ಬೈತುಲ್: ಮಧ್ಯ ಪ್ರದೇಶದಲ್ಲಿ ಯುವಕನೋರ್ವ ವಿಶಿಷ್ಟ ರೀತಿಯ ವಿವಾಹ ಬಂಧನಕ್ಕೆ ಒಳಗಾಗಿದ್ದಾನೆ. ಹೌದು, ಈ ಯುವಕ ಒಂದೇ ಮದುವೆ ಮಂಟಪದಲ್ಲಿ ಆತ ಇಬ್ಬರು ಯುವತಿಯರನ್ನು ವರಿಸಿದ್ದಾನೆ. ಈ ಇಬ್ಬರಲ್ಲಿ ಓರ್ವ ಯುವತಿ ಆತನ ಗರ್ಲ್ ಫ್ರೆಂಡ್ ಆಗಿದ್ದರೆ ಇನ್ನೋರ್ವ ಯುವತಿ ಪೋಷಕರ ನೆಚ್ಚಿನ ಹುಡುಗಿ. ಈ ವಿವಾಹಕ್ಕ ಹಲವು ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು ಉಪಸ್ಥಿತಿ ನೊಂದಾಯಿಸಿದ್ದಾರೆ.
ರಾಜ್ಯದ ಬೆತುಲ್ ಮೂಲದ ಸಂದೀಪ್ ಉಯಿಕೆ ಜುಲೈ 8 ರಂದು ಜಿಲ್ಲಾ ಕೇಂದ್ರದಿಂದ 40 ಕಿ.ಮೀ ದೂರದಲ್ಲಿರುವ ಘೋಡಡೋಂಗ್ರಿ ಬ್ಲಾಕ್‌ನ ಕೆರಿಯಾ ಗ್ರಾಮದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಇದೀಗ ಈ ವಿವಾಹ ಸಮಾರಂಭ ಹೇಗೆ ಸಂಭವಿಸಿದೆ ಎಂಬುದರ ಕುರಿತು ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ. ಮಾಹಿತಿಯ ಪ್ರಕಾರ, ಕೇರಿಯಾ ಗ್ರಾಮದ ಸಂದೀಪ್ ಅವರನ್ನು ಮದುವೆಯಾದ ಇಬ್ಬರು ಯುವತಿಯರಲ್ಲಿ ಒಬ್ಬಳು ಹೋಶಂಗಾಬಾದ್ ಜಿಲ್ಲೆಗೆ ಸೇರಿದ್ದರೆ, ಮತ್ತೋರ್ವ ಯುವತಿ ಕೊಯಲಾರಿ ಗ್ರಾಮದವಳಾಗಿದ್ದಾಳೆ.
ಭೋಪಾಲ್‌ನಲ್ಲಿ ಓದುತ್ತಿದ್ದಾಗ ಯುವಕ ಹೋಶಂಗಾಬಾದ್ ಯುವತಿಯ ಸಂಪರ್ಕಕ್ಕೆ ಬಂದಿದ್ದಾನೆ. ಆದರೆ ಸಂದೀಪ್ ಅವರ ಪೋಷಕರು ಸಂದೀಪ್ ಗೆ ತಮ್ಮ ಕುಟುಂಬಕ್ಕೆ ಸೇರಿದ ಯುವತಿಯನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾರೆ. ಈ ವಾದ ವಿಕೋಪಕ್ಕೆ ತಿರುಗಿದಾಗ ಪಂಚಾಯ್ತಿ ಸೇರಿಸಲಾಗಿದೆ. ಈ ಸಂದರ್ಭದಲ್ಲಿ ಇಬ್ಬರೂ ಯುವತಿಯರು ಒಂದು ವೇಳೆ ಒಟ್ಟಿಗೆ ಸಂದೀಪ್ ಜೊತೆಗೆ ವಾಸಿಸಲು ಸಮ್ಮತಿ ಸೂಚಿಸಿದರೆ ಮಾತ್ರ ಅವರ ವಿವಾಹ ನೆರವೇರಿಸಲು ನಿರ್ಧರಿಸಲಾಗಿದೆ ಮತ್ತು ಇದಕ್ಕೆ ಇಬ್ಬರು ಯುವತಿಯರು ಸಮ್ಮತಿ ಸೂಚಿಸಿದ್ದಾರೆ.
ಬಳಿಕ ಕೆರಿಯಾ ಗ್ರಾಮದಲ್ಲಿ ಇವರ ವಿವಾಹ ಸಮಾರಂಭ ನೆರವೇರಿಸಲಾಗಿದೆ. ಸಮಾರಂಭದಲ್ಲಿ ಭಾಗವಹಿಸಿದವರಲ್ಲಿ ವರ ಮತ್ತು ಇಬ್ಬರು ವಧುಗಳ ಕುಟುಂಬ ಮತ್ತು ಗ್ರಾಮಸ್ಥರು ಶಾಮೀಲಾಗಿದ್ದರು. ಮೂರು ಕುಟುಂಬಗಳಿಗೆ ಯಾವುದೇ ಆಕ್ಷೇಪವಿಲ್ಲ ಮತ್ತು ಸ್ವತಃ ವಿವಾಹದೊಂದಿಗೆ ಮುಂದುವರಿಯಲು ನಿರ್ಧರಿಸಿದೆ ಕಾರಣ ಈ ಮದುವೆಯನ್ನು ಮುಂದುವರೆಸಲು ನಿರ್ಧರಿಸಾಲಾಗಿದೆ ಎಂದು ಘೋಡಾಡೊಂಗ್ರಿ ಗ್ರಾಮಪಂಚಾಯ್ತಿ ಉಪಾಧ್ಯಕ್ಷ ಮತ್ತು ಮದುವೆಗೆ ಸಾಕ್ಷಿಯಾದ ಮಿಶ್ರಿಲಾಲ್ ಪರತೆ ಹೇಳಿದ್ದಾರೆ.