ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡುರಸ್ತೆಯಲ್ಲಿಯೇ ಮಹಿಳೆಯೊಬ್ಬರು ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ(Lady Beat Cab Driver) ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆರೋಪಿ ಮಹಿಳೆ ಚಾಲಕನ ಕಾಲರ್ ಹಿಡಿದು ಥಳಿಸುತ್ತಿರುವುದನ್ನು ಕಾಣಬಹುದು. ಘಟನೆಗೆ ಸಂಬಂಧಿಸಿದಂತೆ ಕ್ಯಾಬ್ ಚಾಲನಿಂದ ದೂರು ಪಡೆದು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಹಿಳೆ ಪತ್ತೆ ಹಚ್ಚಲು ಖಾಕಿಪಡೆ ಪ್ರಯತ್ನ


ಈ ಘಟನೆಯು ಪಶ್ಚಿಮ ಪಟೇಲ್ ನಗರ(Patel Nagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಕೂಟಿ ಸಂಖ್ಯೆಯ ಆಧಾರದಲ್ಲಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಮಹಿಳೆಯನ್ನು ಪತ್ತೆ ಹಚ್ಚಲು ಖಾಕಿಪಡೆ ಈಗ ಪ್ರಯತ್ನಿಸುತ್ತಿದೆ. ಮಾಹಿತಿಯ ಪ್ರಕಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ 2 ನಿಮಿಷಗಳ ವಿಡಿಯೋದಲ್ಲಿ, ನೀಲಿ ಟಿ-ಶರ್ಟ್ ಮತ್ತು ಫೇಸ್ ಮಾಸ್ಕ್ ಧರಿಸಿರುವ ಮಹಿಳೆಯೊಬ್ಬರು ಕ್ಯಾಬ್ ಚಾಲಕನಿಗೆ ತೀವ್ರವಾಗಿ ಥಳಿಸಿದ್ದಾರೆ.


ಇದನ್ನೂ ಓದಿ: Accident : ಸುಶಾಂತ್ ಸಿಂಗ್ ರಜಪೂತ್ ಕುಟುಂಬದ 5 ಜನ ಅಪಘಾತದಲ್ಲಿ ಸಾವು!


ಕ್ಯಾಬ್ ಚಾಲಕ(Cab Driver)ನ ಮೇಲೆ ಮಹಿಳೆ ಹಲ್ಲೆ ನಡೆಸುತ್ತಿದ್ದರೂ ಪಕ್ಕದಲ್ಲಿಯೇ ನಿಂತಿದ್ದ ಜನರು ಮೌನಪ್ರೇಕ್ಷಕರಂತೆ ನೋಡುತ್ತಿದ್ದರು. ಕೆಲವರು ಆಕೆಗೆ ಹಲ್ಲೆ ನಡೆಸದಂತೆ ಸಲಹೆ ನೀಡಿದರೂ ಆಕೆ ಕೇಳಿಸಿಕೊಂಡಿಲ್ಲ. ಅನೇಕರು ತಮ್ಮ ಮೊಬೈಲ್ ನಲ್ಲಿ ಈ ಘಟನೆಯನ್ನು ಸೆರೆ ಹಿಡಿದಿದ್ದಾರೆ.


ಅವಾಚ್ಯ ಶಬ್ದಗಳಿಂದ ನಿಂದನೆ


Cab Driver) ಜಾಗ ನೀಡದಿದ್ದಾಗ ಕೋಪಗೊಂಡ ಮಹಿಳೆ ರಸ್ತೆಯಲ್ಲೇ ಸ್ಕೂಟಿ ನಿಲ್ಲಿಸಿದ್ದಾಳೆ. ಇದಾದ ಬಳಿಕ ಆತನನ್ನು ನಿಂದಿಸಿ ಕ್ಯಾಬ್ ಚಾಲಕನನ್ನು ಹೊರಗೆಳೆದು ಹಲ್ಲೆ ನಡೆಸಿದ್ದಾಳೆ.


ಇದನ್ನೂ ಓದಿ: Kartarpur Sahib Corridor Re-Open: ಇಂದಿನಿಂದ ಭಕ್ತರಿಗಾಗಿ ಮತ್ತೆ ತೆರೆಯಲಿದೆ ಕರ್ತಾರ್‌ಪುರ ಸಾಹಿಬ್ ಕಾರಿಡಾರ್


ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜನರು ಮಹಿಳೆಗೆ ಬುದ್ದಿವಾದ ಹೇಳಿದ್ದಾರೆ. ಅವರ ಮಾತಿಗೆ ಸೊಪ್ಪು ಹಾಕದ ಮಹಿಳೆ ಅವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಕ್ಯಾಬ್ ಚಾಲಕನಿಗೂ ಮನಬಂದಂತೆ ಬೈದು ಹಲ್ಲೆ ಮಾಡಿದ್ದಾಳೆ. ಈ ವಿಡಿಯೋದಲ್ಲಿ ಆಕೆ ಕ್ಯಾಬ್ ಚಾಲಕನ ಶರ್ಟ್ ಹಿಡಿದು ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಕ್ಯಾಬ್ ಡ್ರೈವರ್ ಮೌನವಹಿಸಿ ನಿಂತಿದ್ದ.   


ವಿಡಿಯೋ ವೈರಲ್ ಆಗಿದೆ


ಪೊಲೀಸರ ಮಾಹಿತಿ ಪ್ರಕಾರ ಕಳೆದ ವಾರ ಈ ಘಟನೆ ನಡೆದಿದೆ. ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.  ಆದರೆ ಕ್ಯಾಬ್ ಚಾಲಕ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲವೆಂದು ತಿಳಿದುಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.