Viral Video: ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ!
32 ಸೆಕೆಂಡುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ತೆಲಂಗಾಣ: ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (Railway Protection Force) ಸಿಬ್ಬಂದಿ ರಕ್ಷಿಸಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈಗಾಗಲೇ ಈ ರೀತಿಯ ಅನೇಕ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಆದರೆ ತೆಲಂಗಾಣದ ಸಿಕಂದರಾಬಾದ್ ರೈಲ್ವೆ ಸ್ಟೇಷನ್ ನಲ್ಲಿ ನಡೆದಿರುವ ಈ ಘಟನೆ ನೋಡುಗರ ಬೆಚ್ಚಿಬೀಳಿಸುವಂತಿದೆ.
ಚಲಿಸುತ್ತಿದ್ದ ರೈಲನ್ನು ಓಡಿ ಬಂದು ಹತ್ತಲು ಮಹಿಳೆ ಪ್ರಯತ್ನಿಸಿದ್ದಾಳೆ. ಈ ವೇಳೆ ಕಾಲು ಜಾರಿ ರೈಲಿನಡಿ ಬೀಳುತ್ತಿದ್ದಳು. ಕ್ಷಣಾರ್ಧದಲ್ಲಿಯೇ ರೈಲಿನಡಿ ಸಿಲುಕಿತ್ತಿದ್ದ ಮಹಿಳೆಯನ್ನು ಆರ್‌ಪಿಎಫ್ ಸಿಬ್ಬಂದಿ ರಕ್ಷಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಘಟನೆ ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿ ಕ್ಯಾಮೆರಾ(CCTV Camera)ದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ತ್ರಿಪುರಾ ಸಿಎಂ ಬಿಬ್ಲಬ್ ದೇವ್ ಹತ್ಯೆಗೆ ಯತ್ನ: ಮೂವರ ಬಂಧನ
ರೈಲ್ವೆ ಸಚಿವಾಲ(Ministry of Railways)ಯವು ಈ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ‘ಜೀವನವು ಬಾಲಿವುಡ್ ಸಿನಿಮಾದ ದೃಶ್ಯದಂತೆ ಅಲ್ಲ. ಜೀವ ಹೆಚ್ಚು ಅಮೂಲ್ಯವಾದದ್ದು. ಆರ್‌ಪಿಎಫ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಮಹಿಳೆಯ ಪ್ರಾಣ ಉಳಿಯಿತು. ಯಾವಾಗಲೂ ಚಲಿಸುವ ರೈಲನ್ನು ಹತ್ತಬೇಡಿ. ಎಚ್ಚರವಾಗಿರಿ, ಸುರಕ್ಷಿತವಾಗಿರಿ! ಅಂತಾ ಸಲಹೆ ನೀಡಲಾಗಿದೆ.
RPF Personnel) ರಕ್ಷಿಸಿದ್ದಾರೆ. ಮಹಿಳೆಯ ಅದೃಷ್ಟ ಚೆನ್ನಾಗಿತ್ತು ಪ್ರಾಣ ಉಳಿಯಿತು ಅಂತಾ ಅನೇಕರು ಕಾಮೆಂಟ್ ಮಾಡಿದ್ದು, ಆರ್‌ಪಿಎಫ್ ಸಿಬ್ಬಂದಿಯ ಸಮಯ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Johnson and Johnson ಕಂಪನಿಯ Single Dose Vaccine ಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ
ಚಲಿಸುವ ರೈಲುಗಳನ್ನು ಹತ್ತಬೇಡಿ ಅಂತಾ ರೈಲ್ವೆ ಇಲಾಖೆ(Indian Railways) ಅನೇಕ ಬಾರಿ ಜನರಲ್ಲಿ ಜಾಗೃತಿ ಮೂಡಿಸಿ ಮನವಿ ಮಾಡುತ್ತಿದೆ. ಆದರೆ ಜನರು ಮಾತ್ರ ಈ ಬಗ್ಗೆ ಕ್ಯಾರೆ ಎನ್ನದೆ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ರೈಲು ಚಲಿಸುತ್ತಿದ್ದಾಗಲೇ ಓಡಿ ಹೋಗಿ ಹತ್ತಲು ಹೋಗಿ ಅನೇಕರು ಪ್ರಾಣವನ್ನೇ ಕಳೆದುಕೊಂಡಿರುವ ಅನೇಕ ಘಟನೆಗಳು ನಡೆದಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ