Women Viral Video: ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಒಂದಲ್ಲ ಒಂದು ವಿಭಿನ್ನ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಫನ್ನಿ ವಿಡಿಯೋ, ಮದುವೆಯ ವಿಡಿಯೋ, ದುಃಖ-ಸಂತೋಷ ಹೀಗೆ ಬಗೆ ಬಗೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇಂದು ನಾವು ಹೇಳಹೊರಟಿರೋದು ಮ್ಯಾಜಿಕ್ ವಿಡಿಯೋ ಬಗ್ಗೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸರ್ಕಾರದ ಮಹತ್ವದ ಆದೇಶ: ಈಗ ಮನೆಯಲ್ಲಿ ಇಷ್ಟು ಚಿನ್ನವನ್ನು ಮಾತ್ರ ಇಡಬಹುದು


ಬೆಳಗ್ಗಿನ ಉಪಹಾರಕ್ಕೆ ನಾನಾ ಬಗೆಯ ತಿಂಡಿಗಳನ್ನು ಸೇವಿಸುತ್ತೇವೆ. ಅದರಲ್ಲೂ ಭಾರತೀಯರ ಫೇವರೇಟ್ ಬ್ರೇಕ್’ಫಾಸ್ಟ್ ಎಂದರೆ ದೋಸೆ, ಇಡ್ಲಿ, ಚಪಾತಿ, ಚಿತ್ರಾನ್ನ, ಉಪ್ಪಿಟ್ಟು, ಪರೋಟ ಹೀಗೆ ಬಾಯಿಗೆ ರುಚಿ ಕೊಡುವ ಅನೇಕ ತಿನಿಸುಗಳಿವೆ. ಆದರೆ ಈ ಬ್ರೇಕ್’ಫಾಸ್ಟ್’ನಿಂದಲೇ ಮಹಿಳೆಯೊಬ್ಬಳು ಮ್ಯಾಜಿಕ್ ಮಾಡಿದ್ದಾಳೆ.


ಚಪಾತಿ ಮಾರಾಟ ಮಾಡುವುದರಲ್ಲಿ ಏನು ವಿಶೇಷವಿದೆ ಎಂದು ನೀವು ಯೋಚಿಸಬಹುದು. ಆದ್ರೆ ಆಕೆ ಮಾರಾಟ ಮಾಡುತ್ತಿರುವುದು ಸಾಮಾನ್ಯ ಪರೋಟವಲ್ಲ. ದುಡ್ಡಿನ ಪರೋಟಾ. ಅರೇ ಇದು ಹೇಗಪ್ಪಾ ಅಂತ ಆಲೋಚನೆ ಮಾಡುತ್ತಿದ್ದರೆ ಈ ವಿಡಿಯೋ ನೋಡಲೇಬೇಕು.


ಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ, ಮಹಿಳೆ ಚಪಾತಿ ಹಿಟ್ಟನ್ನು ಸರಿಯಾಗಿ ನಾದಿಕೊಂಡು, ಅದರಲ್ಲಿ 500 ರೂಪಾಯಿ ನೋಟುಗಳನ್ನು ಹಾಕಿ ಲಟ್ಟಿಸುತ್ತಿದ್ದಾರೆ. ಆ ಬಳಿಕ ಎಣ್ಣೆ ಸವರಿ, ಚಪಾತಿಯನ್ನು ಕಾವಲಿ ಮೇಲೆ ತುಪ್ಪವನ್ನೆಲ್ಲ ಸವರಿ ಬೇಯಿಸುತ್ತಾರೆ. ಬೇಯಿಸಿದ ಚಪಾತಿ ತೆಗೆದ ಮೇಲೆ ಪರೋಟಾದಿಂದ 2000 ರೂಪಾಯಿ ಬರುತ್ತದೆ.


ಇಲ್ಲಿ ಮಹಿಳೆ 500 ರೂ.ನೋಟನ್ನು ಹಾಕಿ ಲಟ್ಟಿಸಿ, ಬೇಯಿಸಿದ ಮೇಲೆ 500 ರೂ.ಬದಲು, 2000 ರೂಪಾಯಿಯನ್ನು ಹೊರತೆಗೆಯುತ್ತಾರೆ. ಇದೇನು ಜಾದೂ? ಎಂದು ಎಂದು ನೆಟ್ಟಿಗರು ಯೋಚಿಸುತ್ತಿದ್ದಾರೆ. ಒಂದು ಕಡೆ ಈ ರೀತಿ ಆಲೋಚಿಸುತ್ತಿದ್ದರೆ, ಮತ್ತೊಂದು ಕಡೆ ಹಣ ಸುರಿದು ಚಪಾತಿ ಮಾಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.


 

 

 

 



 

 

 

 

 

 

 

 

 

 

 

A post shared by Janu Khan (@janu9793)


 


ಇದನ್ನೂ ಓದಿ: ಗಿನ್ನಿಸ್ ಬುಕ್ ಸೇರಿದ ರಿಮೋಟ್ ಕಂಟ್ರೋಲ್ ಗಿಂತ ಪುಟ್ಟದಾಗಿರುವ ನಾಯಿ! ಇಲ್ಲಿದೆ ಇದರ ಕ್ಯೂಟ್  ಫೋಟೋ


ಸದ್ಯ ಈ ವೀಡಿಯೋವನ್ನು ಸುಮಾರು 4.7 ಮಿಲಿಯನ್​ ಮಂದಿ ವೀಕ್ಷಿಸಿದ್ದು, ಚಿತ್ರ ವಿಚಿತ್ರ ಕಾಮೆಂಟ್ ನೆಟ್ಟಿಗರು ಮಾಡುತ್ತಿದ್ದಾರೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.