ನವದೆಹಲಿ: ಬಿಜೆಪಿ ಸಂಸದ  ಸಾಕ್ಷಿ ಮಹಾರಾಜ್ ತಮಗೆ ಮತ ಚಲಾಯಿಸದಿದ್ದರೆ ಶಾಪ ಹಾಕುವುದಾಗಿ ವಿವಾದಾತ್ಮಕ  ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಆಗಾಗ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸುದ್ದಿಯಲ್ಲಿರುವ ಸಾಕ್ಷಿ ಮಹಾರಾಜ್ ಈಗ "ನಾನು ಸನ್ಯಾಸಿ ನೀವು ಗೆಲ್ಲುವಂತೆ ಮಾಡಿದರೆ ನಾನು ಗೆಲ್ಲುತ್ತೇನೆ; ಇಲ್ಲದಿದ್ದರೆ ದೇವಸ್ಥಾನದಲ್ಲಿ ಭಜನ್ ಮತ್ತು ಕೀರ್ತನ್ ಮಾಡುತ್ತೇನೆ; ಆದರೆ ಇಂದು ನಾನು ನಿಮ್ಮ ಮತಗಳನ್ನು ಪಡೆಯಲುಇಲ್ಲಿದ್ದೇನೆ. ನಿಮ್ಮ ಬಾಗಿಲಲ್ಲಿ ನಿಂತು ಪ್ರಾರ್ಥಿಸುತ್ತಿದ್ದೇನೆ, ನೀವು ಒಂದು ವೇಳೆ ಸನ್ಯಾಸಿಯನ್ನು ನಿರಾಕರಿಸಿದರೆ, ನಾನು ನಿನ್ನ ಕುಟುಂಬದ ಸಂತೋಷವನ್ನು ತೆಗೆದುಕೊಂಡು ನಿಮ್ಮ ಮೇಲೆ ಶಾಪ ಹಾಕುತ್ತೇನೆ" ಎಂದು ಹೇಳಿಕೆ ನೀಡಿದ್ದಾರೆ.


ಸಾಕ್ಷಿ ಮಹಾರಾಜ ರ ಹೇಳಿಕೆ ಕುರಿತಾಗಿ ಬಿಜೆಪಿ ಇನ್ನು ಯಾವುದೇ ಹೇಳಿಕೆ ನೀಡಿಲ್ಲ. ಉನ್ನಾವೋದ ಸಂಸದರಾಗಿರುವ ಅವರು ಹಿಂದೆ ಹಲವು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.ಈಗ ಮತ ಪಡೆಯಲು ಈ ರೀತಿ ಹೇಳಿಕೆ ನೀಡಿರುವುದು ಎಲ್ಲರಲ್ಲಿ ಅಚ್ಚರಿಮೂಡಿಸಿದೆ.


ಏಪ್ರಿಲ್ 29 ರಂದು ನಡೆಯಲಿರುವ ನಾಲ್ಕನೇ ಹಂತದ ಚುನಾವಣೆಯಲ್ಲಿ  ಸಾಕ್ಷಿ ಮಹಾರಾಜ್ ಮತ್ತೊಂದು ಅವಧಿಗೆ ಆಯ್ಕೆ ಆಗಲು ಇಚ್ಚಿಸಿದ್ದಾರೆ.