ಭಾರತದಲ್ಲಿ ಬಂದ್ ಆಗಲಿದೆ ವೊಡಾಫೋನ್ ಸೇವೆ ?
ಭಾರತದಲ್ಲಿ ಹೆಚ್ಚಿನ ತೆರಿಗೆ ಮತ್ತು ಶುಲ್ಕಗಳನ್ನು ಆಪರೇಟರ್‌ಗಳ ಮೇಲೆ ವಿಧಿಸುವುದನ್ನು ಸರ್ಕಾರ ನಿಲ್ಲಿಸದಿದ್ದಲ್ಲಿ ತನ್ನ ಭವಿಷ್ಯವು ಸಂಕಷ್ಟದಲ್ಲಿದೆ ಎಂದು ವೊಡಾಫೋನ್ ಹೇಳಿದೆ.ಪರವಾನಗಿ ಶುಲ್ಕದ ಕುರಿತು ನ್ಯಾಯಾಲಯದ ತೀರ್ಪಿನ ನಂತರ ಅದರ ಮೊದಲಾರ್ಧದಲ್ಲಿ 1.9 ಬಿಲಿಯನ್ ಯೂರೋ ಗ್ರೋಪ್ ಗೆ ನಷ್ಟವಾಗಿದೆ ಎನ್ನಲಾಗಿದೆ.
ನವದೆಹಲಿ: ಭಾರತದಲ್ಲಿ ಹೆಚ್ಚಿನ ತೆರಿಗೆ ಮತ್ತು ಶುಲ್ಕಗಳನ್ನು ಆಪರೇಟರ್‌ಗಳ ಮೇಲೆ ವಿಧಿಸುವುದನ್ನು ಸರ್ಕಾರ ನಿಲ್ಲಿಸದಿದ್ದಲ್ಲಿ ತನ್ನ ಭವಿಷ್ಯವು ಸಂಕಷ್ಟದಲ್ಲಿದೆ ಎಂದು ವೊಡಾಫೋನ್ ಹೇಳಿದೆ. ಪರವಾನಗಿ ಶುಲ್ಕದ ಕುರಿತು ನ್ಯಾಯಾಲಯದ ತೀರ್ಪಿನ ನಂತರ ಅದರ ಮೊದಲಾರ್ಧದಲ್ಲಿ 1.9 ಬಿಲಿಯನ್ ಯೂರೋ ಗ್ರೂಪ್ ಗೆ ನಷ್ಟವಾಗಿದೆ ಎನ್ನಲಾಗಿದೆ.
2018 ರಲ್ಲಿ ವೊಡಾಫೋನ್ ಐಡಿಯಾ ಸೆಲ್ಯುಲಾರ್‌ನೊಂದಿಗೆ ಜಂಟಿ ಉದ್ಯಮವನ್ನು ವೊಡಾಪೋನ್ ರೂಪಿಸಿತ್ತು, ಈಗ ಕಂಪನಿ ನಷ್ಟದ ಬಗ್ಗೆ ಉಲ್ಲೇಖಿಸಿರುವ ಮುಖ್ಯ ಕಾರ್ಯನಿರ್ವಾಹಕ ನಿಕ್ ರೀಡ್, 'ಬಹಳ ಸಮಯದಿಂದ ಇದು ತುಂಬಾ ಸವಾಲಿನ ಸನ್ನಿವೇಶವಾಗಿದೆ, ಆದರೆ ಇದು ವೊಡಾಫೋನ್ 30% ಪಾಲನ್ನು ಹೊಂದುವ ಮೂಲಕ ಇಂದಿಗೂ ಗಣನೀಯ ಮಾರುಕಟ್ಟೆಯಾಗಿ ಉಳಿದಿದೆ. ಆರ್ಥಿಕವಾಗಿ ಬೆಂಬಲವಿಲ್ಲದ ನಿಯಂತ್ರಣ, ಅತಿಯಾದ ತೆರಿಗೆಗಳ ಮೂಲಕ ಭಾರವಿದೆ ಮತ್ತು ಅದರ ಮೇಲೆ ನಮಗೆ ಕೋರ್ಟ್ ನ ನಕಾರಾತ್ಮಕ ತೀರ್ಪು" ಎಂದು ಅವರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ನಿಯಂತ್ರಕ ಶುಲ್ಕವನ್ನು ಕೇಂದ್ರೀಕರಿಸಿದ ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ಸ್ಪೆಕ್ಟ್ರಮ್ ಪಾವತಿ, ಕಡಿಮೆ ಪರವಾನಗಿ ಶುಲ್ಕ ಮತ್ತು ತೆರಿಗೆಗಳು ಮತ್ತು ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡುವ ಕುರಿತು ಎರಡು ವರ್ಷಗಳ ನಿಷೇಧವನ್ನು ಒಳಗೊಂಡಿರುವ ಪರಿಹಾರ ಪ್ಯಾಕೇಜ್ ನ್ನು ವೊಡಾಫೋನ್ ಸರ್ಕಾರವನ್ನು ಕೇಳಿದೆ. ಒಂದು ವೇಳೆ ಸರ್ಕಾರ ಪರಿಹಾರ ನೀಡದಿದ್ದಲ್ಲಿ ಕಂಪನಿಗೆ ಸಂಕಷ್ಟಕ್ಕೆ ಸಿಲುಕಲಿದೆ ಎನ್ನಲಾಗಿದೆ.