Viral Video: ಮದುವೆ ಮಂಟಪದಲ್ಲಿಯೇ ವರನ ಕಪಾಳಕ್ಕೆ ಹೊಡೆದ ವಧು..!

ಮದುವೆ ಸಮಯದಲ್ಲಿ ‘ಗುಟ್ಕಾ’ ಜಗಿಯಲು ಮುಂದಾದ ತನ್ನ ಭಾವಿ ಪತಿಗೆ ವಧು ಒಬ್ಬಳು ಅತಿಥಿಗಳ ಮುಂದೆಯೇ ಸರಿಯಾಗಿ ಪಾಠ ಕಲಿಸಿದ್ದಾಳೆ.

Last Updated : Aug 29, 2021, 05:29 PM IST
  • ಮದುವೆ ಮಂಟಪದಲ್ಲಿಯೇ ‘ಗುಟ್ಕಾ’ ಜಗಿಯಲು ಹೋಗಿ ಯಡವಟ್ಟು ಮಾಡಿಕೊಂಡ ಮದುಮಗ
  • ಅತಿಥಿಗಳ ಮುಂದೆಯೇ ವರನಿಗೆ ಏಟು ಕೊಟ್ಟು ಸರಿಯಾದ ಪಾಠ ಕಲಿಸಿದ ವಧು
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ‘ಗುಟ್ಕಾ’ ವರನ ವಿಡಿಯೋ
Viral Video: ಮದುವೆ ಮಂಟಪದಲ್ಲಿಯೇ ವರನ ಕಪಾಳಕ್ಕೆ ಹೊಡೆದ ವಧು..!  title=
ಮದುವೆ ಮಂಟಪದಲ್ಲಿಯೇ ವರನಿಗೆ ಹೊಡೆದ ವಧು (Photo Courtesy: @DNA)

ನವದೆಹಲಿ: ಪಾನ್-ಮಸಾಲಾ, ಗುಟ್ಕಾ ಅಥವಾ ಸಿಗರೇಟ್ ಈ ವಸ್ತುಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಅನೇಕ ಬಾರಿ ಹೇಳಿದ್ದಾರೆ. ಆದರೆ ಅನೇಕ ಜನರು ವೈದ್ಯರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿಯೂ ಕೆಲವರು ಜನರು ‘ಗುಟ್ಕಾ’ (Gutka)ಮೇಲಿನ ಪ್ರೀತಿಯನ್ನು ಮರೆಯುವುದಿಲ್ಲ.

ತನ್ನ ಮದುವೆ ವೇಳೆಯೂ ‘ಗುಟ್ಕಾ’(Gutka) ವ್ಯಾಮೋಹದಿಂದ ದೂರವಿರಲು ಸಾಧ್ಯವಾಗದ ವ್ಯಕ್ತಿಯೊಬ್ಬ ಮದುವೆ ಮಂಟಪದಲ್ಲಿಯೇ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾನೆ. ಮದುವೆ ಸಮಯದಲ್ಲಿ ‘ಗುಟ್ಕಾ’ ಜಗಿಯಲು ಮುಂದಾದ ತನ್ನ ಭಾವಿ ಪತಿಗೆ ವಧು ಒಬ್ಬಳು ಅತಿಥಿಗಳ ಮುಂದೆಯೇ ಸರಿಯಾಗಿ ಪಾಠ ಕಲಿಸಿದ್ದಾಳೆ. ಸದ್ಯ ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿದ್ದು, ಸಖತ್ ಸೌಂಡ್ ಮಾಡುತ್ತಿದೆ.

ಇದನ್ನೂ ಓದಿ: Indian Railways : ರೈಲ್ವೆ ಟಿಕೆಟ್‌ ಬುಕಿಂಗ್ ಮಾಡುವ ಮುನ್ನ ತಿಳಿದಿರಲಿ ಈ ಹೊಸ ನಿಯಮ : IRCTC ಯಿಂದ ಹೊಸ ರೂಲ್ಸ್ ಜಾರಿ

ಈ ವಿಡಿಯೋದಲ್ಲಿ ವಧು-ವರರಿಬ್ಬರು ಮದುವೆ ಮಂಟಪ(Marriage Hall)ದಲ್ಲಿ ಕುಳಿತಿರುತ್ತಾರೆ. ಈ ವೇಳೆ ಸುಮ್ಮನೆ ಕುಳಿತುಕೊಳ್ಳದ ಮದುಮಗ ‘ಗುಟ್ಕಾ’ ಅಗಿಯಲು ಶುರುಮಾಡುತ್ತಾನೆ. ಇದನ್ನು ನೋಡಿದ ವಧುವಿನ ಕಣ್ಣು ಕೆಂಪಗಾಗಿದೆ. ವರನು ‘ಗುಟ್ಕಾ’ ಅಗಿಯುತ್ತಿದ್ದಾನೆ ಎಂದು ತಿಳಿದ ತಕ್ಷಣ ಕೋಪಿಸಿಕೊಂಡ ಆಕೆ ಮೊದಲು ವರನ ಸ್ನೇಹಿತನ ಮೇಲೆ ಹರಿಹಾಯ್ದು ಆತನಿಗೆ ಹೊಡೆಯುತ್ತಾಳೆ. ಬಳಿಕ ಮದುವೆಯಲ್ಲಿಯೂ ‘ಗುಟ್ಕಾ’ ಸೇವಿಸುತ್ತಿಯಾ ಅಂತಾ ಸಿಟ್ಟಿನಲ್ಲಿ ವರನನ್ನು ತಳ್ಳಿ ನಂತರ ಕಪಾಳಕ್ಕೆ ಹೊಡೆಯುತ್ತಾಳೆ. ‘ಗುಟ್ಕಾ’ ಉಗುಳುವಂತೆ ಆತನ ಮೇಲೆ ಗರಂ ಆಗುತ್ತಾಳೆ.  

ಇದನ್ನೂ ಓದಿ: RBI Alert : ಹಳೆಯ ನಾಣ್ಯ ಅಥವಾ ನೋಟು ಮಾರಾಟ ಮಾಡುವ ಮುನ್ನ ಎಚ್ಚರ..! ಆರ್‌ಬಿಐ ನೀಡಿದೆ ಮಹತ್ವದ ಸಂದೇಶ

ಮದುವೆ ಮಂಟಪದಲ್ಲಿಯೇ ವಧುವಿನ ಕೋಪಕ್ಕೆ ತುತ್ತಾದ ವರ ಹೆದರಿ ಕೂಡಲೇ ‘ಗುಟ್ಕಾ’ವನ್ನು ಉಗುಳುತ್ತಾನೆ. ವೈರಲ್ ಆಗಿರುವ ಈ ವಿಡಿಯೋ(Viral Video)ವನ್ನು Instagram ಬಳಕೆದಾರ @official_niranjanm87 ಹಂಚಿಕೊಂಡಿದ್ದಾರೆ . ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕಿದ್ದು, ವಧುವಿನ ಕೋಪಕ್ಕೆ ತುತ್ತಾದ ‘ಗುಟ್ಕಾ’ ವರನ ಅವಸ್ಥೆ ಕಂಡು ನಸುನಕ್ಕಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News