ಹಿಮಾಚಲ ಪ್ರದೇಶ: ಭಾರೀ ಭೂಕುಸಿತ ಸಂಭವಿಸಿದ ಪರಿಣಾಮ ಬೆಟ್ಟದಿಂದ ಬಂಡೆಗಳು ಉರುಳಿಬಿದ್ದು 9 ಪ್ರವಾಸಿಗರು ದುರ್ಮರಣ ಹೊಂದಿದ್ದಾರೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಸಾಂಗ್ಲಾ ಕಣಿವೆಯಲ್ಲಿ ಈ ದುರ್ಘಟನೆ ನಡೆದಿದೆ. ಪ್ರವಾಸಿಗರು ತಮ್ಮ ಮೊಬೈನಲ್ಲಿ ಸೆರೆಹಿಡಿದಿರುವ ಈ ವಿಡಿಯೋ ನೋಡಲು ಭಯಾನಕವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಕಿನ್ನೌರ್ ಜಿಲ್ಲೆಯ ಸಾಂಗ್ಲಾ ಕಣಿವೆ(Sangla Valley)ಯಲ್ಲಿ ಇದ್ದಕ್ಕಿದ್ದಂತೆ ಭೂಕುಸಿತ ಉಂಟಾಗಿದೆ. ಪರಿಣಾಮ ಬೆಟ್ಟದ ಮೇಲಿಂದ ದೊಡ್ಡ ದೊಡ್ಡ ಬಂಡೆಗಳು ಉರುಳಿ ಬಿದ್ದಿವೆ. ಭಾರೀ ಗಾತ್ರದ ಬಂಡೆಯೊಂದು ಟೆಂಪೊ ಟ್ರಾವಲರ್ ಮೇಲೆ ಬಿದ್ದ ಪರಿಣಾಮ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.  


ಭಾರತದಲ್ಲಿ 42 ಕೋಟಿ ಜನರಿಗೆ ಕರೋನವೈರಸ್ ಲಸಿಕೆ -ಆರೋಗ್ಯ ಸಚಿವಾಲಯ


ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, ಅನೇಕ ವಾಹನಗಳು ಜಖಂಗೊಂಡಿವೆ ಎಂದು ಕಿನ್ನೌರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಾಜು ರಾಮ್ ರಾಣಾ ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 


ದೊಡ್ಡ ಬಂಡೆಯೊಂದು ಬಂದು ಬಿದ್ದ ಪರಿಣಾಮ ಬಟ್ಸೆರಿ ಸೇತುವೆ ಸಂಪೂರ್ಣವಾಗಿ ಜಖಂಗೊಂಡಿದೆ. ಪರ್ವತದ ಮೇಲಿನಿಂದ ಬಂಡೆಗಳು ಕೆಳಕ್ಕೆ ಉರುಳುತ್ತಿರು ವೇಳೆ ಪ್ರವಾಸಿಗರು ಭಯದಿಂದ ಜೋರಾಗಿ ಕಿರುಚಿಕೊಂಡಿದ್ದಾರೆ. ಬೆಟ್ಟದ ಕೆಳಭಾಗದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಅನೇಕ ವಾಹನಗಳ ಮೇಲೆ ಬಂಡೆಗಳು ಉರುಳಿ ಬಿದ್ದಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗುತ್ತಿದೆ.


ಇದನ್ನೂ ಓದಿ: ಪಾಸ್ವರ್ಡ್ ಇಲ್ಲದೆಯೇ ಓಪನ್ ಆಗಲಿದೆ Twitter, ಬಂದಿದೆ ಹೊಸ ವೈಶಿಷ್ಟ್ಯ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ