ನವದೆಹಲಿ: ಭಾರತದಲ್ಲಿನ ಸಣ್ಣ ರೈತರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವಾಲ್ ಮಾರ್ಟ್ (Walmart) ಫೌಂಡೇಶನ್ ಒಟ್ಟು 180 ಕೋಟಿ ರೂ.ಗಳ ಆರ್ಥಿಕ ಸಹಾಯ ಘೋಷಣೆ ಮಾಡಿದೆ. ಎರಡು ಹೊಸ ಅನುದಾನಗಳ ಮೂಲಕ NGO ಗಳಾದ ಟೈನಜರ್ (Tanager) ಹಾಗೂ ಪ್ರದಾನ (Pradan)ಗಳಿಗೆ ಈ ಧನಸಹಾಯ ನೀಡುವುದಾಗಿ ವಾಲ್ ಮಾರ್ಟ್ ಫೌಂಡೇಶನ್ ಹೇಳಿದೆ. ಈ ಏನ್.ಜಿ.ಓ ಗಳು ರೈತರಿಗೆ ಸುಲಭವಾಗಿ ಮಾರುಕಟ್ಟೆಗೆ ತಲುಪಲು ಸಹಾಯ ಮಾಡಲಿವೆ.


COMMERCIAL BREAK
SCROLL TO CONTINUE READING

Aslo Read- ದೇಶದ ಅನ್ನದಾತನಿಗೆ ಭಾರಿ ನೆಮ್ಮದಿಯ ಸುದ್ದಿ ನೀಡಿದ PM Modi Government


ಈ ಎರಡೂ NGOಗಳು ರೈತರ ಉತ್ಪಾದಕ ಸಂಘಟನೆಗಳ ಮೂಲಕ ಮಹಿಳಾ ರೈತರಿಗೆ ಅವಕಾಶ ಸೃಷ್ಟಿಸುವ ಕೆಲಸದಲ್ಲಿ ವಿಶೇಷವಾಗಿ ಗಮನಹರಿಸಲಿವೆ.


Also Read-ಫ್ಲಿಪ್'ಕಾರ್ಟ್'ನ ಶೇ.77 ಷೇರುಗಳನ್ನು ಖರೀದಿಸಿದ ವಾಲ್ಮಾರ್ಟ್


COVID-19 ಸಾಂಕ್ರಾಮಿಕ ರೋಗವು ಭಾರತದ ರೈತರ ಮೇಲೆ ಒತ್ತಡವನ್ನು ಹೆಚ್ಚಿಸಿದೆ ಎಂದು ವಾಲ್ಮಾರ್ಟ್ ಪ್ರತಿಷ್ಠಾನದ ಅಧ್ಯಕ್ಷ ಕ್ಯಾಥ್ಲೀನ್ ಮೆಕ್ಲಾಫ್ಲಿನ್ ಹೇಳಿದ್ದಾರೆ. ಮಹಿಳಾ ರೈತರು ಮನೆಯಲ್ಲಿ ಪ್ರತ್ಯೇಕ ಜವಾಬ್ದಾರಿಗಳನ್ನು ಎದುರಿದಬೇಕಾಗುತ್ತಿದ್ದು, ಅವರ ಆದಾಯ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.


Also Read-'Saksham'' ಮೊಬೈಲ್ ಆಪ್ ಬಿಡುಗಡೆ ಮಾಡಿದ Modi Government... ಏನಿದರ ಲಾಭ?


ಈ ಎರಡು ಹೊಸ ಅನುದಾನದೊಂದಿಗೆ, ವಾಲ್ಮಾರ್ಟ್ ಫೌಂಡೇಶನ್ ಭಾರತದಲ್ಲಿ 8 NGOಗಳೊಂದಿಗೆ ಸೇರಿ ಒಟ್ಟು 15 ಮಿಲಿಯನ್ ಹೂಡಿಕೆ ಮಾಡಿದೆ. ಪ್ರಸ್ತುತ ಅದು ದೇಶದ ಸುಮಾರು 80 ಸಾವಿರ ಮಹಿಳಾ ರೈತರು ಸೇರಿದಂತೆ ಒಟ್ಟು 1.40,000 ಕ್ಕಿಂತ ಅಧಿಕ ರೈತರ ಸಹಾಯ ಮಾಡುವಲ್ಲಿ ನಿರತವಾಗಿದೆ.


Also Read-ರೈತರಿಗಾಗಿ Modi Government ಹೊತ್ತು ತಂದಿದೆ ಲಾಭದ ಯೋಜನೆ, ಸಿಗಲಿದೆ ಶೇ.80 ರಷ್ಟು ಸಬ್ಸಿಡಿ


ಇನ್ನೊಂದೆಡೆ ಕೇಂದ್ರ ಸರ್ಕಾರ ಕೂಡ ರೈತರ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ನಿರತವಾಗಿದೆ. ಕೇಂದ್ರದಲ್ಲಿರುವ ಮೋದಿ ಸರ್ಕಾರ (Modi Government) 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಈ ಗುರಿಯನ್ನು ಸಾಧಿಸಲು ಸರ್ಕಾರವು ರೈತರ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಿಗೆ ಸರ್ಕಾರ ಹಲವಾರು ಪ್ಯಾಕೇಜ್‌ಗಳನ್ನು ಘೋಷಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.