ನವದೆಹಲಿ: ವಾಹನ ಸವಾರರಿಗೆ ಸಂಚಾರಿ ನಿಯಮ ಪಾಲನೆ ಬಗ್ಗೆ ತಿಳಿಸಲು ಚಂಡೀಗಢದ ಟ್ರಾಫಿಕ್ ಪೊಲೀಸರೊಬ್ಬರು ವಿನೂತನ ಮಾರ್ಗವನ್ನು ಅನುಸರಿಸಿದ್ದಾರೆ. ಖ್ಯಾತ ಗಾಯಕ ದಲೇರ್ ಮೆಹಂದಿ ಅವರ ಬೋಲೋ ತರಾರಾರಾ... ಹಾಡನ್ನು ಹಾಡುವ ಮೂಲಕ ವಾಹನ ಸಂಚಾರ ನಿಯಂತ್ರಣಕ್ಕೆ  ಮುಂದಾಗಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಗಾಯಕ ದಲೇರ್ ಮೆಹಂದಿ ಅವರೇ ಸ್ವತಃ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ, "ಸಂತೋಷ ಎಂದರೆ ದಲೇರ್ ಮೆಹಂದಿ. ಆಚರಣೆಯ ಅರ್ಥ ಡೇಲರ್ ಮೆಹಂದಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ. 



 ಸುಮಾರು 42 ಸೆಕೆಂಡುಗಳ ಈ ವೀಡಿಯೋದಲ್ಲಿ ಟ್ರಾಫಿಕ್ ಪೋಲೀಸ್ ಓರ್ವ ದಲೇರ್ ಮೆಹಂದಿ ಅವರ 1995ರ ಹಿಂತ ಹಾಡು ಬೊಲೊ ತಾ ರಾ ರಾ ಹಾಡಿನಿಂದ ಸ್ಫೂರ್ತಿ ಪಡೆದು, ಅದನ್ನು ಟ್ರಾಫಿಕ್ ನಿಯಮ ಪಾಲನೆಗೆ ವಾಹನ ಚಾಲಕರನ್ನು ಪ್ರೇರೇಪಿಸಲು ಹಾಡಿನ ಸಾಹಿತ್ಯವನ್ನು ಬದಲಾಯಿಸಿಕೊಂಡು ಹಾಡಿದ್ದಾರೆ. ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಈ ಹಾಡನ್ನು ವೀಕ್ಷಣೆ ಮಾಡಿದ್ದು, ಇಂಟರ್ನೆಟ್ ನಲ್ಲಿ ಸಖತ್ ವೈರಲ್ ಆಗಿದೆ.