ನವದೆಹಲಿ: ಖಾಸಗಿ ವಲಯದ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಐಡಿಯಾ, ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಕಂತುಗಳಲ್ಲಿ 6,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ದೂರಸಂಪರ್ಕ ಇಲಾಖೆಗೆ ಪಾವತಿಸಿವೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಭಾರತಿ ಏರ್‌ಟೆಲ್ 3,042 ಕೋಟಿ ರೂ.ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಕ್ರಮವಾಗಿ 1,053 ಕೋಟಿ ಮತ್ತು 1,950 ಕೋಟಿ ರೂಗಳನ್ನು ಟೆಲಿಕಾಂ ಇಲಾಖೆಗೆ ಪಾವತಿಸಿವೆ ಎಂದು ಎಎನ್‌ಐ ತಿಳಿಸಿದೆ. ಈ ಪಾವತಿಯನ್ನು 2014 ರ ತರಂಗದ ಹರಾಜಿನಲ್ಲಿ ಏರ್ ವೇವ್ಸ್ ಖರೀದಿ ಸಂಬಂಧಿಸಿವೆ ಎನ್ನಲಾಗಿದೆ.


ಮಂಗಳವಾರ ಗಡುವು ಮುಗಿಯುತ್ತಿದ್ದಂತೆ ಖಾಸಗಿ ಕಂಪನಿಗಳಿಂದ ತರಂಗದ ಬಾಕಿ ಪಾವತಿ ಬಂದಿದೆ ಎನ್ನಲಾಗಿದೆ. ವೊಡಾಫೋನ್ ಐಡಿಯಾ ಒಟ್ಟು ಆದಾಯ (ಎಜಿಆರ್) ಬಾಕಿ 53,000 ಕೋಟಿ ರೂ.ಅದರಲ್ಲಿ ಕಂಪನಿಯು 3,500 ಕೋಟಿ ರೂ.ಪಾವತಿ ಮಾಡಿದೆ ಎನ್ನಲಾಗಿದೆ. ಇನ್ನೊಂದೆಡೆಗೆ ಭಾರತಿ ಏರ್‌ಟೆಲ್ ಎಜಿಆರ್ ಸಂಬಂಧಿತ ಬಾಕಿ ಹಣವನ್ನು 18,000 ಕೋಟಿ ರೂ.ಗಳನ್ನು ಇಲಾಖೆಗೆ ಪಾವತಿಸಿದೆ.


ದೇಶದ ಟೆಲಿಕಾಂ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆಯು ಕಂಪೆನಿಗಳನ್ನು ಸಾಲಕ್ಕೆ ನೂಕಿದೆ ಮತ್ತು ಇದರಿಂದಾಗಿ ಕೆಲವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದತ್ತ ಚಿಂತಿಸಲು ಕಾರಣವಾಗಿದೆ ಎನ್ನಲಾಗಿದೆ.