ಈ ಇಬ್ಬರಿಂದಲೇ ಟೀಂ ಇಂಡಿಯಾ ಟೆಸ್ಟ್ ಟ್ರೋಫಿ ಗೆಲ್ಲುತ್ತೆ! ಕೋಚ್ ದ್ರಾವಿಡ್ ಹೇಳಿದ್ದು ಯಾರ ಬಗ್ಗೆ ಗೊತ್ತಾ?

WTC Final 2023: ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಟಿಸಿ ಫೈನಲ್) ಫೈನಲ್‌ ನಲ್ಲಿ ಯಾವ ಆಟಗಾರ ಟೀಮ್ ಇಂಡಿಯಾದ ಮಾರಕ ಅಸ್ತ್ರ ಆಗಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

Written by - Bhavishya Shetty | Last Updated : Jun 6, 2023, 08:16 AM IST
    • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಅಂತಿಮ ಪಂದ್ಯ
    • ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್‌ ನ ಕೆನ್ನಿಂಗ್ಟನ್ ಓವಲ್ (ಲಂಡನ್) ಮೈದಾನದಲ್ಲಿ ನಡೆಯಲಿದೆ
    • ಫೈನಲ್‌ ಗೂ ಮುನ್ನ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಹೇಳಿಕೆ
ಈ ಇಬ್ಬರಿಂದಲೇ ಟೀಂ ಇಂಡಿಯಾ ಟೆಸ್ಟ್ ಟ್ರೋಫಿ ಗೆಲ್ಲುತ್ತೆ! ಕೋಚ್ ದ್ರಾವಿಡ್ ಹೇಳಿದ್ದು ಯಾರ ಬಗ್ಗೆ ಗೊತ್ತಾ? title=
Rahul Dravid

WTC Final 2023: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ (WTC Final) ಅಂತಿಮ ಪಂದ್ಯವು ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್‌ ನ ಕೆನ್ನಿಂಗ್ಟನ್ ಓವಲ್ (ಲಂಡನ್) ಮೈದಾನದಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಟಿಸಿ ಫೈನಲ್) ಫೈನಲ್‌ ಗೂ ಮುನ್ನ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ; ಆಂಜನೇಯನ ಕೃಪೆಯಿಂದ ಇಂದು ಈ ರಾಶಿಯವರಿಗೆ ಭಾರೀ ಧನಲಾಭ! ಯಶಸ್ಸು-ಅದೃಷ್ಟ ಪ್ರಾಪ್ತಿ

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಟಿಸಿ ಫೈನಲ್) ಫೈನಲ್‌ ನಲ್ಲಿ ಯಾವ ಆಟಗಾರ ಟೀಮ್ ಇಂಡಿಯಾದ ಮಾರಕ ಅಸ್ತ್ರ ಆಗಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 18 ತಿಂಗಳ ನಂತರ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಸಿದ್ಧರಾಗಿದ್ದಾರೆ. ಅವರು ವಿಫಲವಾದರೆ ಅವರ ವೃತ್ತಿಜೀವನವೂ ಕೊನೆಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಈ ಅನುಭವಿ ಬ್ಯಾಟ್ಸ್‌ ಮನ್‌ ಗೆ ದ್ರಾವಿಡ್ ಸಲಹೆಯೊಂದನ್ನು ನೀಡಿದ್ದಾರೆ.

ಕೋಚ್ ರಾಹುಲ್ ದ್ರಾವಿಡ್ ಮಾತನಾಡಿ, “ಅವರು (ಅಜಿಂಕ್ಯ ರಹಾನೆ) ತಂಡದೊಂದಿಗೆ ಇರುವುದು ಒಳ್ಳೆಯದು. ಕೆಲ ಆಟಗಾರರು ಗಾಯಗೊಂಡಿದ್ದರಿಂದ ತಂಡಕ್ಕೆ ಮರಳುವ ಅವಕಾಶ ಸಿಕ್ಕಿದೆ. ಅವರಂತಹ ನುರಿತ ಆಟಗಾರ ನಮ್ಮಲ್ಲಿರುವುದು ಒಳ್ಳೆಯದು” ಎಂದಿದ್ದಾರೆ.

“ಅಜಿಂಕ್ಯ ರಹಾನೆ ಆಗಮನದಿಂದ ತಂಡದಲ್ಲಿ ಅನುಭವ ಹೆಚ್ಚಿದೆ. ಅವರು ವಿದೇಶದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಇಂಗ್ಲೆಂಡ್‌ ನಲ್ಲಿಯೂ ಅವರು ಕೆಲವು ಅದ್ಭುತ ಇನ್ನಿಂಗ್ಸ್‌ ಗಳನ್ನು ಆಡಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು ಕೆಲವು ಉತ್ತಮ ಯಶಸ್ಸನ್ನು ಸಾಧಿಸಿದೆ. ಚೇತೇಶ್ವರ ಪೂಜಾರ ಇತ್ತೀಚೆಗೆ ಕೌಂಟಿ ಕ್ರಿಕೆಟ್‌ ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ” ಎಂದು ಹೇಳಿದ್ದಾರೆ.

ಕೋಚ್ ರಾಹುಲ್ ದ್ರಾವಿಡ್ ಮಾತು ಮುಂದುವರೆಸಿ, “ನಾವು ಪೂಜಾರ ಅವರೊಂದಿಗೆ ನಾಯಕತ್ವ ಮತ್ತು ಸಹಜವಾಗಿ ಬ್ಯಾಟಿಂಗ್ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಸೆಕ್ಸ್‌ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು, ಹೀಗಾಗಿ ಕೌಂಟಿಯಲ್ಲಿ ಆಡುವ ಬೌಲರ್‌ ಗಳ ತಂತ್ರಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದ್ದಾರೆ. ಆದ್ದರಿಂದ ನಾವು ಅವರೊಂದಿಗೆ ಚರ್ಚಿಸಿದ್ದೇವೆ ಮತ್ತು ಅವರ ಸಲಹೆಯನ್ನು ನಾವು ಹೇಗೆ ಕಾರ್ಯಗತಗೊಳಿಸಬಹುದು ಎಂದು ಯೋಜನೆ ರೂಪಿಸಿದ್ದೇವೆ” ಎಂದಿದ್ದಾರೆ.

ಕಳೆದ 10 ವರ್ಷಗಳಲ್ಲಿ ಭಾರತವು ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ, ಆದರೆ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಟಿಸಿ ಫೈನಲ್) ಮೇಲೆ ನಮ್ಮ ಕಣ್ಣಿದೆ ಹೊರತು, ತಂಡದ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೋಮವಾರ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ತಂಡವು ಶ್ರಮಿಸುತ್ತಿರುವ ಟ್ರೋಫಿಯನ್ನು ಗೆದ್ದರೆ ಸಂತೋಷವಾಗುತ್ತದೆ ಎಂದು ಹೇಳಿದರು. ಭಾರತವು 2021 ರಲ್ಲಿ WTC ಫೈನಲ್‌ ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತಿತು. ಇನ್ನುಳಿದಂತೆ ಇತರ ICC ಪಂದ್ಯಾವಳಿಗಳಲ್ಲಿ ಅದು ನಾಕೌಟ್ ಹಂತದಲ್ಲಿ ಸೋತಿದೆ.

“ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ನನ್ನ ಪ್ರಕಾರ ನಾವು ICC ಟ್ರೋಫಿಯನ್ನು ಗೆಲ್ಲಲು ಒತ್ತಡವನ್ನು ಅನುಭವಿಸುತ್ತಿಲ್ಲ. ನಿಸ್ಸಂಶಯವಾಗಿ ಟ್ರೋಫಿ ಗೆದ್ದರೆ ಒಳ್ಳೆಯದು. ಐಸಿಸಿ ಪಂದ್ಯಾವಳಿಯನ್ನು ಗೆಲ್ಲಲು ಸಾಧ್ಯವಾಗುವುದು ಖಂಡಿತವಾಗಿಯೂ ಒಳ್ಳೆಯದು” ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಇದನ್ನೂ ಓದಿ; ತಪ್ಪು ಮಾಡಿದ್ರೂ ಈ ರಾಶಿಯವರನ್ನ ಬಿಟ್ಟುಕೊಡಲ್ಲ ಶನಿದೇವ! ಅಷ್ಟೈಶ್ವರ್ಯ ಕರುಣಿಸಿ ಜೀವನ ಬೆಳಗುತ್ತಾನೆ ಸೂರ್ಯಪುತ್ರ!

“ಹಲವು ಯಶಸ್ಸನ್ನು ಸಾಧಿಸಿದ ನಂತರವೇ ನೀವು ಈ ಸ್ಥಾನಕ್ಕೆ ತಲುಪಲು ಸಾಧ್ಯ. ಆದ್ದರಿಂದ ನಾವು ಅನೇಕ ಸಕಾರಾತ್ಮಕ ಅಂಶಗಳನ್ನು ಹೊಂದಿದ್ದೇವೆ. ನೀವು ಐಸಿಸಿ ಟ್ರೋಫಿ ಗೆದ್ದಿಲ್ಲ ಎಂದ ಮಾತ್ರಕ್ಕೆ ಈ ವಿಷಯಗಳು ಬದಲಾಗುವುದಿಲ್ಲ” ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News