Viral Video: ಚಪ್ಪಲಿ-ಬಾಟಲಿಯೇ ಆಯುಧ! ಯುವತಿಯ ಜಡೆಜಗಳಕ್ಕೆ ರಣರಂಗವಾಯ್ತು ಮೆಟ್ರೋ! ವಿಡಿಯೋ ವೈರಲ್
Delhi Metro Girl Fight Video: ವಿಡಿಯೋದಲ್ಲಿ ಕಾಣಿಸುತ್ತಿರುವಂತೆ ಇಬ್ಬರು ಯುವತಿಯರ ಜಗಳದಿಂದಾಗಿ, ದೆಹಲಿ ಮೆಟ್ರೋದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಈ ಘಟನೆಯ ವಿಡಿಯೋವನ್ನು ಅಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
Delhi Metro Girl Fight Video: ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ನಡೆದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಕಾರಣ ಈ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಿರುವ ಯುವತಿಯರ ಜಡೆಜಗಳ. ಇಬ್ಬರು ಅಪರಿಚಿತ ಯುವತಿಯರು ಮೆಟ್ರೋದೊಳಗಡೆ ಚಪ್ಪಲಿ- ಬಾಟಲಿ ಹಿಡಿದು ಯುದ್ಧಕ್ಕೆ ನಿಂತಂತೆ ಕಾಣಿಸುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಪ್ರವೇಶಕ್ಕೆ ಕೌಂಟ್’ಡೌನ್: ಈ ಭಾಗಗಳಲ್ಲಿ ಗುಡುಗು, ಗಾಳಿ ಸಹಿತ ಮಳೆಯ ಎಚ್ಚರಿಕೆ
ಈ ವಿಡಿಯೋವನ್ನು ನೀವೊಮ್ಮೆ ನೋಡಿ.
ವಿಡಿಯೋದಲ್ಲಿ ಕಾಣಿಸುತ್ತಿರುವಂತೆ ಇಬ್ಬರು ಯುವತಿಯರ ಜಗಳದಿಂದಾಗಿ, ದೆಹಲಿ ಮೆಟ್ರೋದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಈ ಘಟನೆಯ ವಿಡಿಯೋವನ್ನು ಅಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಮೊದಲು ಇಬ್ಬರು ಯುವತಿಯರು ದೂರ ದೂರ ನಿಂತಿರುತ್ತಾರೆ. ಅದಾಗಲೇ ಒಬ್ಬರಿಗೊಬ್ಬರು ಆಕ್ಷೇಪಾರ್ಹ ಭಾಷೆಯಲ್ಲಿ ನಿಂದಿಸಿಕೊಳ್ಳುತ್ತಿರುವುದನ್ನು ಕಾಣಬಹುದು.
ಅದರಲ್ಲಿ ಕೆಂಪು ಬಣ್ಣದ ಬಟ್ಟೆ ಧರಿಸಿದ ಯುವತಿ ತನ್ನ ಶೂ ತೆಗೆದು, ತನ್ನ ವಿರುದ್ಧ ಮಾತನಾಡುತ್ತಿದ್ದ ಕಪ್ಪು ಬಣ್ಣದ ಬಟ್ಟೆ ಧರಿಸಿದ ಮಹಿಳೆಗೆ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು. ಅದಕ್ಕೆ ಪ್ರತ್ಯುತ್ತರ ನೀಡಲು ಆ ಯುವತಿ ಬಾಟಲಿಯನ್ನು ಹಿಡಿದುಕೊಂಡು ಆಕೆಯ ವಿರುದ್ಧ ಹೋಗುತ್ತಾಳೆ. ಆರಂಭದಲ್ಲಿ, ಮೆಟ್ರೋದಲ್ಲಿದ್ದ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಇವರ ಜಗಳ ನಿಲ್ಲುವಂತೆ ಕಾಣುತ್ತಿಲ್ಲ.
ವೀಡಿಯೊದ ನಂತರದ ಭಾಗದಲ್ಲಿ, ಮೆಟ್ರೋ ಅಧಿಕಾರಿಯನ್ನು ಸಂಪರ್ಕಿಸಲು ಕಪ್ಪು ಬಣ್ಣದ ಬಟ್ಟೆ ಧರಿಸಿದ ಮಹಿಳೆ ಫೋನ್ ಸೇವೆಯನ್ನು ಬಳಸುತ್ತಿರುವುದನ್ನು ಕಾಣಬಹುದು. ಅದೇ ಸಂದರ್ಭದಲ್ಲಿ ಮತ್ತೊಬ್ಬಳು ಏನೋ ಹೇಳಿದ್ದು, ಕೋಪಗೊಂಡ ಈಕೆ ತನ್ನ ಬಾಟಲಿಯಲ್ಲಿದ್ದ ನೀರನ್ನು ಆಕೆಯ ಮೇಲೆ ಎರಚಿದ್ದಾಳೆ. ಇಬ್ಬರೂ ಮಹಿಳೆಯರು ಪರಸ್ಪರ ಅವಹೇಳನಕಾರಿ ಪದಗಳಿಂದ ನಿಂದಿಸಿಕೊಂಡಿದ್ದಾರೆ.
ಮಹಿಳೆ ಕೋಪಗೊಂಡು ತನ್ನ ನೀರಿನ ಬಾಟಲಿಯನ್ನು ಎತ್ತಿಕೊಂಡು ಇನ್ನೊಬ್ಬ ಮಹಿಳೆಯ ಮೇಲೆ ನೀರನ್ನು ಎರಚಿದಾಗ` ಪರಿಸ್ಥಿತಿ ಉಲ್ಬಣಗೊಂಡಿದೆ.
ಇದನ್ನೂ ಓದಿ: ತಪ್ಪು ಮಾಡಿದ್ರೂ ಈ ರಾಶಿಯವರನ್ನ ಬಿಟ್ಟುಕೊಡಲ್ಲ ಶನಿದೇವ! ಅಷ್ಟೈಶ್ವರ್ಯ ಕರುಣಿಸಿ ಜೀವನ ಬೆಳಗುತ್ತಾನೆ ಸೂರ್ಯಪುತ್ರ!
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ, ನಾನಾ ರೀತಿಯ ಕಮೆಂಟ್’ಗಳು ಬಂದಿವೆ. ಒಬ್ಬರು, “ಇದು ಮೊದಲ ಭಾಗ, ಭಾಗ 2 ಇನ್ನೂ ಬರಬೇಕಿದೆ” ಎಂದು ಹೇಳಿದ್ದಾರೆ. ಮತ್ತೊಬ್ಬರು, "ಇದು ಮಸಾಲಾ ಮಾದರಿಯ ಸಿನಿಮಾ ಎಂದು ತೋರುತ್ತದೆ" ಎಂದು ಬರೆದಿದ್ದಾರೆ. "ಪುರುಷರಿಗೆ ಹೋಲಿಸಿದರೆ ಮಹಿಳೆಯರ ಜಗಳಗಳು ವೀಕ್ಷಿಸಲು ಚೆನ್ನಾಗಿರುತ್ತವೆ" ಎಂದು ತಮಾಷೆ ಮಾತುಗಳನ್ನಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.