿಡ್ ಮುನ್ನೆಚ್ಚರಿಕೆ ಕ್ರಮ ಎಂದು ಅವರು ವಾದಿಸುತ್ತಿದ್ದಾರೆ. ಇತರರು ಇದನ್ನು ದೊಡ್ಡ ವಿಷಯವೆಂದು ಪರಿಗಣಿಸದೆ ಅದೊಂದು 'ಸಾಮಾನ್ಯ ಸೂಚನೆ' ಎಂದು ಹೇಳುತ್ತಿದ್ದಾರೆ. ಕೆಲವರು ಪೋಸ್ಟರ್ ಅನ್ನು ಡೆಲಿವರಿ ಮಾಡುವವರು ಉಗುಳುವ ಮೂಲಕ ಲಿಫ್ಟ್ ಅನ್ನು ಕೊಳಕು ಮಾಡದಂತೆ ನೋಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.
Viral Video: ಬೀದಿ ಬೀದಿಗಳಲ್ಲಿ ಕಡೆಲೆಕಾಯಿ ಮಾರಾಟಕ್ಕಿಳಿದ ಸ್ಟಾರ್ ಕ್ರಿಕೆಟರ್..!
ಕೆಲ ತಿಂಗಳ ಹಿಂದೆಯೂ ಇಂತಹ ಘಟನೆ ನಡೆದಿತ್ತು.
ಕೆಲವು ತಿಂಗಳ ಹಿಂದೆ, ಉದಯಪುರದ ಮಾಲ್‌ನಲ್ಲಿ ಆಹಾರ ವಿತರಣಾ ಅಧಿಕಾರಿಗಳು ಲಿಫ್ಟ್‌ಗಳನ್ನು ಬಳಸುವಂತಿಲ್ಲ ಮತ್ತು ಅದರ ಬದಲಿಗೆ ಮೆಟ್ಟಿಲುಗಳನ್ನು ಬಳಸಬೇಕು ಎಂದು ತಿಳಿಸುವ ಸೂಚನೆಯನ್ನು ಹಾಕಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Viral Video: ಸಹೋದರಿ ಜೊತೆಗೆ ಸಖತ್ ಆಗಿ ವೆಡ್ಡಿಂಗ್ ಡ್ಯಾನ್ಸ್ ಮಾಡಿದ ವಧು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.