ನವದೆಹಲಿ: ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. 20 ರಾಜ್ಯಗಳ 91 ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಾಕಷ್ಟು ಜನರು ತಮ್ಮ ಹಕ್ಕನ್ನು ಚಲಾಯಿಸಲು ಬಹಳ ಉತ್ಸುಕರಾಗಿದ್ದು, ಬೆಳಿಗ್ಗೆಯಿಂದಲೇ ಮತಗಟ್ಟೆಯತ್ತ ತೆರಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದ ನಾಗಪುರದಲ್ಲಿ ಮತಗಟ್ಟೆ ಸಂಖ್ಯೆ 216ರಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಮತ ಚಲಾಯಿಸಿದರು. ಮತದಾನದ ಬಳಿಕ ಮತಗಟ್ಟೆಯಿಂದ ಹೊರಬಂದ ಮೋಹನ್ ಭಾಗವತ್, 'ಮತದಾನ ನಮ್ಮ ಕರ್ತವ್ಯ, ಪ್ರತಿಯೊಬ್ಬರೂ ಮತ ಚಲಾಯಿಸಿ' ಎಂದು ಕರೆ ನೀಡಿದರು.



20 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ:
ಮೊದಲ ಹಂತದಲ್ಲಿ ಆಂಧ್ರ ಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ, ಮೇಘಾಲಯ, ಉತ್ತರಾಖಂಡ, ಮಿಜೋರಾಂ, ನಾಗಲ್ಯಾಂಡ್, ಸಿಕ್ಕಿಂನ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ. 


ಇದಲ್ಲದೆ ಉತ್ತರಪ್ರದೇಶದ 8 ಲೋಕಸಭಾ ಕ್ಷೇತ್ರಗಳು(ಸಹರಾಪುರ್, ಕೈರಾನಾ, ಮುಜಫರ್ಪುರ, ಬಿಜ್ನರ್, ಮೀರತ್, ಬಗ್ಪತ್, ಘಜಿಯಾಬಾದ್ ಮತ್ತು ನೋಯ್ಡಾ), ಬಿಹಾರದ 4 ಕ್ಷೇತ್ರಗಳಲ್ಲಿ(ಔರಂಗಾಬಾದ್, ಗಯಾ, ನಾವಾಡ ಮತ್ತು ಜಮುಯಿ), ಅಸ್ಸಾಂನ 5 ಲೋಕಸಭಾ ಕ್ಷೇತ್ರಗಳು ಹಾಗೂ ಮಹಾರಾಷ್ಟ್ರದ 7, ಒಡಿಸಾದ 4 ಮತ್ತು ಪಶ್ಚಿಮ ಬಂಗಾಳದ ಎರಡು ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.