Shocking Report: ದೇಶದಲ್ಲಿ ಇದೇ ಕಾರಣಕ್ಕೆ ಹೆಚ್ಚಿನ ಜನರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ..!

ಇತ್ತೀಚಿನ ವರ್ಷಗಳಲ್ಲಿ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB)ದ ದತ್ತಾಂಶಗಳ ಬಗ್ಗೆ ತಿಳಿದುಕೊಂಡರೆ ನಿಮಗೆ ಶಾಕ್ ಆಗುತ್ತದೆ.

Written by - Puttaraj K Alur | Last Updated : Nov 16, 2021, 12:53 PM IST
  • ಭಾರತದಲ್ಲಿ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಅನೇಕರು ಆತ್ಮಹತ್ಯೆಗೆ ಶರಣಾಗುತ್ತಾರೆ
  • ಅತೃಪ್ತರಾಗಿ ವಿವಾಹವಾದ ಹೆಚ್ಚಿನ ಮಂದಿ ವಿಚ್ಛೇದನದ ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ
  • ವೈವಾಹಿಕ ಸಮಸ್ಯೆಗಳಿಂದ 2016 ಮತ್ತು 2020ರ ನಡುವೆ ಸುಮಾರು 37,591 ಜನರು ಆತ್ಮಹತ್ಯೆ
Shocking Report: ದೇಶದಲ್ಲಿ ಇದೇ ಕಾರಣಕ್ಕೆ ಹೆಚ್ಚಿನ ಜನರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ..! title=
ಎನ್‌ಸಿಆರ್‌ಬಿ ಶಾಕಿಂಗ್ ವರದಿ

ನವದೆಹಲಿ: ಮದುವೆಗಳು ಶಾಶ್ವತವಾಗಿ ಇರುತ್ತವೆ ಎಂದು ಭಾರತದಲ್ಲಿ ಸಾಮಾನ್ಯವಾಗಿ ಹೇಳಲಾಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ ವಿಶ್ವಸಂಸ್ಥೆ ಮಹಿಳಾ ಪ್ರಗತಿಯ ವಿಶ್ವ ಮಹಿಳಾ ವರದಿಯ ಪ್ರಕಾರ, ಭಾರತವು ವಿಶ್ವದಲ್ಲೇ ಅತ್ಯಂತ ಕಡಿಮೆ ವಿಚ್ಛೇದನ ದರ ಹೊಂದಿದೆ. 45-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕೇವಲ ಶೇ.1.1ರಷ್ಟು ಮಹಿಳೆಯರು 2010ರ ವೇಳೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಆದರೆ ಎಲ್ಲಾ ಮದುವೆಗಳು ಸಂತೋಷದಿಂದ ಕೂಡುರುತ್ತವೆ ಎಂದರ್ಥವಲ್ಲ.

ಇತ್ತೀಚಿನ ವರ್ಷಗಳಲ್ಲಿ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (National Crime Records Bureau)ದ ದತ್ತಾಂಶಗಳ ಬಗ್ಗೆ ತಿಳಿದುಕೊಂಡರೆ ನಿಮಗೆ ಶಾಕ್ ಆಗುತ್ತದೆ. ಭಾರತದಲ್ಲಿ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಅನೇಕರು ಆತ್ಮಹತ್ಯೆಗೆ ಶರಣಾಗುತ್ತಾರೆ. ಈ ಪೈಕಿ ಅತೃಪ್ತರಾಗಿ ವಿವಾಹ(Unhappy Marriages)ವಾದ ಹೆಚ್ಚಿನ ಮಂದಿ ವಿಚ್ಛೇದನದ ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: Post Office ಈ ಯೋಜನೆಗಳಲ್ಲಿ ಪಿಎಂ ಮೋದಿ ಕೂಡ ಹೂಡಿಕೆ ಮಾಡಿದ್ದಾರೆ, ತಕ್ಷಣವೇ ನೀವು ಲಾಭ ಪಡೆಯಿರಿ

ಕಳೆದ ತಿಂಗಳು ಬಿಡುಗಡೆಯಾದ ಎನ್‌ಸಿಆರ್‌ಬಿ ವರದಿ(NCRB Data)ಯ ಪ್ರಕಾರ, ಭಾರತದಲ್ಲಿ ಅಪಘಾತದ ಸಾವುಗಳು ಮತ್ತು ಆತ್ಮಹತ್ಯೆಗಳು, ವೈವಾಹಿಕ ಸಮಸ್ಯೆಗಳು 2016 ಮತ್ತು 2020ರ ನಡುವೆ ಸುಮಾರು 37,591 ಜನರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದೆ ಎಂದು ತಿಳಿಸಿದೆ. ಅಂದರೆ ಇದರ ಪ್ರಕಾರ ಪ್ರತಿದಿನ ಸರಾಸರಿ 20 ಸಾವುಗಳು ಸಂಭವಿಸಿವೆ. ವಿಚ್ಛೇದನವು 2,688 ಜನರನ್ನು (ಶೇ.7ರಷ್ಟು) ತಮ್ಮ ಜೀವನವನ್ನು ಕೊನೆಗೊಳಿಸಲು ಪ್ರೇರೇಪಿಸಿದೆ ಎಂದು ವರದಿಯು ಬಹಿರಂಗಪಡಿಸಿದೆ. ಅಂದರೆ 13 ಪಟ್ಟು ಹೆಚ್ಚು ಜನರು ವಿಚ್ಛೇದನ-ಸಂಬಂಧಿತ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದುವೆ ಸಂಬಂಧಿ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚು ಎಂದು ವರದಿಯಲ್ಲಿ ತಿಳಿದುಬಂದಿದೆ. ಮದುವೆಗಳು ಆತ್ಮಹತ್ಯೆ(Suiciding in India)ಯಲ್ಲಿ ಕೊನೆಗೊಳ್ಳಲು ಕಾರಣವಾಗಿದೆ ಅಂಥ ತಿಳಿಸಿದೆ. ‘ಮದುವೆ-ಸಂಬಂಧಿತ ಆತ್ಮಹತ್ಯೆಗಳು’ ಅಡಿಯಲ್ಲಿ ಉಲ್ಲೇಖಿಸಲಾದ ಕಾರಣಗಳ ವಿವರವಾದ ವಿಶ್ಲೇಷಣೆಯು ವರದಕ್ಷಿಣೆಯ ಬಗ್ಗೆ ತಿಳಿಸಿದೆ. ವರದಕ್ಷಿಣೆಯಿಂದಾಗಿ ಪ್ರತಿ ವರ್ಷ ಸರಾಸರಿ 2,056 ಆತ್ಮಹತ್ಯೆಗಳು ನಡೆದಿವೆಯಂತೆ. 2,600 ಆತ್ಮಹತ್ಯೆ ಸಾವುಗಳಿಗೆ ವಿಚ್ಛೇದನ ಕಾರಣವಾಗಿದೆ.

ಇದನ್ನೂ ಓದಿ: BIG NEWS : ಪೆಟ್ರೋಲ್-ಡೀಸೆಲ್ ನಂತರ CNG ಬೆಲೆಯಲ್ಲಿ ಭಾರಿ ಏರಿಕೆ! ಹೊಸ ಬೆಲೆ ತಿಳಿಯಿರಿ

ವಿವಾಹೇತರ ಸಂಬಂಧಗಳು ವರ್ಷಕ್ಕೆ 1,100 ಆತ್ಮಹತ್ಯೆಗಳಿಗೆ ಕಾರಣವಾಗಿವೆ ಅಥವಾ 5 ವರ್ಷಗಳ ಒಟ್ಟು 5,737 ಸಾವುಗಳಿಗೆ ಕಾರಣವಾಗಿದೆ. ಆದರೆ ಉಳಿದವುಗಳನ್ನು ಎನ್‌ಸಿಆರ್‌ಬಿ ವರದಿಯಲ್ಲಿ ಕಾರಣಗಳನ್ನು ನಿರ್ದಿಷ್ಟಪಡಿಸದೆ ‘ಇತರರು’ ಎಂದು ವರ್ಗೀಕರಿಸಲಾಗಿದೆ. ಒಟ್ಟಾರೆಯಾಗಿ ವರದಕ್ಷಿಣೆ ಕಾರಣದಿಂದ 10,282 ಆತ್ಮಹತ್ಯೆಗಳು ನಡೆದಿವೆ, ಆದರೆ ಮದುವೆ ಇತ್ಯರ್ಥವಾಗದ ಕಾರಣ 10,584 ಸಾವುಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News