Vultures Emergency Meeting: ರಣಹದ್ದುಗಳು ಬೇಟೆಯ ಪಕ್ಷಿಗಳು, ಇವುಗಳು ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿವೆ. ರಣಹದ್ದುಗಳು ಭಾರೀ ಎತ್ತರದ ಪಕ್ಷಿಗಳು, ಅವುಗಳ ಕೊಕ್ಕು ಬೇಟೆಯಾಡಲು ಅನುಕೂಲವಾಗುವಂತೆ ಬಲವಾಗಿರುತ್ತದೆ. ಒಂದು ರೀತಿಯಲ್ಲಿ, ರಣಹದ್ದುಗಳು ಸ್ಕ್ಯಾವೆಂಜರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ, ಇವುಗಳು ಸತ್ತ ಪ್ರಾಣಿಗಳನ್ನು ತಿನ್ನುವ ಮೂಲಕ ರೋಗ ಹರಡಲು ಅನುಮತಿಸುವುದಿಲ್ಲ. ಆದರೆ, ಈಗ ಪ್ರಪಂಚದಿಂದ ರಣಹದ್ದುಗಳು ಕಡಿಮೆಯಾಗುತ್ತಿವೆ. ವರದಿಯೊಂದರ ಪ್ರಕಾರ, ಕಳೆದ ಒಂದು ದಶಕದಲ್ಲಿ ಭಾರತ ಮತ್ತು ಅದರ ನೆರೆಯ ದೇಶಗಳಲ್ಲಿ ರಣಹದ್ದುಗಳ ಸಂಖ್ಯೆ 90 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ತುರ್ತು ಸಭೆ ನಡೆಸಿದ ರಣಹದ್ದುಗಳು!
ಕೆಲವು ವರ್ಷಗಳ ಹಿಂದಿನವರೆಗೂ ಹಳ್ಳಿಗಳಲ್ಲಿ ರಣಹದ್ದುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದದ್ದೂ ನೆನಪಾಗುತ್ತದೆ. ಆದರೀಗ ಹಳ್ಳಿಗಳಲ್ಲಿ ರಣಹದ್ದುಗಳ ಕುರುಹು ಕೂಡ ಇಲ್ಲ. ಆದರೆ, ಕುತೂಹಲಕಾರಿಯಾಗಿ ಇತ್ತೀಚಿನ ದಿನಗಳಲ್ಲಿ ರಣಹದ್ದುಗಳಿಗೆ ಸಂಬಂಧಿಸಿದ ವೀಡಿಯೊ ಇಂಟರ್ನೆಟ್‌ನಲ್ಲಿ (Internet) ತೀವ್ರವಾಗಿ ವೈರಲ್ ಆಗುತ್ತಿದೆ. ಈ ವೀಡಿಯೊ ತುಂಬಾ ಆಸಕ್ತಿದಾಯಕವಾಗಿದೆ.


ಇದನ್ನೂ ಓದಿ- Black Cobra: ಮದವೇರಿದ ಕಾಳಿಂಗ ಸರ್ಪದ ರೋಷವೇಷ, ಹೇಗಿದೆ ನೋಡಿ..!


ಈ ಅಪರೂಪದ ವೈರಲ್ ವಿಡಿಯೋದಲ್ಲಿ (Viral Video) ರಸ್ತೆ ಬದಿಯಲ್ಲಿ ರಣಹದ್ದುಗಳ ಹಿಂಡು ಕುಳಿತಿರುವುದು ಕಂಡು ಬರುತ್ತಿದೆ. ಒಮ್ಮೆಗೆ ನೋಡಲು ರಣಹದ್ದುಗಳೆಲ್ಲಾ ಒಟ್ಟಿಗೆ ಸೇರಿ ಸಭೆ ನಡೆಸುತ್ತಿರುವಂತಿದೆ.  ಇದಾದ ನಂತರ ಎಲ್ಲಾ ರಣಹದ್ದುಗಳು ಹತ್ತಿರ ಹೋಗಿ ಕುಳಿತುಕೊಳ್ಳುತ್ತವೆ. ಹೀಗೆ ಒಟ್ಟಿಗೆ ಕೂತಿರುವ ರಣಹದ್ದುಗಳನ್ನು ನೋಡಿದರೆ ನಿಮಗೂ ಸಹ ರಣಹದ್ದುಗಳು ಯಾವುದೋ ದೊಡ್ಡ ವಿಚಾರದ ಬಗ್ಗೆತುರ್ತು ಸಭೆ ನಡೆಯುತ್ತಿವೆಯೇನೋ ಅನ್ನಿಸುತ್ತದೆ. 


ಈ ಅಪರೂಪದ ವಿಡಿಯೋವನ್ನು ನೀವೂ ಒಮ್ಮೆ ನೋಡಿ...


ಜೀಪ್ ಮೇಲೆ ದಾಳಿಗೆ ಮುಂದಾದ ಆನೆ... ಮುಂದೇನಾಯ್ತು ನೀವೇ ನೋಡಿ...


ಐಪಿಎಸ್ ಅಧಿಕಾರಿ ಈ ವಿಡಿಯೋ ಶೇರ್ ಮಾಡಿದ್ದಾರೆ:
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರು ತಮಾಷೆಯ ಶೀರ್ಷಿಕೆಯನ್ನು ಬರೆದಿದ್ದಾರೆ. ಕೆಲವು ಗಂಭೀರ ವಿಷಯಗಳ ಕುರಿತು ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಅವರು ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೊ ಸಖತ್ ವೈರಲ್ ಆಗುತ್ತಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.