ಕನಸಿನ ಮನೆ ಖರೀದಿಸಬೇಕೆ? ಹೀಗೆ 2.67 ಲಕ್ಷ ರೂ.ರಿಯಾಯಿತಿ ಪಡೆಯಿರಿ
ಒಂದು ವೇಳೆ ನೀವೂ ಕೂಡ ಸುಂದರ ಮನೆ ಖರೀದಿಸುವ ಪ್ಲಾನಿಂಗ್ ಮಾಡುತ್ತಿದ್ದೀರಾ? ಹಾಗಿದ್ದರೆ ಅಗ್ಗದ ದರದಲ್ಲಿ ಮನೆ ಖರೀದಿಸಲು ಇದ್ದ ಕಾಲಾವಧಿಯನ್ನು ಸರ್ಕಾರ ಒಂದು ವರ್ಷ ಮತ್ತೆ ಹೆಚ್ಚಿಸಿದೆ. ಅಂದರೆ ಮಾರ್ಚ್ 2021ರವರೆಗೆ ನೀವು ಇದರ ಲಾಭವನ್ನು ಪಡೆಯಬಹುದಾಗಿದೆ.
ನವದೆಹಲಿ: ಸುಂದರ ಮತ್ತು ಸ್ವಂತ ಮನೆ ಹೊಂದುವ ಬಯಕೆ ಯಾರಿಗೆ ತಾನೇ ಇರುವುದಿಲ್ಲ. ಒಂದು ವೇಳೆ ನೀವು ಕೂಡ ಮನೆ ಖರೀದಿಸುವ ಪ್ಲಾನಿಂಗ್ ಮಾಡುತ್ತಿದ್ದರೆ, ಅಗ್ಗದ ದರದಲ್ಲಿ ಮನೆ ಖರೀದಿಸಲು ಇದ್ದ ಕಾಲಾವಧಿಯನ್ನು ಸರ್ಕಾರ ಒಂದು ವರ್ಷ ಮತ್ತೆ ಹೆಚ್ಚಿಸಿದೆ. ಅಂದರೆ ಮಾರ್ಚ್ 2021ರವರೆಗೆ ನೀವು ಇದರ ಲಾಭವನ್ನು ಪಡೆಯಬಹುದಾಗಿದೆ. ಈ ಬಾರಿ ಬಜೆಟ್ ಮಂಡಿಸಿರುವ ಕೇಂದ್ರ ವಿತ್ತ ಸಚಿವೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಅಫೋರ್ಡೆಬಲ್ ಹೌಸಿಂಗ್ ಸ್ಕೀಮ್ ಕಾಲಾವಧಿಯನ್ನು ಮುಂದಿನ ಒಂದು ವರ್ಷಕ್ಕೆ ವಿಸ್ತರಿಸಿದ್ದಾರೆ.
ಇದಕ್ಕಾಗಿ EWS/LIG, MIG-1 ಹಾಗೂ MIG-2 ಕೆಟಗರಿಗಳನ್ನು ನಿರ್ಮಿಸಲಾಗಿದೆ. EWS/LIG ಮನೆ ಖರೀದಿಸಿದರೆ ನಿಮಗೆ ಅತ್ಯಂತ ಹೆಚ್ಚು ಅಂದರೆ ಸುಮಾರು 2,67,280 ರೂ.ಗಳಷ್ಟು ಬಡ್ಡಿ ರಿಯಾಯಿತಿ ಸಿಗಲಿದೆ. ಇದರರ್ಥ ನಿಮ್ಮ ಸಾಲದ ಬಡ್ಡಿ ದರದಲ್ಲಿ ನಿಮಗೆ ಇಷ್ಟು ರೂಪಾಯಿ ಕಡಿತವಾಗಲಿದೆ. ಈ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಹೌಸಿಂಗ್ ಹಾಗೂ ಅರ್ಬನ್ ಆಫೆಯರ್ಸ್ ನ ಹರದೀಪ್ ಸಿಂಗ್ ಪುರಿ, EWS/LIG ಮನೆಗಳಿಗೆ ನೀಡಲಾಗುವ ಸಾಲದ ಮೇಲಿನ ಬಡ್ಡಿ ದರದಲ್ಲಿ ಶೇ.6.5ರಷ್ಟು ಸಬ್ಸಿಡಿ ಸಿಗಲಿದೆ ಎಂದಿದ್ದಾರೆ. MIG 1 ಹಾಗೂ MIG 2 ಗಳಿಗೆ ಕ್ರಮೇಣವಾಗಿ ಶೇ.4 ಹಾಗೂ ಶೇ.3ರಷ್ಟು ಸಬ್ಸಿಡಿ ಸಿಗಲಿದೆ.
ಅಫೋರ್ಡೆಬಲ್ ಹೌಸಿಂಗ್
ಅಫೋರ್ಡೆಬಲ್ ಹೌಸಿಂಗ್ ಒಂದು ಟೌನ್ ಶಿಪ್ ಆಗಿದ್ದು, ಇದರಲ್ಲಿ ನಗರದಲ್ಲಿ ವಾಸಿಸುವ ಹೆಚ್ಚಿನ (ಅಂದರೆ ಶೇ.60) ಜನರಿಗೆ ಕೈಗೆಟುಕುವ ದರ ಆಗಿದೆ. ಇದು ಶೇ.60 ಮಧ್ಯಮ ವರ್ಗದ ಜನರಿಂದ ನಿರ್ಮಾಣಗೊಂಡಿರುತ್ತದೆ ಹಾಗು ಉಳಿದ ಶೇ.40 ರಷ್ಟು ಜನ ಕಡಿಮೆ ಆದಾಯದ ಜನರಿದ್ದು, ಅವರು ಎಲ್ಲಿಯೂ ಕೂಡ ಮನೆ ಖರೀದಿಸಲು ಸಾಧ್ಯವಿಲ್ಲ. ಶೇ.60ರಷ್ಟು ಜನರ ಪೈಕಿ ಶೇ.20ರಷ್ಟು ಜನರು ಹೆಚ್ಚಿನ ಆದಾಯ ಹೊಂದಿರುವ ಜನರಾಗಿದ್ದು, ಇವರು ನಗರದ ಯಾವುದೇ ಭಾಗದಲ್ಲಿ ದುಬಾರಿ ಮನೆ ಖರೀದಿಸಬಹುದು. ಹೀಗಾಗಿ ಅಫೋರ್ಡೆಬಲ್ ಹೌಸಿಂಗ್ ಸ್ಕೀಮ್ ಅನ್ನು ಮಧ್ಯಮ ವರ್ಗದ ಜನರನ್ನು ಗುರಿಯಾಗಿಸಿ ಕೆಟಗರಿ ಸಿದ್ದಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ವರ್ಷ 2022ರವರೆಗೆ ಎಲ್ಲರಿಗೂ ಮನೆ ನೀಡುವ ಭರವಸೆ ನೀಡಿದ್ದಾರೆ. ಸದ್ಯ ಮನೆ ಖರೀದಿಸುವ ವೇಳೆ ತೆರಿಗೆ ಮೇಲೆ ಎರಡು ಲಕ್ಷ ರೂ. ವಿನಾಯ್ತಿ ನೀಡಲಾಗುತ್ತಿದೆ. ಜೊತೆಗೆ ಸೆಕ್ಷನ್ 80C ಅಡಿಯಲ್ಲಿ ಮೂಲ ಸಾಲದ ಮೇಲೆ 1.5 ಲಕ್ಷ ರೂ.ಗಳವರೆಗೆ ವಿನಾಯ್ತಿ ಪಡೆಯಬಹುದಾಗಿದೆ.