ನವದೆಹಲಿ: Viral Video - ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸುಂದರ ಮಹಿಳೆಯೊಬ್ಬರು (Beautiful Woman Vaccination Video) Covid-19 ಲಸಿಕೆಯನ್ನು ಹಾಕಿಸಿಕೊಳ್ಳಲು ವ್ಯಾಕ್ಸಿನೆಶನ್ ಸೆಂಟರ್ ಗೆ (Vaccination Centre) ಭೇಟಿ ನೀಡಿದ್ದಾರೆ. ಈ ವೇಳೆ ನರ್ಸಮ್ಮ ನೀಡಿರುವ ಮೆಲ್ಲನೆಯ ಚುಚ್ಚುಮದ್ದಿನ ಅನುಭವ ಮಹಿಳೆಗಾಗಿಲ್ಲ. ವ್ಯಾಕ್ಸಿನ್ ಪ್ರಮಾಣ ನೀಡಿದ ಬಳಿಕ ಮಹಿಳೆಯ ರಿಯಾಕ್ಷನ್ ನೋಡುವ ಹಾಗಿದೆ. ಏಕೆಂದರೆ, ವ್ಯಾಕ್ಸಿನ್ ನೀಡುವ ಮೊದಲು ಆ ಮಹಿಳೆ ತುಂಬಾ ಭಯಭೀತರಾದಂತೆ ತೋರುತ್ತಿತ್ತು. ವ್ಯಾಕ್ಸಿನ್ ನೀಡಿದ ಬಳಿಕ ಆ ಮಹಿಳೆಯೇ ಚುಚ್ಚುಮದ್ದು ಚುಚ್ಚಿರುವ ಅನುಭವವೇ ಆಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಮದುವೆ ಮಂಟಪದಲ್ಲಿಯೇ ವರನ ಕಪಾಳಕ್ಕೆ ಹೊಡೆದ ವಧು..!


ಮಹಿಳೆಯ ಎಕ್ಸ್ ಪ್ರೆಶನ್ ತುಂಬಾ ಸೂಪರಾಗಿದೆ
ಕರೋನಾ ವೈರಲ್ ಎರಡನೇ ಅಲೆಯ ಬಳಿಕ ಲಸಿಕೆ ಪಡೆಯಲು ಜನರು ಮುಗಿಬೀಳುತ್ತಿದ್ದಾರೆ.  ಇತ್ತೀಚೆಗೆ, ಭಾರತವು ಒಂದು ದಿನದಲ್ಲಿ ಒಂದು ಕೋಟಿ ಲಸಿಕೆಗಳನ್ನು ಹಾಕುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಪ್ರಸ್ತುತ, ದೇಶದ ವಿವಿಧ ರಾಜ್ಯಗಳಲ್ಲಿ ಲಸಿಕೆ ಕೇಂದ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಲುಪುತ್ತಿದ್ದಾರೆ. ಈ ಕುರಿತಾದ ಒಂದು ವಿಡಿಯೋ ಇದೀಗ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿದ್ದು, ಪಿಂಕ್ ಕಲರ್ ಸೀರೆ ಉಟ್ಟ ಸುಂದರ ಮಹಿಳೆ ಕರೋನಾ ಲಸಿಕೆ ಪಡೆಯಲು ಲಸಿಕೆ ಕೇಂದ್ರಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ, ಮಹಿಳೆಯ ನೀಡಿರುವ ಅಭಿವ್ಯಕ್ತಿ ವಿಕ್ಷೀಸುವ ಹಾಗಿದೆ. ಏಕೆಂದರೆ ಅವರು ಸೂಜಿಗೆ ತುಂಬಾ ಹೆದರಿ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದರು.


ಇದನ್ನೂ ಓದಿ- Viral Video: ಪುಟ್ಟ ಹುಡುಗಿಯ ಜಿಮ್ನಾಸ್ಟಿಕ್ಸ್ ಕೌಶಲ್ಯಕ್ಕೆ ವೀರೇಂದ್ರ ಸೆಹ್ವಾಗ್ ಫಿದಾ..!


ವ್ಯಾಕ್ಸಿನ್ ಹಾಕಿಸಿಕೊಳ್ಳಲು ವ್ಯಾಕ್ಸಿನ್ ಕೇಂದ್ರಕ್ಕೆ ತಲುಪಿದ ಮಹಿಳೆ
ಮಮತಾ ಮಾಕವಾನಾ ಹೆಸರಿನ ಇನ್ಸ್ಟಾಗ್ರಾಮ್ (Instagram) ಬಳಕೆದಾರರೊಬ್ಬರು ತಮ್ಮ ಖಾತೆಯ ಮೂಲಕ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸುಂದರ ಮಹಿಳೆ ನೀಡಿರುವ ಎಕ್ಸ್ ಪ್ರೆಶನ್ ತುಂಬಾ ಅದ್ಭುತವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿರುವ ಈ ವಿಡಿಯೋಗೆ ಇದುವರೆಗೆ 12 ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿವೆ. ಅಷ್ಟೇ ಅಲ್ಲ 2 ಕೋಟಿ 70 ಲಕ್ಷಕ್ಕೂ ಅಧಿಕ ಬಾರಿಗೆ ಈ ವಿಡಿಯೋ ವೀಕ್ಷಣೆಗೆ ಒಳಗಾಗಿದೆ. ವಿಡಿಯೋ ಹಂಚಿಕೊಂಡವರು ಈ ವಿಡಿಯೋಗೆ 'ವ್ಯಾಕ್ಸಿನ್ ಜನರ ಪ್ರಾಣ ರಕ್ಷಿಸುತ್ತಿದೆ, ಈ ವಿಡಿಯೋವನ್ನು ಕೊನೆಯವರೆಗೆ ವೀಕ್ಷಿಸಿ' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಇತರ ಬಳಕೆದಾರರೂ ಕೂಡ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.



ಇದನ್ನೂ ಓದಿ-Viral Video: ಗರ್ಲ್​ಫ್ರೆಂಡ್ ಜೊತೆಗೆ ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಂಡನ ಫಜೀತಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ