Accindent Viral Video: ಸಾವಿನ ಬಾಯಿಗೆ ಬಂದ ವ್ಯಕ್ತಿ 'ಯಮರಾಜ'ನಿಂದ ತಪ್ಪಿಸಿಕೊಂಡಿದ್ದು ಹೀಗೆ!

Accindent Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವೀಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಲ್ಲಿ ಬಸ್ ಮತ್ತು ಸ್ಕೂಟಿ ಚಾಲಕನ ಇಂತಹ ವಿಡಿಯೋ ವೈರಲ್ ಆಗುತ್ತಿದೆ, ಇದನ್ನು ನೋಡಿದ ನಂತರ ನಿಮಗೂ ಒಂದು ಕ್ಷಣ ಎದೆ ಝಲ್ ಎನಿಸುತ್ತದೆ.

Written by - Yashaswini V | Last Updated : Jan 13, 2022, 03:46 PM IST
  • ಬಸ್ಸಿಗೆ ಡಿಕ್ಕಿ ಹೊಡೆದೆ ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿ, ಆದರೆ
  • ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
  • ಅಂತರ್ಜಾಲದಲ್ಲಿ ಆಘಾತಕಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿರುವ ನೆಟ್ಟಿಗರು
Accindent Viral Video: ಸಾವಿನ ಬಾಯಿಗೆ ಬಂದ ವ್ಯಕ್ತಿ 'ಯಮರಾಜ'ನಿಂದ ತಪ್ಪಿಸಿಕೊಂಡಿದ್ದು ಹೀಗೆ!   title=
Mangaluru Road accident viral video (Image credit- Twitter@MangaloreCity)

Accindent Viral Video: ಹಲವರಿಗೆ ವಾಹನ ಚಲಾಯಿಸುವಾಗ ಮುಂದಿನ ವಾಹನವನ್ನು ಓವರ್‌ಟೇಕ್ ಮಾಡುವ ಕ್ರೇಜ್ ಇರುತ್ತದೆ. ಹಲವು ಬಾರಿ ಇಂತಹ ಕ್ರೇಜ್ ಪ್ರಾಣಕ್ಕೆ ಕುತ್ತುತರುತ್ತದೆ. ಅಂತಹದ್ದೇ ಒಂದು ವಿಡಿಯೋ ಕರ್ನಾಟಕದಲ್ಲಿ ಬೆಳಕಿಗೆ ಬಂದಿದೆ. ಕರ್ನಾಟಕದ ಮಂಗಳೂರಿನಲ್ಲಿ ಅತಿ ವೇಗದಲ್ಲಿ ಬಸ್ಸನ್ನು ಓವರ್‌ಟೇಕ್ ಮಾಡಲು ಬಂದ ವ್ಯಕ್ತಿಯೊಬ್ಬರು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಆಘಾತಕಾರಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿರುವ  ಈ ವೀಡಿಯೊದಲ್ಲಿ, ಯು-ಟರ್ನ್ ತೆಗೆದುಕೊಳ್ಳಲು ಬಸ್ ರಸ್ತೆಬದಿಯಲ್ಲಿ ನಿಲ್ಲುವುದನ್ನು ಕಾಣಬಹುದು. ಬಸ್ ಚಾಲಕ ಬೈಕ್ ಸವಾರನನ್ನು ದಾಟಿದ ನಂತರ ರಸ್ತೆಯಲ್ಲಿ ಯಾರೂ ಕಾಣಿಸುತ್ತಿಲ್ಲ, ಆದರೆ ಬಸ್ ಚಾಲಕ ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಕೂಟರ್ ಸವಾರನೊಬ್ಬ ಅತಿವೇಗದಲ್ಲಿ ಬಂದು ಅತಿ ಸಮೀಪದಲ್ಲಿ ಹಾದುಹೋಗುತ್ತಾನೆ. ಅದೃಷ್ಟವಶಾತ್, ಬಸ್ಸಿಗೆ  ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ- Viral Video: ಸಹೋದರಿ ಜೊತೆಗೆ ಸಖತ್ ಆಗಿ ವೆಡ್ಡಿಂಗ್ ಡ್ಯಾನ್ಸ್ ಮಾಡಿದ ವಧು..!

ಬಸ್ಸಿಗೆ ಡಿಕ್ಕಿ ಹೊಡೆದೆ ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿ, ಆದರೆ...
ವೇಗವಾಗಿ ಸಾಗಿಬಂದ ಸ್ಕೂಟರ್ ಸವಾರ ಇನ್ನೇನು ಎಡಬದಿಯ ಗೋಡೆಗೆ ಅಪ್ಪಳಿಸುತ್ತಾನೆ ಎಂದು ತೋರುತ್ತದೆ. ಆದರೆ, ಸ್ಕೂಟರ್ ಸವಾರ  ಸಮತೋಲನ ಕಳೆದುಕೊಳ್ಳದೆ ಅತಿವೇಗದಲ್ಲಿ ಹೊರಬಂದರು.  ಸ್ಕೂಟರ್ ನಿಲ್ಲಿಸುವ ಮೊದಲು ಮರ ಮತ್ತು ಅಂಗಡಿಯ ನಡುವಿನ ಸಣ್ಣ ಅಂತರವನ್ನು ಹಾದು ಮತ್ತೆ ರಸ್ತೆಗೆ ಬರುತ್ತದೆ.  ಆಶ್ಚರ್ಯಕರಿ ಸಂಗತಿ ಎಂದರೆ ಈ ಘಟನೆಯಲ್ಲಿ ಆತನಿಗೆ ಗಾಯವೂ ಆಗಿಲ್ಲ. ಹೆಚ್ಚು ಜನ ಸಂಚಾರವಿಲ್ಲದ ಮಂಗಳೂರಿನ ಎಲಿಯಾರ್ ಪಡವು ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್:
ವಾಸ್ತವವಾಗಿ, ಖಾಸಗಿ ಬಸ್ ಒಂದು ಮಂಗಳವಾರ ಸಂಜೆ ಮಂಗಳೂರಿನಿಂದ ಎಲಿಯಾರ್ ಪಡವು ಕಡೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಹೆಚ್ಚು ವಾಹನಗಳಿರಲಿಲ್ಲ. ಈ ಸಂದರ್ಭದಲ್ಲಿ ಕೆಲವೇ ಸೆಕೆಂಡುಗಳಲ್ಲಿ ನಡೆದ ಈ ಭಯಾನಕ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ವೀಡಿಯೊದಲ್ಲಿ, ಸ್ಕೂಟರ್ ಸವಾರ ಬಸ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡಿರುವುದನ್ನು ಕಾಣಬಹುದು. ಇದೆಲ್ಲವೂ 15 ಸೆಕೆಂಡುಗಳಲ್ಲಿ ಸಂಭವಿಸಿತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಈ ಅಪಘಾತದಲ್ಲಿ 27 ವರ್ಷದ ನರ್ಸಿಂಗ್ ವಿದ್ಯಾರ್ಥಿ ಸಾವನ್ನಪ್ಪಿದ್ದರು.

ಇದನ್ನೂ ಓದಿ- Viral Video: ಬೀದಿ ಬೀದಿಗಳಲ್ಲಿ ಕಡೆಲೆಕಾಯಿ ಮಾರಾಟಕ್ಕಿಳಿದ ಸ್ಟಾರ್ ಕ್ರಿಕೆಟರ್..!

ಜನರು ಅಂತರ್ಜಾಲದಲ್ಲಿ ಕೆಲವು ಆಘಾತಕಾರಿ ಪ್ರತಿಕ್ರಿಯೆಗಳನ್ನು ನೀಡಿದರು:
'ಮಂಗಳೂರಿನ ಎಲಿಯಾರ್ ಪಡವು ಬಳಿ ಯೂ ಟರ್ನ್ ತೆಗೆದುಕೊಳ್ಳುತ್ತಿದ್ದ ಬಸ್‌ಗೆ ಸ್ಕೂಟರ್‌ನಲ್ಲಿ ವೇಗವಾಗಿ ಬಂದ ಯುವಕನೊಬ್ಬ ಪವಾಡ ಸದೃಶ ರೀತಿಯಲ್ಲಿ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿದ ವಿಡಿಯೋ ವೈರಲ್ ಆಗಿದೆ. ನಂತರ ಸ್ಕೂಟರ್ ಮೀನು ಸಂಸ್ಕರಣಾ ಘಟಕದ ಬಾಗಿಲಿಗೆ ಡಿಕ್ಕಿ ಹೊಡೆದು ನಂತರ ಅಂಗಡಿ ಮತ್ತು ಮರದ ನಡುವೆ ಹಾದು ಹೋಗಿದೆ. ಈ ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, 'ಇದು ತುಂಬಾ ಹತ್ತಿರವಾಗಿತ್ತು! ಲಕ್ಕಿ ಮ್ಯಾನ್ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರ, 'ವಾಹನ ಚಾಲಕ ಏನೂ ಆಗಿಲ್ಲ ಎಂಬಂತೆ ಹೋಗುತ್ತಿದ್ದಾನೆ' ಎಂದು ಬರೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News