ನವದೆಹಲಿ : ಸ್ಟ್ರೀಟ್ ಫುಡ್ ಟ್ರೆಂಡ್ (street food trends) ಎಷ್ಟರಮಟ್ಟಿಗೆ ಬೆಳೆದಿದೆ ಅಂದರೆ ಮಕ್ಕಳು ಮನೆಯ ಆಹಾರಕ್ಕಿಂತ ಹೊರಗಿನ ಆಹಾರವನ್ನೇ ಹೆಚ್ಚು ಇಷ್ಟಪಡುತ್ತಾರೆ. ಆದರೆ ಮನೆಯಲ್ಲಿರುವ ಹಿರಿತಲೆಗಳು ಇಂದಿಗೂ ಮನೆಯಲ್ಲಿ ತಯಾರಿಸುವ ರುಚಿ ಶುಚಿಯಾದ ಆಹಾರವನ್ನೇ (Home made food) ಇಷ್ಟ ಪಡುತ್ತಾರೆ. ನಮ್ಮ ನಡುವೆ ಇರುವ ಆದೆಷ್ಟೋ ಹಿರಿಯರು ಇಂದಿಗೂ ಫಾಸ್ಟ್ ಫುಡ್ ಗಳು ಯಾವ ರೀತಿ ಇದೆ ಎನ್ನುವುದನ್ನು ಕೂಡಾ ಪರೀಕ್ಷಿಸಿ ಕೂಡಾ ಇರುವುದಿಲ್ಲ. ಇಲ್ಲೊಬ್ಬ  ವಯಸ್ಸಾದ ಮಹಿಳೆಯೊಬ್ಬರು ಮೊದಲ ಬಾರಿಗೆ ಪಿಜ್ಜಾವನ್ನು ತಿನ್ನುವ ವಿಡಿಯೋ (Viral video) ಇದೆ. ಪಿಜ್ಜಾ ತಿಂದು ಅಜ್ಜಿಯ ಮುಖದ ಪ್ರತಿಕ್ರಿಯೆ ನೋಡಿದರೆ ಎಂಥವರೂ ನಗದೇ ಇರಲಾರರು. 


COMMERCIAL BREAK
SCROLL TO CONTINUE READING

ಮೊದಲ ಬಾರಿಗೆ ಪಿಜ್ಜಾ ರುಚಿ ಸವಿದ ಅಜ್ಜಿ : 
ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿರುವ ವೀಡಿಯೊದಲ್ಲಿ (Viral video) , ಅಜ್ಜಿ ಮೊದಲ ಬಾರಿಗೆ ಪಿಜ್ಜಾವನ್ನು ತಿನ್ನುತ್ತಿರುವುದನ್ನು ಕಾಣಬಹುದು. ವಿಡಿಯೋ ಕಂಟೆಂಟ್ ಕ್ರಿಯೇಟರ್ ಆಗಿರುವ ಅಜ್ಜಿಯ ಮೊಮ್ಮಗ ಗ್ರೀಷ್ ಭಟ್ ಎಂಬವರು ಈ ವೀಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ. ಮೊದಲ ಬಾರಿಗೆ ಪಿಜ್ಜಾ ತಿನ್ನಲು ಪ್ರಯತ್ನಿಸುವ ಅಜ್ಜಿಯ ಪ್ರತಿಕ್ರಿಯೆಯನ್ನು ಈ ವೀಡಿಯೊದಲ್ಲಿ ಕಾಣಬಹುದು.  ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 


 

 

 

 



 

 

 

 

 

 

 

 

 

 

 

A post shared by Greeshbhatt (@greesh_bhatt_)


 


ಇದನ್ನೂ ಓದಿ : ಕೋಳಿಯನ್ನು ದುರ್ಬಲ ಎಂದುಕೊಂಡು ಜಗಳಕ್ಕೆ ನಿಂತ ಬೆಕ್ಕು, ಆದರೆ ಆಗಿದ್ದೇನು ? ಫೈಟಿಂಗ್ ನ full video ಇಲ್ಲಿದೆ


ಪಿಜ್ಜಾ ತಿಂದ ತಕ್ಷಣ ಬಂತು ಈ ರೀತಿಯ ಪ್ರತಿಕ್ರಿಯೆ : 
ವೈರಲ್ ಆಗುತ್ತಿರುವ ವೀಡಿಯೊದಲ್ಲಿ (Viral news), ಅಜ್ಜಿ, ಪಿಜ್ಜಾ ತುಂಡನ್ನು ಎತ್ತಿಕೊಂಡು ಬಾಯಿಗೆ ಇಡುತ್ತಾರೆ. ಅಲ್ಲದೆ ಅದರ ಒಂದು ಬೈಟ್ ತೆಗೆದುಕೊಳ್ಳುತ್ತಾರೆ. ಆದರೆ ಅಜ್ಜಿಯ ಪ್ರತಿಕ್ರಿಯೆ ನೋಡಿದರೆ ಅಜ್ಜಿ ಪಿಜ್ಜವನ್ನು ಇಷ್ಟ ಪಟ್ಟಂತೆ  ಕಾಣುವುದಿಲ್ಲ. ಈ ವೈರಲ್ ವೀಡಿಯೊವನ್ನು ಬಹಳಷ್ಟು ಮಂದಿ ಲೈಕ್ ಮಾಡಿದ್ದಾರೆ. 


ಇದನ್ನೂ ಓದಿ : Viral Video: ಜಿಮ್‌ನಲ್ಲಿ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೆಂಡತಿಗೆ ಸಿಕ್ಕಿಬಿದ್ದ ಪತಿರಾಯ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ