Viral Pre-Wedding Shoot: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮದುವೆಯನ್ನು ಆವಿಸ್ಮರಣೀಯವಾಗಿಸಲು ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡುವುದನ್ನು ನೀವು ನೋಡಿರಬಹುದು. ಮದುವೆಗೂ ಮುನ್ನವೇ ತಯಾರಿ ಶುರುವಾಗುತ್ತದೆ. ಈಗಿನ ಕಾಲದಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನ ಕ್ರೇಜ್ ಎಷ್ಟರ ಮಟ್ಟಿಗೆ ಹೆಚ್ಚಾಗುತ್ತಿದೆ ಎಂದರೆ, ಮುಂದೆ ಮದುವೆ ಆಗುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಿಸ್ ಆಗಬಾರದು ಎಂದು ಜನ ಅಂದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ವೃತ್ತಿಪರ ಛಾಯಾಗ್ರಾಹಕರನ್ನು ನೇಮಿಸಿಕೊಳ್ಳುತ್ತಾರೆ. ಛಾಯಾಗ್ರಾಹಕರು ಮದುವೆಯ ಫೋಟೋಶೂಟ್‌ಗಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಸಕತ್  ವೈರಲ್ ಆಗುತ್ತಿದೆ, ಇದನ್ನು  ನೋಡಿ ನಿಮಗೆ ದಕ್ಷಿಣ ಚಿತ್ರರಂಗದ ಅಥವಾ ಭೋಜ್‌ಪುರಿ ಚಿತ್ರರಂಗದ ಸಿನೆಮಾ  ನೆನಪಿಗೆ ಬರಲಿದೆ. ಈ ವಿಡಿಯೋವನ್ನು ನಾವು ಖಚಿತಪಡಿಸುವುದಿಲ್ಲ ಏಕೆಂದರೆ,  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ  ಎಲ್ಲಿ ಮತ್ತು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಬಗ್ಗೆ  ಯಾವುದೇ ಮಾಹಿತಿ ಇಲ್ಲ. ಈ ವಿಡಿಯೋ ನೋಡಿದ ಕೆಲವರು ಇದು ಯಾವುದಾದರೊಂದು ಚಿತ್ರದ ಚಿತ್ರೀಕರಣದ ಭಾಗವಾಗಿರಬೇಕು ಎನ್ನುತ್ತಿದ್ದಾರೆ. ಅದೇನೇ ಇದ್ದರೂ ವಿಡಿಯೋ ಮಾತ್ರ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಮದುವೆಯ ಡಾನ್ಸ್ ಫ್ಲೋರ್ ನಲ್ಲಿ ಕುಣಿಯುವುದರಲ್ಲಿ ಮಗ್ನರಾದ ಅತಿಥಿಗಳು, ನಂತರ ನಡೆದಿದ್ದು ನೀವೇ ನೋಡಿ


ಭಾವೀ ಪತ್ನಿಯನ್ನು ಬೈಕ್ ಮೇಲೆ ಕೂರಿಸಿ ವರ ಮಾಡಿದ್ದಾನೆ ಈ ಕೆಲಸ
ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು-ವರರು ಬೈಕ್ ಮೇಲೆ ಕುಳಿತಿದ್ದಾರೆ. ಹಗ್ಗದ ಸಹಾಯದಿಂದ ಬೈಕ್ ಅನ್ನು ಕ್ರೇನ್‌ಗೆ ಕಟ್ಟಲಾಗಿದೆ. ನೆಲದ ಮೇಲೆ ದೊಡ್ಡ ಕಲ್ಲು ಬಿದ್ದಿದ್ದು, ಅದರ ಮುಂದೆ ಮಹೀಂದ್ರಾ ಸ್ಕಾರ್ಪಿಯೋ ವಾಹನ ನಿಂತಿದೆ. ಇದರ ನಂತರ, ಕ್ರೇನ್ ನಿಧಾನವಾಗಿ ಬೈಕು ಅನ್ನು ಗಾಳಿಯಲ್ಲಿ ಎತ್ತುತ್ತದೆ ಮತ್ತು ವರನು ಬೈಕಿನ ಎರಡೂ ಚಕ್ರಗಳು ತಿರುಗಲಿ ಎಂಬ ಉದ್ದೇಶದಿಂದ ಎಕ್ಸಿಲೆಟರ್ ತಿರುವುತ್ತಾನೆ. ಇದರ ನಂತರ, ಕ್ರೇನ್ ಬೈಕನ್ನು ಕಾರಿನ ಮೇಲಿಂದ ಹಾರಿಸಿ ಅದರ ಇನ್ನೊಂದು ಭಾಗಕ್ಕೆ ತಂದು ಬಿಡುತ್ತದೆ. ಇದನ್ನು ನೋಡಿದರೆ ವರನು ತನ್ನ ವಧುವನ್ನು ಬೈಕ್ ಮೇಲೆ ಕೂರಿಸಿಕೊಂಡು ಗಾಳಿಯಲ್ಲಿ ಬೈಕ್ ಅನ್ನು ಹಾರಿಸಿ ಕಾರನ್ನು ದಾಟಿಸುತ್ತಾನೆ ಎಂಬಂತಿದೆ.


ಇದನ್ನೂ ಓದಿ-Viral Video: ರಸ್ತೆಗಿಳಿದ ವಿಶ್ವದ ಅತಿ ದೊಡ್ಡ ಹಾವು ಅನಕೊಂಡ, ನೋಡಿ ಸ್ಥಭ್ದರಾದ ಜನ!


ವೀಡಿಯೊವನ್ನು ವೀಕ್ಷಿಸಿದ ಬಳಕೆದಾರರ ರಿಯಾಕ್ಷನ್ ಹೇಗಿದೆ?
ಈ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ @bestofallll ಹೆಸರಿನ ಬಳಕೆದಾರರು ಹಂಚಿಕೊಂಡಿದ್ದಾರೆ ಮತ್ತು ಶೀರ್ಷಿಕೆಯಲ್ಲಿ  'ಈ ರೀತಿ ನನ್ನ ಮದುವೆಯ ಪ್ರೀವೇಡ್ಡಿಂಗ್ ಷೂಟ್ ಆಗುತ್ತಾ' ಎಂದು ಬರೆದಿದ್ದಾರೆ. ಈ ಸುದ್ದಿ ಬರೆಯುವವರೆಗೂ ಈ ವಿಡಿಯೋಗೆ  18 ಲಕ್ಷ ವೀಕ್ಷಣೆಗಳು ಬಂದಿವೆ, 20 ಸಾವಿರಕ್ಕೂ ಅಧಿಕ ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ ಮತ್ತು 5 ಸಾವಿರಕ್ಕೂ ಹೆಚ್ಚು ರೀಟ್ವೀಟ್‌ಗಳು ಈ ವಿಡಿಯೋಗೆ  ಬಂದಿವೆ. ಇದಲ್ಲದೆ ಕೆಲ ಬಳಕೆದಾರರು ಈ ವೀಡಿಯೊದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡುತ್ತಿದ್ದಾರೆ. ಜಗತ್ತಿನಲ್ಲಿ ಗಿಮಿಕ್‌ಗಳಿಗೆ ಕೊರತೆ ಇಲ್ಲ ಎಂದು ಕೆಲವರು ಹೇಳಿದರೆ, ಉಳಿದ ಹಲವು ಜನರು ಇದನ್ನು   ಚಲನಚಿತ್ರದ ದೃಶ್ಯ ಚಿತ್ರೀಕರಣ ಎಂದು ಹೇಳುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.