ನವದೆಹಲಿ: ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ವತಿಯಿಂದ ಸೋಮವಾರ 'Saksham' ಹೆಸರಿನ ಮೊಬೈಲ್ ಆಪ್ ಬಿಡುಗಡೆಗೊಳಿಸಲಾಗಿದೆ. ಸಚಿವಾಲಯದ ಸಚಿವ ನಾಗೇಂದ್ರ ನಾಥ್ ಸಿನ್ಹಾ ಈ ಆಪ್ ಬಿಡುಗಡೆ ಮಾಡಿದ್ದಾರೆ. ಈ ಮೊಬೈಲ್ ಆಪ್ ಮೂಲಕ ಸೆಲ್ಫ್ ಹೆಲ್ಪ್ ಗ್ರೂಪ್ಸ್ ಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬ್ಯಾಂಕ್ ಗಳಿಗೆ ಜೋಡಿಸಲಾಗುವುದು ಹಾಗೂ ಆರ್ಥಿಕ ಜಾಗೃತಿ ಮೂಡಿಸಲಾಗುವುದು.
ಈ ಆಪ್ ನಿಂದ ಯಾವ ಸಹಾಯ ಸಿಗಲಿದೆ?
ಗ್ರಾಮೀಣ ಭಾಗಗಳಲ್ಲಿ ಆರ್ಥಿಕ ಜಾಗೃತಿ ಮೂಡಿಸುವುದರ ಜೊತೆಗೆ ಬ್ಯಾಂಕ್ ಗಳ ಮೂಲಕ ಆದಷ್ಟು ಹೆಚ್ಚು ಸ್ವಸಹಾಯ ಗುಂಪುಗಳನ್ನು ತಲುಪುವುದು ಮತ್ತು ಅವುಗಳನ್ನು ಆರ್ಥಿಕವಾಗಿ ಆತ್ಮನಿರ್ಭರಗೊಳಿಸುವುದು ಈ ಆಪ್ ನ ಪ್ರಮುಖ ಉದ್ದೇಶವಾಗಿದೆ.
10 ಸಾವಿರ Farmer Producer Organizationsಗಳನ್ನು ರಚಿಸಲಾಗುವುದು
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, ದೇಶಾದ್ಯಂತ ಸುಮಾರು 10 ಸಾವಿರ ಕೃಷಿ ಉತ್ಪಾದಕ ಸಂಘಟನೆಗಳನ್ನು ರಚಿಸುವುದರಿಂದ ರೈತ ಸಮೂಹಗಳಿಗೆ ಉತ್ತಮ ಸೌಕರ್ಯಗಳು ಸಿಗಲಿವೆ ಎಂದಿದ್ದಾರೆ. ಅಷ್ಟೇ ಅಲ್ಲ, ದೇಶಾದ್ಯಂತ ಶೇ.60 ರಷ್ಟು ರೈತರು ಸಣ್ಣ ಮತ್ತು ಅಲ್ಪಸಂಖ್ಯಾತರಾಗಿದ್ದು, ಇವರು ಎಫ್ ಪಿ ಓ ಗಳ ಮೂಲಕ ಗ್ರಾಮೀಣ ಆರ್ಥಿಕತೆಗೆ ಮತ್ತಷ್ಟು ಬಲ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
Secretary, RD @Nagendra_NSinha today launched “Saksham” a Mobile App on #SHG Bank Linkage & Financial Inclusion via VC, which helps to catalyse the delivery of financial services through #financialliteracy. @nstomar @SadhviNiranjan @PIB_India @mygovindia @PMOIndia @MIB_India pic.twitter.com/BPIJSFT4Ct
— Ministry of Rural Development, Government of India (@MoRD_GOI) July 6, 2020
Modi ಸರ್ಕಾರದ ಪ್ಲಾನ್ ಏನು?
ಕೃಷಿ ಸಚಿವರ ಪ್ರಕಾರ, ಆರಂಭದಲ್ಲಿ ಪ್ರತಿ ಎಫ್ಪಿಒನಲ್ಲಿ ಕನಿಷ್ಠ ಸದಸ್ಯರ ಸಂಖ್ಯೆ ಮೇಲ್ಮೈ ಪ್ರದೇಶದಲ್ಲಿ 300 ಮತ್ತು ಈಶಾನ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ 100 ಇರಲಿದೆ. ಸಣ್ಣ, ಅಲ್ಪ ಮತ್ತು ಭೂಹೀನ ರೈತರಿಗಾಗಿ ಎಫ್ಪಿಒಗಳನ್ನು ರಚಿಸುವ ಮೂಲಕ, ವಿವಿಧ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು ಮತ್ತು ಅವುಗಳನ್ನು ಬಲಪಡಿಸಬಹುಡು. ಸಂಸ್ಥೆಗಳ ಚಟುವಟಿಕೆಗಳನ್ನು ಸದಸ್ಯರು ಉತ್ತಮ ಮಾರುಕಟ್ಟೆ ಮತ್ತು ತಂತ್ರಜ್ಞಾನ, ಹಣಕಾಸು ಮತ್ತು ಇಳುವರಿಗಾಗಿ ಉತ್ತಮ ಬೆಲೆಗಳನ್ನು ಪಡೆಯುವ ರೀತಿಯಲ್ಲಿ ನಿರ್ವಹಿಸಲಾಗುವುದು. ವಿಶೇಷವೆಂದರೆ, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಪ್ರಧಾನಿ ಹೊಂದಿದ್ದಾರೆ. ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಬಗ್ಗೆ ಬಗ್ಗೆ ಎಫ್ಪಿಒಗಳು ಗಮನ ಹರಿಸಲಿವೆ.