Deer Viral Video: ಯಾವುದೇ ಒಂದು ಪ್ರಾಣಿ ತನ್ನ ಜೀವಕ್ಕೆ ಅಪಾಯ ಎದುರಾದಾಗ ಅದು ಏನು ಬೇಕಾದರೂ ಮಾಡಲು ಸಿದ್ಧವಾಗುತ್ತದೆ ಎಂಬುದನ್ನು ನೀವು ಕೇಳಿರಬಹುದು. ಇಂತಹುದೇ ಒಂದು ಸನ್ನಿವೇಶದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೋ ನೋಡಿದರೆ ನೀವೂ ಕೂಡ ಒಂದು ಕ್ಷಣ ಬೆಚ್ಚಿಬೀಳುವಿರಿ.  ಜೀವಕ್ಕೆ ಅಪಾಯ ಬಂದಾಗ ಮತ್ತು ಕೊನೆಯ ಕ್ಷಣದಲ್ಲಿ ಜಿಂಕೆ ಮಾಡಿರುವ ತಂತ್ರವನ್ನು ಕಂಡು ನೀವೂ ಕೂಡ ನಿಬ್ಬೆರಗಾಗುವಿರಿ, ಇದರಿಂದಾಗಿ ಅದರ ಮುಂದೆ ನಿಂತ ಎರಡೂ ಕ್ರೂರ ಮೃಗಗಳು ಕಣ್ತೆರೆದು ನೋಡುತ್ತಲೇ ನಿಂತಿರುವುದನ್ನು ನೀವು ವೀಡಿಯೊದಲ್ಲಿ ಕಾಣಬಹುದು. ಅದೇನೇ ಇದ್ದರೂ ಜಿಂಕೆ ತನ್ನ ಪ್ರಾಣ ರಕ್ಷಿಸಿಕೊಳ್ಳುವಲ್ಲಿ ಯಃಶಸ್ವಿಯಾಗುತ್ತದೆ ಮತ್ತು ಅಲ್ಲಿಂದ ಪಲಾಯನಗೈದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಚಲಿಸುತ್ತಿರುವ ಬೈಕ್ ಮೇಲೆ ಪತಿಯಿಂದ ಏನು ಮಾಡಿಸುತ್ತಿದ್ದಾಳೆ ಪತ್ನಿ ನೋಡಿ...


ಸತ್ತಂತೆ ನಟಿಸಿದ ಜಿಂಕೆ
ವನ್ಯಜೀವಿಗಳಿಗೆ ಸಂಬಂಧಿಸಿದ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಗೊಂಡ ಬಳಿದ ಬಳಕೆದಾರರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ವೀಡಿಯೋದಲ್ಲಿ ಒಂದು ಚಿರತೆ, ಜಿಂಕೆ ಮತ್ತು ಕತ್ತೆಕಿರುಬ ಇದೆ. ತನ್ನ ಮುಂದೆ ಎರಡು ಅಪಾಯಕಾರಿ ಪ್ರಾಣಿಗಳನ್ನು ನೋಡಿ, ಜಿಂಕೆ ಅದ್ಭುತವಾದ ಯೋಜನೆಯನ್ನು ಮಾಡುವುದನ್ನು ನೀವು ನೋಡಬಹುದು ಮತ್ತು ಇದರಿಂದ ಅದು ತನ್ನ ಜೀವವನ್ನು ಉಳಿಸಿಕೊಂಡಿದೆ. ಅಷ್ಟೇ ಅಲ್ಲ ಅದು  ಎರಡೂ ಕ್ರೂರ  ಪ್ರಾಣಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ತನ್ನ  ಬಳಿ ಇರುವ ಎರಡೂ ಕ್ರೂರ ಮೃಗಗಳು ಬಂದಿರುವುದನ್ನು ನೋಡಿದ ಜಿಂಕೆ ಮೊದಲು  ಸತ್ತಂತೆ ನಟಿಸಲು ಪ್ರಾರಂಭಿಸುತ್ತಾನೆ. ಈ ಮಹತ್ತರವಾದ ಯೋಜನೆಯಲ್ಲಿ ಅದು ಯಶಸ್ವಿ ಕೂಡ ಆಗುತ್ತದೆ. ವಿಡಿಯೋ ನೋಡಿ-


Viral Video: ಎಪ್ಪೋ... ! 3 ಕೆಜಿ ತೂಕದ ಒಂದು ಬಾಳೆಹಣ್ಣು, ನೀವೆಂದಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ? ವಿಡಿಯೋ ನೋಡಿ..

ಕಾಡಿನ ಭೀಕರ ಪ್ರಾಣಿಗಳು ದುರ್ಬಲವಾಗಿರುವ ಜಿಂಕೆಗಳಂತಹ ಪ್ರಾಣಿಗಳನ್ನು ತಮ್ಮ ಬೇಟೆಯಾಗಿಸುವುದನ್ನು ನೀವು ಆಗಾಗ್ಗೆ ನೋಡಿರಬೇಕು. ಸಿಂಹ, ಚಿರತೆ ಮತ್ತು ಹುಲಿಗಳಂತಹ ಪ್ರಾಣಿಗಳು ಜಿಂಕೆಗಳನ್ನು ಕ್ಷಣಾರ್ಧದಲ್ಲಿ ಹಿಡಿಯುತ್ತವೆ. ಹೆಚ್ಚಿನ ಬಾರಿ ಜಿಂಕೆಗಳು ಅವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಆದರೆ ಕೆಲವೊಮ್ಮೆ ಜಿಂಕೆ ತನ್ನ ಅದ್ಭುತ ತಂತ್ರದಿಂದ ತಮ್ಮ ಜೀವವನ್ನು ಉಳಿಸಿಕೊಂಡು ಅವುಗಳಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗುತ್ತವೆ. ವೈರಲ್ ವೀಡಿಯೋದಲ್ಲಿಯೂ ಇದೇ ರೀತಿಯ ದೃಶ್ಯ ಕಂಡು ಬರುತ್ತಿದೆ. ತನ್ನ ಮುಂದೆ ಚಿರತೆ ಮತ್ತು ಕತ್ತೆಕಿರುಬವನ್ನು ನೋಡಿದ ಜಿಂಕೆ ನೇರವಾಗಿ ನೆಲದ ಮೇಲೆ ಮಲಗಿ ಸಾಯುವಂತೆ ವರ್ತಿಸುವುದನ್ನು ನೀವು ನೋಡಬಹುದು. ಇದರ ನಂತರ, ಎರಡೂ ಪ್ರಾಣಿಗಳು ಅದು ಸತ್ತಿದೆ ಎಂದು ಪರಿಗಣಿಸಿ ಸ್ವಲ್ಪ ನಿರಾಯಾಸವಾಗುತ್ತವೆ ಮತ್ತು ಪರಸ್ಪರ ಹೆದರಿಸುವ ಸಲುವಾಗಿ ಜಿಂಕೆಯಿಂದ ದೂರ ಸರಿಯುತ್ತವೆ. ಅಷ್ಟರಲ್ಲಿಯೇ, ಇಂತಹ ಛಾನ್ಸ್ ಲೈಫಲ್ಲೆ ಮತ್ತೆ ಬರಲ್ಲ ಎಂದು ಭಾವಿಸಿರುವ ಜಿಂಕೆ, ಚಂಗನೆ ಜಿಗಿದು ಎದ್ದು ನಿಂತು ಅಲ್ಲಿಂದ ದೂರಕ್ಕೆ ಓಡಿ ಹೋಗುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.