ನವದೆಹಲಿ: ಮದುವೆ ಸಂಭ್ರಮದಲ್ಲಿರುವ ವಧು-ವರರ ಅನೇಕ ವಿಡಿಯೋಗಳನ್ನು ನೀವು ನೋಡೇ ಇರ್ತಿರಿ. ಇತ್ತೀಚಿನ ದಿನಗಳಲ್ಲಿ ಮದುವೆ ಮನೆಯಲ್ಲಿ ನಡೆಯುವ ಹಾಸ್ಯ ಸನ್ನಿವೇಷಗಳ ವಿಡಿಯೋಗಳು ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಸಾಕಷ್ಟು ಗಮನ ಸೆಳೆಯುತ್ತಿವೆ. ವಧು-ವರರ ಜೊತೆಗೆ ಮದುವೆ ಕಾರ್ಯಕ್ರಮದಲ್ಲಿ ನಡೆಯುವ ಫನ್ನಿ ಫನ್ನಿ ಸಂಗತಿಗಳು ನೋಡುಗರಿಗೆ ನಗೆಯುಕ್ಕಿಸುತ್ತವೆ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸಖತ್ ಸದ್ದು ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಈ ವಿಡಿಯೋದಲ್ಲಿ ಆಗತಾನೇ ಮದುವೆಯಾಗಿರುವ ವಧು ಒಬ್ಬಳು ತನ್ನ ಕೈಯಲ್ಲಿ ವೈನ್ ಗ್ಲಾಸ್(Wine Glass) ಹಿಡಿದುಕೊಂಡು ಲಿಫ್ಟ್(Lift Floor) ನೊಳಗೆ ಕುಳಿತುಕೊಂಡಿರುವ ದೃಶ್ಯವನ್ನು ಕಾಣಬಹುದಾಗಿದೆ. ವಧುವಿನ ಲೆಹೆಂಗಾ ಸಾಕಷ್ಟು ಭಾರವಾಗಿರುತ್ತದೆ. ಜೊತೆಗೆ ಆಕೆ ಮೈತುಂಬಾ ಚಿನ್ನಾಭರಣ ಧರಿಸಿದ್ದು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ವಿವಾಹ ಸಮಾರಂಭದ ಉದ್ದಕ್ಕೂ ಲೆಹಂಗಾ ಮತ್ತು ಮೈಮೇಲಿನ ಚಿನ್ನಾಭರಣಗಳನ್ನು ನಿರ್ವಹಿಸುವುದು ವಧುವಿಗೆ ಸುಲಭದ ಕೆಲಸವಾಗಿರಲಿಲ್ಲ. ಹೀಗಾಗಿ ವಧುವಿನ ಸಹೋದರಿಯರು ಮತ್ತು ಸ್ನೇಹಿತರು ಆಕೆಯ ಸಹಾಯಕ್ಕೆ ಬರುತ್ತಾರೆ. ಮದುವೆ ವೇಳೆ ವಧು ಸರಾಗವಾಗಿ ನಡೆಯಲು ಅವರು ಆಕೆಯ ಲೆಹೆಂಗಾವನ್ನು ಎತ್ತಿಕೊಂಡು ಆಕೆಯ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾರೆ.



ಇದನ್ನೂ ಓದಿ: Indian Railways: ಬದಲಾಗಲಿದೆ ರೈಲ್ವೆ ವರ್ಕ್ ಕಲ್ಚರ್ , ಪ್ರಯಾಣಿಕರಿಗೆ ಸಿಗಲಿದೆ ಈ ಲಾಭ ..!


ಲೆಹೆಂಗಾ(Lehenga)ದ ಭಾರಕ್ಕೆ ವಧು ಸುಸ್ತಾಗಿ ಹೋಗಿರುತ್ತಾಳೆ. ಲಿಫ್ಟ್ ನಲ್ಲಿ ಹೋಗುವಾಗ ಅವಳು ಕೆಳಗೆ ಕುಳಿತುಕೊಂಡುಬಿಡುತ್ತಾಳೆ. ಲಿಫ್ಟ್ ನೆಲದ ಮೇಲೆ ಕುಳಿತುಕೊಂಡ ವಧು ತನ್ನ ಮೈಮೇಲಿನ ಚಿನ್ನಾಭರಣ ಮತ್ತು ಲೆಹೆಂಗಾವನ್ನು ತನ್ನ ಗೆಳತಿಯರಿಗೆ ತೋರಿಸಿ ನಸುನಗುತ್ತಾಳೆ. ಈ ವೇಳೆ ವಧು ತನ್ನ ಕೈಯಲ್ಲಿ ಒಂದು ಲೋಟ ವೈನ್ ಹಿಡಿದುಕೊಂಡು ಕುಡಿಯುತ್ತಾಳೆ. ಮದುವೆ ಸಂಭ್ರಮದಲ್ಲಿದ್ದ ವಧು ಹೆಣಬಾರದ ಲೆಹೆಂಗಾ ಮತ್ತು ಮೈಮೇಲೆ ಧರಿಸಿದ್ದ ಚಿನ್ನಾಭರಣದಿಂದ ಸುಸ್ತಾಗಿದ್ದಳು ಅಂತಾ ಕಾಣುತ್ತದೆ. ಹೀಗಾಗಿ ಪಾರ್ಟಿ ಮೂಡಿಗೆ ಬಂದು ವೈನ್ ಸೇವಿಸಿದ್ದಾಳೆ.


ಇದನ್ನೂ ಓದಿ: ದಿನ ಪೂರ್ತಿ ಬಳಸಿದರೂ ಖಾಲಿಯಾಗುವುದಿಲ್ಲ ಚಾರ್ಜ್ Xiaomi ಹೊರ ತರುತ್ತಿದೆ Redmi 10


ವಧು ಕೈಯಲ್ಲಿ ವೈನ್ ಕ್ಲಾಸ್ ಹಿಡಿದು ಲಿಫ್ಟ್ ನಲ್ಲಿ ಕುಳಿತುಕೊಂಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದು, ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ