Video : ರೈಲಿನ ಕೆಳಗೆ ಸಿಲುಕಿದ ವ್ಯಕ್ತಿಯನ್ನು ದೇವರಂತೆ ಬಂದು ಕಾಪಾಡಿದ RPF ಯೋಧ

ಸ್ಥಳಕ್ಕೆ ಸರಿಯಾದ ಸಮಯಕ್ಕೆ ಆಗಮಿಸಿದ ಆರ್ ಪಿಎಫ್ (RPF) ಯೋಧ ಆ ವ್ಯಕ್ತಿಯ ಪಾಲಿಗೆ ದೇವರೇ ಸರಿ. ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸಿದ ವೆಳೆ ವ್ಯಕ್ತಿಯೊಬ್ಬರು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಪ್ಲಾಟ್ ಫಾರ್ಮ್ ಮತ್ತು ಹಳಿಯ ಮಧ್ಯೆ ಸಿಲುಕಿಕೊಂಡ ವ್ಯಕ್ತಿಯನ್ನು ಅಲ್ಲೆ ಇದ್ದ ಆರ್ ಪಿಎಫ್ ಯೋಧ ರಕ್ಷಿಸಿದ್ದಾರೆ. 

Written by - Ranjitha R K | Last Updated : Jun 9, 2021, 06:38 PM IST
  • ದೇವರಂತೆ ಬಂದು ಕಾಪಾಡಿದ RPF ಸಿಬ್ಬಂದಿ
  • ಚಲಿಸುವ ರೈಲು ಹತ್ತಲು ಹೋಗಿ ಆಯ ತಪ್ಪಿ ಬಿದ್ದ ವ್ಯಕ್ತಿ
  • ತಕ್ಷಣ ಓಡಿ ಬಂದು ವ್ಯಕ್ತಿಯನ್ನು ಕಾಪಾಡಿದ ಸಿಬ್ಬಂದಿ
Video : ರೈಲಿನ ಕೆಳಗೆ ಸಿಲುಕಿದ ವ್ಯಕ್ತಿಯನ್ನು ದೇವರಂತೆ ಬಂದು ಕಾಪಾಡಿದ RPF ಯೋಧ title=
ಚಲಿಸುವ ರೈಲು ಹತ್ತಲು ಹೋಗಿ ಆಯ ತಪ್ಪಿ ಬಿದ್ದ ವ್ಯಕ್ತಿ (photo india.com)

ಮುಂಬಯಿ : ಸ್ಥಳಕ್ಕೆ ಸರಿಯಾದ ಸಮಯಕ್ಕೆ ಆಗಮಿಸಿದ ಆರ್ ಪಿಎಫ್ (RPF) ಯೋಧ ಆ ವ್ಯಕ್ತಿಯ ಪಾಲಿಗೆ ದೇವರೇ ಸರಿ. ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸಿದ ವೆಳೆ ವ್ಯಕ್ತಿಯೊಬ್ಬರು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಪ್ಲಾಟ್ ಫಾರ್ಮ್ ಮತ್ತು ಹಳಿಯ ಮಧ್ಯೆ ಸಿಲುಕಿಕೊಂಡ ವ್ಯಕ್ತಿಯನ್ನು ಅಲ್ಲೆ ಇದ್ದ ಆರ್ ಪಿಎಫ್ ಯೋಧ ರಕ್ಷಿಸಿದ್ದಾರೆ. ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ಆರ್ ಪಿಎಫ್ ಯೋಧನ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ.  ಕೆಲ ದಿನಗಳ ಹಿಂದೆ  ಹಳಿ ಮೇಲೆ ಬಿದ್ದ ಮಗುವಿನ ಪ್ರಾಣವನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿದ್ದ ಘಟನೆ ಕೂಡಾ ಮುಂಬಯಿಯಲ್ಲಿ (Mumbai) ನಡೆದಿತ್ತು. 

ಈ ಘಟನೆ ನಡೆದಿರುವುದು ಕುರ್ಲಾ ರೈಲ್ವೆ ನಿಲ್ದಾಣದಲ್ಲಿ (Kurla Railway station) . ರೈಲು ಲೋಕಮಾನ್ಯ ತಿಲಕ್ ಟರ್ಮಿನಲ್ ನಿಂದ ರೈಲು ಹೊರಟಿತ್ತು. ತಡವಾಗಿ ಬಂದ ವ್ಯಕ್ತಿಯೊಬ್ಬರು ಓಡಿ ಬಂದು ಚಲಿಸುತ್ತಿರುವ ರೈಲನ್ನು (Train) ಹತ್ತಲು ಪ್ರಯತ್ನಿಸಿದ್ದಾರೆ. ವ್ಯಕ್ತಿ ಕೂಡಲೇ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ವ್ಯಕ್ತಿ ಕೆಳಗೆ ಬೀಳುತ್ತಿದ್ದಂತೆ ತಕ್ಷಣ ಓಡಿ ಬಂದ ಆರ್ ಪಿ ಎಫ್ (RPF) ಯೋಧ ವ್ಯಕ್ತಿಯನ್ನು ಮೇಲೆಳೆದು ಕಾಪಾಡಿದ್ದಾರೆ. ಈ ಎಲ್ಲಾ ದೃಶ್ಯ ನಿಲ್ದಾಣದಲ್ಲಿ ಹಾಕಲಾಗಿದ್ದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. 

 

ಇದನ್ನೂ ಓದಿ : Indian Railways: ಜೂನ್ 10 ರಿಂದ ಟ್ರ್ಯಾಕ್‌ನಲ್ಲಿ ಚಲಿಸಲಿರುವ ರೈಲುಗಳ ಫುಲ್ ಲಿಸ್ಟ್ ಇಲ್ಲಿದೆ

ರೈಲ್ವೆ (Indian Railway) ಸಿಬ್ಬಂದಿ ಈ ರೀತಿಯ ಅಪಘಾತವನ್ನು ತಪ್ಪಿಸಿ ಜನರ ಪ್ರಾಣ ರಕ್ಷಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅಂಧ ಮಹಿಳೆಯೊಬ್ಬರ ಮಗು ರೈಲು ಹಳಿಯ ಮೇಲೆ ಬಿದ್ದಿದ್ದ ಸಂದರ್ಭದಲ್ಲಿಯೂ ಸಿಬ್ಬಂದಿ ಆ ಮಗುವನ್ನು ರಕ್ಷಿಸಿದ್ದರು.  ಆ ಸಂದರ್ಭದಲ್ಲಿ ಅರೆ ಕ್ಷಣ ತಡವಾಗಿದ್ದರೂ ಮಗು ಮತ್ತು ರಕ್ಷಣೆಗೆ ಧಾವಿಸಿದ್ದ ಸಿಬ್ಬಂದಿ ಇಬ್ಬರೂ ಪ್ರಾಣ ಕಳೆದುಕೊಳ್ಳುತ್ತಿದ್ದರು. ತಮ್ಮ ಜೀವವನ್ನೂ ಲೆಕ್ಕಿಸದೆ ಮಗುವಿನ ಪ್ರಾಣ ಉಳಿಸಿದ್ದ ಸಿಬ್ಬಂದಿಯನ್ನು ರೈಲ್ವೆ ಇಲಾಖೆ ಅಭಿನಂದಿಸಿತ್ತು. 

ಇದನ್ನೂ ಓದಿ : IRCTC/Indian Railways : ರೈಲಿನಲ್ಲಿ ನಕಲಿ TTE ಗಳಿದ್ದಾರೆ ಎಚ್ಚರ..! ದಂಡ ಪಾವತಿಸುವ ಮುನ್ನ ಪರಿಶೀಲಿಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News