Snake Video: ಸಾಮಾಜಿಕ ಮಾಧ್ಯಮ ಪ್ರಪಂಚವು ಆಶ್ಚರ್ಯಕರ ಸಂಗತಿಗಳಿಂದ ತುಂಬಿದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ನೋಡಲಾಗುತ್ತದೆ ಮತ್ತು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ಯಾರನ್ನಾದರೂ ಆಶ್ಚರ್ಯಗೊಳಿಸುತ್ತದೆ. ಇದೀಗ ಅಂತಹ ಒಂದು ವಿಡಿಯೋ ಎಲ್ಲೆಡೆ ಆವರಿಸಿದೆ. 


COMMERCIAL BREAK
SCROLL TO CONTINUE READING

ಅಪಾಯಕಾರಿ ಹಾವು ಮತ್ತು ಪುಟ್ಟ ಹಕ್ಕಿಗಳ ಕಾದಾಟಕ್ಕೆ (Snake and birds fighting) ಸಂಬಂಧಿಸಿದ ವಿಡಿಯೋ ಇದಾಗಿದ್ದು, ಈ ವೀಡಿಯೋ ನೋಡಿದ್ರೆ ನೀವು ಸಹ ಬಾಯ ಮೇಲೆ ಬೆರಳಿಡುತ್ತೀರಿ. ವೀಡಿಯೊವನ್ನು ಕೆಲವೇ ಸಮಯದಲ್ಲಿ ಸಾವಿರಾರು ಬಾರಿ ವೀಕ್ಷಿಸಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಇಷ್ಟಪಟ್ಟಿದ್ದಾರೆ. ಅಪಾಯಕಾರಿ ಹಾವು ಮತ್ತು ಹಕ್ಕಿ ಮರಿ ನಡುವಿನ ಕಾಳಗಕ್ಕೆ ಸಂಬಂಧಿಸಿದ ವಿಡಿಯೋ ನಿಮ್ಮನ್ನು ಬೆರಗುಗೊಳಿಸುವುದಂತು ಖಂಡಿತ.


ಇದನ್ನೂ ಓದಿ- ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಪ್ರಾಣಿಯ ಗತ್ತು.. ಗಮ್ಮತ್ತು.. ನೆಟ್ಟಿಗರ ಮನಗೆದ್ದ ಟೈಗರ್ ವಿಡಿಯೋ


ಪಕ್ಷಿ ಮತ್ತು ಹಾವಿನ ನಡುವೆ ಕಾದಾಟ ನಡೆದಾಗ....!
ಉದ್ದದ ಅಪಾಯಕಾರಿ ಹಾವೊಂದು ಮರವನ್ನು ಹತ್ತಿ ಹಕ್ಕಿಯ ಗೂಡಿನ ಮೇಲೆ ದಾಳಿ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದನ್ನು ಕಂಡ ಪಕ್ಷಿ ತನ್ನ ಮರಿಗೆ ಹಾನಿ ಮಾಡಲು ಮುಂದಾದ ಹಾವಿನ ಜೊತೆ ಕಾಳಗಕ್ಕಿಳಿದಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. 


ತನ್ನ ಗೂಡಿನಲ್ಲಿರುವ ಮರಿಗಳ ರಕ್ಷಣೆಗಾಗಿ ಹಕ್ಕಿ ಮತ್ತು ಹಾವಿನ ನಡುವೆ ಕಾದಾಟ ನಡೆದಾಗ ಪ್ರಾಣವನ್ನೂ ಲೆಕ್ಕಿಸದೆ ಪುಟ್ಟ ಪುಟ್ಟ ಪಕ್ಷಿಗಳು ಹಾವಿನ ಜೊತೆಗೆ ಕಾದಾಡಿದ ದೃಶ್ಯ ಅಂತರ್ಜಾಲ (Social Media) ಬಳಕೆದಾರರನ್ನು ಅಚ್ಚರಿಗೊಳಿಸಿದೆ.


ಇದನ್ನೂ ಓದಿ- Viral Video: : 300 ಹಾವುಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಕಾಡಿಗೆ ತಂದ ವ್ಯಕ್ತಿ, ಇಲ್ಲಿದೆ ಮೈ ಜುಮ್ಮೆನಿಸುವ ವಿಡಿಯೋ


ಹಾವು ಗೂಡಿನಿಂದ ಬಾಯಿ ತೆಗೆಯುವವರೆಗೂ ಹಕ್ಕಿಗಳು ಹಾವಿನ ಮೇಲೆ ದಾಳಿ ಮಾಡುತ್ತಲೇ ಇದ್ದವು. ಪಕ್ಷಿಗಳ ನಿರಂತರ ದಾಳಿಯಿಂದಾಗಿ ಹಾವು ಕೊನೆಗೆ ಅಲ್ಲಿಂದ ಹೊರಟು ಹೋಯಿತ್ತು. ಹಾವು ಮತ್ತು ಪುಟ್ಟ ಹಕ್ಕಿಗಳ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.


 

 

 

 



 

 

 

 

 

 

 

 

 

 

 

A post shared by طبیعت (@nature27_12)


ಸದ್ಯಕ್ಕೆ ಈ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೆಟಿಜನ್‌ಗಳು ಕೂಡ ವಿಡಿಯೋಗೆ ತೀವ್ರ ಕಮೆಂಟ್ ಮಾಡುತ್ತಿದ್ದಾರೆ. ಇದನ್ನು ನೇಚರ್27_12 ಹೆಸರಿನ ಪುಟದಲ್ಲಿ Instagram ನಲ್ಲಿ ಅಪ್‌ಲೋಡ್ ಮಾಡಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.