Viral Video: ಹೋಟೆಲ್ ನಲ್ಲಿ ತಂದೂರಿ ರೊಟ್ಟಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!

ತಮೀಜುದ್ದೀನ್ ಎಂಬ ವ್ಯಕ್ತಿಯನ್ನು ಈಗ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಮತ್ತು ಚಿಕನ್ ಪಾಯಿಂಟ್ ಧಾಬಾ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

Written by - Puttaraj K Alur | Last Updated : Oct 18, 2021, 09:56 AM IST
  • ಹೋಟೆಲ್ ನಲ್ಲಿ ಬಿಸಿ ಬಿಸಿ ತಂದೂರಿ ರೊಟ್ಟಿ ತಿನ್ನುವ ಮುನ್ನ ಎಚ್ಚರ ವಹಿಸಿ
  • ತಂದೂರಿ ರೊಟ್ಟಿಗೆ ಉಗುಳಿರುವ ವ್ಯಕ್ತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
  • ಗಾಜಿಯಾಬಾದ್ ನಲ್ಲಿ ನಡೆದಿರುವ ಘಟನೆ, ಆರೋಪಿಯನ್ನು ಬಂಧಿಸಿದ ಪೊಲೀಸರು
Viral Video: ಹೋಟೆಲ್ ನಲ್ಲಿ ತಂದೂರಿ ರೊಟ್ಟಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!  title=
ತಂದೂರಿ ರೊಟ್ಟಿಗೆ ಉಗುಳಿದ ವ್ಯಕ್ತಿ

ಗಾಜಿಯಾಬಾದ್: ನೀವು ಹೊರಗಡೆ ಇದ್ದಾಗ ಹೋಟೆಲ್ ನಲ್ಲಿ ಬಿಸಿ ಬಿಸಿ ತಂದೂರಿ ರೊಟ್ಟಿ(Tandoori Roti) ಸೇವಿಸುವ ಮುನ್ನ ಈ ವಿಡಿಯೋವನ್ನು ಒಂದ್ಸಾರಿ ನೋಡಲೇಬೇಕು. ಅಡುಗೆ ಮಾಡುವ ವೇಳೆ ಒವನ್ ಒಳಗೆ ತಂದೂರಿ ರೊಟ್ಟಿ ಅಂಟಿಸುವಾಗ ಅದಕ್ಕೆ ಒಬ್ಬ ವ್ಯಕ್ತಿ ಉಗುಳಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಗಾಜಿಯಾಬಾದ್‌ನ ರಸ್ತೆಬದಿಯ ಧಾಬಾದಲ್ಲಿ.

ಈ ಆಘಾತಕಾರಿ ವಿಡಿಯೋ(Viral Video) ಎಲ್ಲರನ್ನೂ ದಂಗಾಗಿಸಿದ್ದು, ಇದು ವೈರಲ್ ಆದ ಕೂಡಲೇ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಫೋನಿನಲ್ಲಿ ಸೆರೆಹಿಡಿದಿರುವ ಈ ವಿಡಿಯೋದವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ‘ಗಾಜಿಯಾಬಾದ್‌ನಲ್ಲಿ ಚಿಕನ್ ಪಾಯಿಂಟ್‌ನ ವಿಡಿಯೋ ನೋಡಿ. ಇದರಲ್ಲಿ ಒಬ್ಬ ವ್ಯಕ್ತಿ ಉಗುಳುವ ಮೂಲಕ ತಂದೂರಿ ರೊಟ್ಟಿ ತಯಾರಿಸುತ್ತಿದ್ದಾನೆ’ ಎಂದು ಕ್ಯಾಪ್ಶನ್ ನೀಡಿರುವ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.   

ಇದನ್ನೂ ಓದಿ: Vi, Airtel, Jio Best Recharge Plans: ಕಡಿಮೆ ವೆಚ್ಚದಲ್ಲಿ ನಿತ್ಯ 4GB ಡಾಟಾ ಜೊತೆ ಸಿಗಲಿದೆ ಹಲವು ಲಾಭ

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ತಂದೂರಿ ರೊಟ್ಟಿ(Tandoori Roti)ಗಳನ್ನು ತಯಾರಿಸುವುದನ್ನು ಕಾಣಬಹುದು. ಇತರ ಅಡುಗೆ ಸಿಬ್ಬಂದಿ ಕೂಡ ನಿಂತು ಕೆಲಸ ಮಾಡುತ್ತಿದ್ದಾರೆ. ಹದವಾಗಿಸಿದ್ದ ದುಂಡು ದುಂಡಗಿನ ಹಿಟ್ಟನ್ನು ತೆಗೆದುಕೊಂಡು ರೊಟ್ಟಿ ತಯಾರಿಸುವಾಗ ಈ ವ್ಯಕ್ತಿ ಎಣ್ಣೆ ಅಥವಾ ನೀರು ಹಾಕುವ ಬದಲು ಉಗುಳುವುದನ್ನು ಕಾಣಬಹುದು. ತನ್ನಈ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗುತ್ತಿರುವುದನ್ನು ಗಮನಿಸದೆ ಆ ವ್ಯಕ್ತಿ ರೊಟ್ಟಿಗಳನ್ನು ಮಾಡುತ್ತಲೇ ಇದ್ದ. ಈ ವಿಡಿಯೋ ನೋಡಿದ ಅನೇಕ ನೆಟಿಜನ್‌ಗಳು ಆ ವ್ಯಕ್ತಿಯ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ವಿಷಯ ತಿಳಿದ ನಂತರ ಸ್ಥಳೀಯ ಪೊಲೀಸ್ ಆಡಳಿತವು ಕ್ರಮಕ್ಕೆ ಮುಂದಾಯಿತು.

ತಮೀಜುದ್ದೀನ್ ಎಂಬ ವ್ಯಕ್ತಿಯನ್ನು ಈಗ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಮತ್ತು ಚಿಕನ್ ಪಾಯಿಂಟ್ ಧಾಬಾ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹ ಕೇಳಿಬಂದ ಬಳಿಕ ಗಾಜಿಯಾಬಾದ್ ಪೊಲೀಸರು(Ghaziabad Police) ಕ್ರಮಕ್ಕೆ ಮುಂದಾಗಿದ್ದಾರೆ. ‘ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: Virus: ನಿಮ್ಮ ಫೋನಿನಲ್ಲಿ ಮೌನವಾಗಿ ಅಡಗಿದೆಯೇ ವೈರಸ್, ಅದನ್ನು ಈ ರೀತಿ ಹುಡುಕಿ

ಇಂತಹ ವಿಡಿಯೋ ಹೊರಬಂದು ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿನ ದಿನಗಳಲ್ಲಿ ಹಲವಾರು ರೆಸ್ಟೋರೆಂಟ್‌ಗಳಲ್ಲಿ ರೊಟ್ಟಿಗಳನ್ನು ತಯಾರಿಸುವಾಗ ಮತ್ತು ವಿವಾಹದ ಸ್ಥಳಗಳಲ್ಲಿ ಅಡುಗೆ ಮಾಡುವಾಗ ಉಗುಳುವ ವ್ಯಕ್ತಿಗಳು ಸಿಕ್ಕಿಬಿದ್ದ ಘಟನೆಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News