Viral Video : ಜನ ಖರೀದಿ ಮಾಡುತ್ತಿದ್ದಂತೆಯೇ ಸೂಪರ್ ಮಾರ್ಕೆಟ್ ಗೆ ನುಗ್ಗಿದ ಕರಡಿ ಮುಂದೆ?

ಸೂಪರ್ ಮಾರ್ಕೆಟ್ನ   ತುಂಬಾ ಓಡಾಡುತ್ತಿರುವ ಕರಡಿಯ ವಿಡಿಯೋ ವೈರಲ್ ಆಗುತ್ತಿದೆ.  ಆ ದಿನ ಸೂಪರ್ ಮಾರ್ಕೆಟ್ ಗೆ ಬಂದಿದ್ದ ಮಹಿಳೆಯೊಬ್ಬರು, ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ  ಪೋಸ್ಟ್ ಮಾಡಿದ್ದಾರೆ.

Written by - Ranjitha R K | Last Updated : Aug 11, 2021, 08:35 PM IST
  • ರಾಜಾರೋಷವಾಗಿ ಸೂಪರ್ ಮಾರ್ಕೆಟ್ ಗೆ ನುಗ್ಗಿದ ಕರಡಿ
  • ಕ್ಯಾಲಿಫೋರ್ನಿಯಾದ ಸೂಪರ್ ಮಾರುಕಟ್ಟೆಯಲ್ಲಿ ಕಂಡ ಕರಡಿ
  • ಮಳಿಗೆ ತುಂಬಾ ಓಡಾಡುತ್ತಿರುವ ವೀಡಿಯೊ ವೈರಲ್
Viral Video : ಜನ ಖರೀದಿ ಮಾಡುತ್ತಿದ್ದಂತೆಯೇ ಸೂಪರ್ ಮಾರ್ಕೆಟ್ ಗೆ ನುಗ್ಗಿದ ಕರಡಿ ಮುಂದೆ?   title=
ರಾಜಾರೋಷವಾಗಿ ಸೂಪರ್ ಮಾರ್ಕೆಟ್ ಗೆ ನುಗ್ಗಿದ ಕರಡಿ (photo instagram)

ನವದೆಹಲಿ : ಸೂಪರ್ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅಲ್ಲಿಗೆ ಕರಡಿ ಬಂದರೆ ಏನಾಗುತ್ತದೆ.  ಎನ್ನುವುದನ್ನು ಒಮ್ಮೆ ಊಹಿಸಿ ನೋಡಿ. ಜೀವ ಕೈಗೆ ಬಂದು ಬಿಡುತ್ತದೆ. ಕ್ಯಾಲಿಫೋರ್ನಿಯಾದ ಸೂಪರ್ ಮಾರುಕಟ್ಟೆಯಲ್ಲಿ (Bear in super market) ಇದೇ ರೀತಿಯ ಘಟನೆ ಸಂಭವಿಸಿದೆ. ಹೌದು, ಎಲ್ಲರು ತಮ್ಮ ಪಾಡಿಗೆ ತಾವು ಶಾಪಿಂಗ್ ಮಾಡುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆಯೇ,  ಅಲ್ಲಿಗೆ ಕರಡಿ ನುಗ್ಗಿ ಬಿಟ್ಟಿದೆ. ಸೂಪರ್ ಮಾರ್ಕೆಟ್ ನಲ್ಲಿ ಅಷ್ಟೊಂದು ಜನ  ಇದ್ದರೂ ರಾಜಾರೋಷವಾಗಿ ನಡೆದುಕೊಂಡು ಬಂದಿದೆ. ಸೂಪರ್ ಮಾರ್ಕೆಟ್ ನಲ್ಲಿ ಜನ ಜುಂಗುಳಿಯಿದ್ದರೂ, ಇಡೀ ಮಳಿಗೆಯಲ್ಲಿ ಹೆಜ್ಜೆ ಹಾಕಿದೆ. 

ಸೂಪರ್ ಮಾರ್ಕೆಟ್ನ   ತುಂಬಾ ಓಡಾಡುತ್ತಿರುವ ಕರಡಿಯ ವಿಡಿಯೋ ವೈರಲ್ (Viral video) ಆಗುತ್ತಿದೆ.  ಆ ದಿನ ಸೂಪರ್ ಮಾರ್ಕೆಟ್ ಗೆ ಬಂದಿದ್ದ ಮಹಿಳೆಯೊಬ್ಬರು, ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ (Social media) ಪೋಸ್ಟ್ ಮಾಡಿದ್ದಾರೆ. ಕರಡಿ ಸೂಪರ್ ಮಾರ್ಕೆಟ್ ಒಳಗೆ ಬರುತ್ತಿದ್ದ ವೇಳೆ ತಾನು ಅದೇ ಮಳಿಗೆಯಲ್ಲಿ ಇದ್ದಿದ್ದಾಗಿ ಮಹಿಳೆ ಹೇಳಿದ್ದಾರೆ. ಈ ವೀಡಿಯೊ ದಲ್ಲಿ ಕರಡಿ, ಯಾವ ಭಯವು ಇಲ್ಲದೆ ಹೆಜ್ಜೆ ಹಾಕುತ್ತಿರುವುದು ಕಂಡು ಬರುತ್ತದೆ. 

 
 
 
 

 
 
 
 
 
 
 
 
 
 
 

A post shared by Tisha Campbell (@tishacampbellmartin)

 

ಇದನ್ನೂ ಓದಿ Viral video : ಎಲ್ಲರ ಎದುರೇ ವಧುವಿಗೆ ಬೆತ್ತದಿಂದ ಸರಿಯಾಗಿಯೇ ಬಾರಿಸಿದ ಮೈದುನ ..! ಮುಂದೇನಾಯಿತು ನೋಡಿ

ಸ್ಥಳೀಯ ಮಾಧ್ಯಮಗಳ ಪ್ರಕಾರ, ಈ ಘಟನೆ ಶನಿವಾರ ಸಂಭವಿಸಿದೆ. ಈ ಕರಡಿ (Bear) ಕ್ಯಾಲಿಫೋರ್ನಿಯಾದ ಪೋರ್ಟರ್ ರಾಂಚ್‌ನ ರೋಲ್ಫ್ ಅಂಗಡಿಯನ್ನು ಪ್ರವೇಶಿಸಿತ್ತು. ಕರಡಿ ಸೂಪರ್ ಮಾರ್ಕೆಟ್ ಗೆ ನುಗ್ಗಿದ್ದರು ಯಾರಿಗೂ ತೊಂದರೆ ಉಂಟು ಮಾಡಿಲ್ಲ. ಹೇಗೆ ಬಂತೋ ಹಾಗೆಯೇ ವಾಪಸ್ ಹೊರತು ಹೋಯಿತು ಎನ್ನಲಾಗಿದೆ. 

ಇದನ್ನೂ ಓದಿ : Viral Video: ಮದುವೆಯ ದಿನ ಇದ್ದಕ್ಕಿದ್ದಂತೆ ಪುಶ್-ಅಪ್ ಹೊಡೆಯಲು ಆರಂಭಿಸಿದ ವಧು, ವೀಡಿಯೊ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News