ನವದೆಹಲಿ: ಕಳೆದ 50ಕ್ಕೂ ಅಧಿಕ ದಿನಗಳಿಂದ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಶಾಹೀನ್ ಬಾಗ್ ನಲ್ಲಿ ಶಾಂತಿಯುತ  ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು ಇಂದು ಶವ ಸಂಸ್ಕಾರದ ಮೆರವಣಿಗೆಗೆ ದಾರಿ ಮಾಡಿಕೊಟ್ಟಿದ್ದಾರೆ.



COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಸುದ್ದಿಸಂಸ್ಥೆ ಎಎನ್ಐಗೆ ಪ್ರತಿಕ್ರಿಯಿಸಿರುವ ಶಾಹೀನ್ ಬಾಗ್ ನಲ್ಲಿ ಪ್ರತಿಭಟನಾನಿರತ ಮಹಿಳೆ 'ನಾವು ಒಬ್ಬರನ್ನೊಬ್ಬರು ಗೌರವಿಸುತ್ತೇವೆ ಮತ್ತು ಮೆರವಣಿಗೆಯನ್ನು ಹಾದುಹೋಗಲು ಅನುಮತಿಸುವ ಮೂಲಕ, ನಾವು ಅಸಾಮಾನ್ಯವಾಗಿ ಏನನ್ನೂ ಮಾಡಿಲ್ಲ. ನಾವು ಬಸ್ಸುಗಳು ಮತ್ತು ಆಂಬುಲೆನ್ಸ್‌ಗಳಿಗೂ ಅವಕಾಶ ನೀಡಿದ್ದೇವೆ' ಎಂದು ಹೇಳಿದರು.


ದೆಹಲಿಯ ಶಾಹೀನ್ ಬಾಗ್ ಈಗ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಪ್ರಮುಖ ಕೇಂದ್ರವಾಗಿದ್ದು, ದೇಶದೆಲ್ಲೆಡೆ ಈಗ ಬಹುತೇಕರು ಶಾಹೀನ್ ಬಾಗ್ ಮಾದರಿಯ ಹೋರಾಟವನ್ನು ಕೇಂದ್ರದ ಕಾಯ್ದೆ ವಿರೋಧಿಸಲು ಅನುಸರಿಸುತ್ತಿದ್ದಾರೆ. ಮಹಿಳೆಯರ ಕೇಂದ್ರಿತವಾಗಿರುವ ಈ ಹೋರಾಟ ಈಗ ದೇಶದ ಗಮನ ಸೆಳೆದಿದೆ.