ಗಿನ್ನಿಸ್ ಬುಕ್ ಸೇರಿದ ರಿಮೋಟ್ ಕಂಟ್ರೋಲ್ ಗಿಂತ ಪುಟ್ಟದಾಗಿರುವ ನಾಯಿ! ಇಲ್ಲಿದೆ ಇದರ ಕ್ಯೂಟ್ ಫೋಟೋ

Shortest Dog Pearl: ಪರ್ಲ್ ಶಾಂತ ನಾಯಿಯಾಗಿದ್ದು, ಕೋಳಿ ಮತ್ತು ಸಾಲ್ಮನ್‌ನಂತಹ ಉತ್ತಮ ಗುಣಮಟ್ಟದ ಆಹಾರವನ್ನು ಆನಂದಿಸುತ್ತದೆ. ಇದಲ್ಲದೆ, ಈ ನಾಯಿಯು ಅತ್ಯಂತ ಸಂತೋಷವಾಗಿರುತ್ತದೆ. 

Written by - Ranjitha R K | Last Updated : Apr 11, 2023, 02:46 PM IST
  • ಪರ್ಲ್ ಕೇವಲ ಎರಡು ವರ್ಷ ವಯಸ್ಸಿನ ಹೆಣ್ಣು ನಾಯಿ
  • ವಿಶ್ವದ ಅತ್ಯಂತ ಚಿಕ್ಕ ನಾಯಿ ಇದು
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋಗಳು
ಗಿನ್ನಿಸ್ ಬುಕ್ ಸೇರಿದ ರಿಮೋಟ್ ಕಂಟ್ರೋಲ್ ಗಿಂತ ಪುಟ್ಟದಾಗಿರುವ ನಾಯಿ! ಇಲ್ಲಿದೆ ಇದರ ಕ್ಯೂಟ್  ಫೋಟೋ   title=

Shortest Dog Pearl : ಪರ್ಲ್ ಕೇವಲ ಎರಡು ವರ್ಷ ವಯಸ್ಸಿನ ಹೆಣ್ಣು ಚಿಹೂ ಅಹುವಾ ನಾಯಿಯಾಗಿದೆ. ಈ ನಾಯಿ  ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿಶ್ವದ ಅತ್ಯಂತ ಚಿಕ್ಕ ನಾಯಿ ಎಂದು ಗುರುತಿಸಲ್ಪಟ್ಟಿದೆ. ಪರ್ಲ್ ಕೇವಲ 3.59 ಇಂಚು ಎತ್ತರ ಮತ್ತು 5.0 ಇಂಚು ಉದ್ದವಿದೆ. ಇದರ ಗಾತ್ರವು ಡಾಲರ್ ಬಿಲ್‌ಗೆ ಸಮನಾಗಿದೆ.  GWR ಪ್ರಕಾರ, ಪರ್ಲ್ ಮಿರಾಕಲ್ ಮಿಲ್ಲಿಯ ಅವಳಿ ಸಹೋದರಿಯ ಮರಿ. ಮಿರಾಕಲ್ ಮಿಲ್ಲಿ ದಾಖಲೆಯನ್ನು ಇದೀಗ ಪರ್ಲ್ ಸರಿಗಟ್ಟಿದೆ. 

ವಿಶ್ವದ ಅತ್ಯಂತ ಚಿಕ್ಕ ನಾಯಿ :
ಇತ್ತೀಚೆಗೆ, ಪರ್ಲ್ ಟಿವಿ ಕಾರ್ಯಕ್ರಮದಲ್ಲಿ "ಲೋ ಶೋ ಡಿ ರೆಕಾರ್ಡ್" ನಲ್ಲಿ ಕಾಣಿಸಿಕೊಂಡಿತ್ತು.  ಇದನ್ನು ಅತ್ಯಾಧುನಿಕ ಆಸನದ ಮೇಲೆ ಕುಳ್ಳರಿಸಿ ವೇದಿಕೆಗೆ ಕರೆತರಲಾಗಿತ್ತು. ಕಾರ್ಯಕ್ರಮದಲ್ಲಿ  ಪರ್ಲ್ ಬಗೆಗಿನ ಅನೇಕ ಕುತೂಹಲಕಾರಿ ಸಂಗತಿಗಳನ್ನು ಕೂಡಾ ಬಹಿರಂಗಗೊಳಿಸಲಾಗಿತ್ತು. ಪರ್ಲ್ ಶಾಂತ ನಾಯಿಯಾಗಿದ್ದು, ಕೋಳಿ ಮತ್ತು ಸಾಲ್ಮನ್‌ನಂತಹ ಉತ್ತಮ ಗುಣಮಟ್ಟದ ಆಹಾರವನ್ನು ಆನಂದಿಸುತ್ತದೆ. ಇದಲ್ಲದೆ, ಈ ನಾಯಿಯು ಅತ್ಯಂತ ಸಂತೋಷವಾಗಿರುತ್ತದೆ. 

ಇದನ್ನೂ ಓದಿ OMG: 123 ಕೋಟಿ ರೂ.ಗೆ ಮಾರಾಟವಾದ ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್!

 

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋಗಳು :
ಇದನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ "ಚೆಂಡಿನಂತೆ ಚಿಕ್ಕದಾಗಿರುವ ನಾಯಿ ಎಂದು ಬಣ್ಣಿಸಲಾಗಿದೆ. ಪರ್ಲ್‌ನ ಅಂತಿಮ ಎತ್ತರ ಮಾಪನವನ್ನು  ಫ್ಲೋರಿಡಾದ ಕ್ರಿಸ್ಟಲ್ ಕ್ರೀಕ್ ಅನಿಮಲ್ ಆಸ್ಪತ್ರೆಯಲ್ಲಿ ಮಾಡಲಾಯಿತು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬ್ಲಾಗ್ ಪ್ರತಿ ಅಳತೆಯನ್ನು ಅವನ ಮುಂಭಾಗದ ಕಾಲಿನ ತಳದಿಂದ ಪಾದದ ಮೇಲ್ಭಾಗದವರೆಗೆ ನೇರ ಲಂಬ ರೇಖೆಯಲ್ಲಿ ಮಾಡಿದೆ. ಜಿಡಬ್ಲ್ಯೂಆರ್ ಕೂಡಾ ಪರ್ಲ್ ಫೋಟೋಗಳನ್ನು  ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 

ಇದನ್ನೂ ಓದಿ : ಭಾರತವನ್ನು ವಿಶ್ವದ ಗುರು ಎಂದ ಉಕ್ರೇನ್ ಉಪ ವಿದೇಶಾಂಗ ಸಚಿವೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News