Viral Video: ಮದುವೆ ಮಂಟಪದಲ್ಲಿಯೇ ಕಬಡ್ಡಿ ಆಡಿದ ವಧು-ವರ..!
ನೋಡುವ ಪ್ರತಿಯೊಬ್ಬರಿಗೂ ಈ ಮದುವೆ ವಿಡಿಯೋ ನಗು ತರಿಸುತ್ತದೆ
ನವದೆಹಲಿ: ಮದುವೆ ಮನೆಗಳಲ್ಲಿ ಆಗಾಗ ಚಿತ್ರ-ವಿಚಿತ್ರ ಪ್ರಸಂಗಗಳು ನಡೆಯುತ್ತಿರುತ್ತವೆ. ತಮಾಷೆ, ಹಾಸ್ಯ, ಕೀಟಲೆ ಇಲ್ಲದೆ ಮದುವೆ ಸಂಪೂರ್ಣಗೊಳ್ಳುವುದೇ ಇಲ್ಲ. ವಧು-ವರರಿಗೆ ಸಂಬಂಧಿಸಿದ ಫನ್ನಿಯಾಗಿರುವ ಅನೇಕ ವಿಡಿಯೋಗಳನ್ನು ನಾವು ನೋಡಿದ್ದೇವೆ. ಇದೀಗ ಅಂಥಹದ್ದೇ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ವರಮಾಲಾ ಕಾರ್ಯಕ್ರಮ(Varmala Program)ದ ವೇಳೆ ಮದುವೆ ಮಂಟಪದಲ್ಲಿಯೇ ವಧು ಮತ್ತು ವರ(Groom) ಇಬ್ಬರು ಸೇರಿ ಕಬಡ್ಡಿ ಆಟ ಆಡಿದ್ದಾರೆ. ಮನೀಶ್ ಮಿಶ್ರಾ ಎಂಬುವರು ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅನೇಕರು ಈ ವಿಡಿಯೋ ವೀಕ್ಷಿಸಿ ಬಿದ್ದು ಬಿದ್ದು ನಕ್ಕಿದ್ದು, ಶೇರ್ ಮಾಡಿದ್ದಾರೆ.
ಇದನ್ನೂ ಓದಿ: Aadhaar Card ಅನ್ನು ಅಸುರಕ್ಷಿತವಾಗಿರಿಸಲು ಈ ರೀತಿ ಲಾಕ್ ಮಾಡಿ
ಅಷ್ಟಕ್ಕೂ ಈ ವಿಡಿಯೋದಲ್ಲೇನಿದೆ ಅಂತಾ ನೋಡುವುದಾದರೆ, ವರಮಾಲಾ ಕಾರ್ಯಕ್ರಮದಲ್ಲಿ ವಧು(Bride)ವಿನ ಹಾರವನ್ನು ವರ ತಲೆತಗ್ಗಿಸಿಕೊಂಡು ಹಾಕಿಸಿಕೊಂಡಿದ್ದಾನೆ. ಆದರೆ ವರ ಹಾಕಲು ಪ್ರಯತ್ನಿಸಿದಾಗ ವಧು ತಪ್ಪಿಸಿಕೊಂಡು ಮದುವೆ ಮಂಟಪದ ತುಂಬೆಲ್ಲಾ ಓಡಾಡಿದ್ದಾಳೆ. ಈ ವಿಡಿಯೋ ಇದೀಗ ಸಖತ್ ಸದ್ದು ಮಾಡುತ್ತಿದೆ.
Mobile Banking: ನೀವು ಮೊಬೈಲ್ ಬ್ಯಾಂಕಿಂಗ್ ಬಳಸುತ್ತಿದ್ದರೆ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ
‘ಇದು ವರಮಾಲಾ ಕಾರ್ಯಕ್ರಮದ ದೃಶ್ಯವಾಗಿದ್ದರೂ, ವಧುವನ್ನು ನೋಡಿದರೆ ಆಕೆ ಕಬಡ್ಡಿ ಆಡುವ ಉದ್ದೇಶದಿಂದಲೇ ಮದುವೆ ಮಂಟಪಕ್ಕೆ ಬಂದಿದ್ದಾಳೆಂದು ತೋರುತ್ತದೆ. ವಧುವಿಗೆ ಹಾರ ಹಾಕಲು ವರನಿಗೆ ಸಹಾಯ ಮಾಡಿದ ಎಲ್ಲಾ ಸ್ನೇಹತರಿಗೆ ಧನ್ಯವಾದಗಳು’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಲೇ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.