ಆನೆಯ ಹಾಲು ಕುಡಿಯುವ ಬಾಲಕಿ! ಕಾರಣ ತಿಳಿದರೆ ಅಚ್ಚರಿಯಾಗ್ತೀರಿ

Girl Drinking Elephant milk: ವೈರಲ್ ಆಗಿರುವ ಈ ವಿಡಿಯೋದಲ್ಲಿ ಮೂರು ವರ್ಷದ ಬಾಲಕಿ ತನ್ನ ಮನೆಯ ಅಂಗಳದಲ್ಲಿ ಆನೆಯೊಂದಿಗೆ ಆಟವಾಡುತ್ತಾ ಅದರ ಹಾಲು ಕುಡಿಯುತ್ತಿದ್ದಾಳೆ.

Edited by - Chetana Devarmani | Last Updated : Jan 31, 2022, 12:40 PM IST
  • ಈ ಹುಡುಗಿ ಆನೆಯ ಹಾಲು ಕುಡಿಯುತ್ತಾಳೆ
  • ಹುಡುಗಿ ಆನೆಯನ್ನು ಬೀನು ಎಂದು ಕರೆಯುತ್ತಾಳೆ
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ
ಆನೆಯ ಹಾಲು ಕುಡಿಯುವ ಬಾಲಕಿ! ಕಾರಣ ತಿಳಿದರೆ ಅಚ್ಚರಿಯಾಗ್ತೀರಿ  title=
ಆನೆ

ಸಾಮಾನ್ಯವಾಗಿ ಜನರು ಹಸು, ಮೇಕೆ, ಎಮ್ಮೆ ಮುಂತಾದ ಸಾಕು ಪ್ರಾಣಿಗಳ ಹಾಲನ್ನು ಸೇವಿಸುತ್ತಾರೆ. ಆದರೆ ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಬಾಲಕಿಯೊಬ್ಬಳು ಆನೆಯ ಹಾಲು (Elephant Milk) ಕುಡಿದು ಎಲ್ಲರನ್ನೂ ಅಚ್ಚರಿಗೊಲಿಸಿದ್ದಾಳೆ. ಪ್ರಾಣಿ ಮತ್ತು ಮನುಷ್ಯರ ಬಾಂಧವ್ಯಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ (Video Viral) ಆಗಿದೆ. ಇದರಲ್ಲಿ ಮೂರು ವರ್ಷದ ಹರ್ಷಿತಾ ಬೋರಾ ಎಂಬ ಬಾಲಕಿ ಮನೆಯ ಅಂಗಳದಲ್ಲಿ ಆನೆಯೊಂದಿಗೆ ಆಟವಾಡುತ್ತಾ ಅದರ ಹಾಲು ಕುಡಿಯುತ್ತಿದ್ದಾಳೆ.

 

 

ಹರ್ಷಿತಾ ಆನೆಗೆ ತನಗೆ ಆಹಾರ ನೀಡುವಂತೆ ಕೇಳುತ್ತಿದ್ದಳು. ಇದಕ್ಕೆ ಒಪ್ಪಿಕೊಂಡ ಆನೆ (Elephant) ಪುಟ್ಟ ಹುಡುಗಿಗೆ ಹಾಲು ಕುಡಿಯಲು ಅವಕಾಶ ಮಾಡಿಕೊಟ್ಟಿದೆ. ನೆರೆಹೊರೆಯವರ ಪ್ರಕಾರ, ಹರ್ಷಿತಾ ಆನೆಯನ್ನು 'ಬೀನು' ಎಂದು ಕರೆಯುತ್ತಾಳೆ. ಆಗಾಗ್ಗೆ ಅದರೊಂದಿಗೆ ಆಟವಾಡುತ್ತಾಳಂತೆ.

ಇದನ್ನೂ ಓದಿ: 21 ಬಾರಿ ಗ್ರ್ಯಾಂಡ್ ಸ್ಲಾಮ್ ಗೆದ್ದ ರಾಫೆಲ್ ನಡಾಲ್ ಗೂ ಭಾರತಕ್ಕೂ ಇದೆ ಬಿಡಲಾರದ ನಂಟು

ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ಅದರಲ್ಲೂ ಮಾನವ-ಆನೆ ಸಂಘರ್ಷ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಘಟನೆ ಮುನ್ನೆಲೆಗೆ ಬಂದಿದೆ. ಅಧಿಕೃತ ದಾಖಲೆಗಳ ಪ್ರಕಾರ, 2021 ರಲ್ಲಿ ಆನೆಗಳ (Elephant) ದಾಳಿಯಿಂದ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ 71 ಆನೆಗಳು ವಿದ್ಯುತ್ ಆಘಾತ, ವಿಷಪ್ರಾಶನ, ವೇಗದ ರೈಲಿಗೆ ಸಿಲುಕಿ ಮತ್ತು ಕೊಳಗಳು ಮತ್ತು ಹಳ್ಳಗಳಿಗೆ ಅಥವಾ ಸಿಡಿಲು ಬಡಿದು ಸಾವನ್ನಪ್ಪಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News