Rishi Sunak in India: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತ್ ಮಂಟಪದಲ್ಲಿ ಜಿ-20ಗೆ ಆಗಮಿಸಿದ ಎಲ್ಲಾ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರನ್ನು ಪ್ರಧಾನಿ ಮೋದಿ ಪ್ರೀತಿಯಿಂದ ತಬ್ಬಿಕೊಂಡು ಸ್ವಾಗತಿಸಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತ vs ಪಾಕಿಸ್ತಾನ ಸೂಪರ್ 4 ಫೈಟ್’ಗೆ ಪ್ಲೇಯಿಂಗ್ 11 ರೆಡಿ: ಸ್ಟಾರ್ ವೇಗಿ ಸೇರಿ ಇಬ್ಬರು ಔಟ್


ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬ್ರಿಟನ್ ಪ್ರಧಾನಿ ಶುಕ್ರವಾರ ದೆಹಲಿಗೆ ಆಗಮಿಸಿದ್ದರು. ಅವರ ಜೊತೆ ಪತ್ನಿ ಅಕ್ಷತಾ ಮೂರ್ತಿ ಕೂಡ ಆಗಮಿಸಿದ್ದಾರೆ. ಪಿಟಿಐ ಭಾಷಾ ವರದಿಯ ಪ್ರಕಾರ, ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ವಿಮಾನ ನಿಲ್ದಾಣದಲ್ಲಿ 'ಜೈ ಸಿಯಾರಾಮ್' ಘೋಷಣೆಯೊಂದಿಗೆ ಸ್ವಾಗತಿಸಿದ್ದಾರೆ.


ಇನ್ನು ಭಾರತೀಯ ಮೂಲದ ಬ್ರಿಟನ್‌’ನ ಮೊದಲ ಪ್ರಧಾನಿ ಸುನಕ್ ಅವರು ತಮ್ಮ ಹಿಂದೂ ಮೂಲದ ಬಗ್ಗೆ ಆಗಾಗ್ಗೆ ಪ್ರಸ್ತಾಪಿಸಿರುವುದನ್ನು ಕಾಣಬಹುದು. ಇನ್ನು ಅನೇಕ ಬಾರಿ ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿರುವುದು ಗಮನಾರ್ಹ  ವಿಷಯ. ಅಂದಹಾಗೆ, ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪುತ್ರಿ. ಈ ಕಾರಣಕ್ಕಾಗಿ ಸುನಕ್ ಅವರನ್ನು ಭಾರತೀಯ ಅಳಿಯ ಎಂದೂ ಕರೆಯುತ್ತಾರೆ.


ICC ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಯಾರು?


ನವದೆಹಲಿಗೆ ವಿಮಾನದಲ್ಲಿ ಬಂದಿಳಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಪತ್ರಕರ್ತರೊಂದಿಗೆ ಮಾತನಾಡುತ್ತಾ, ತನ್ನನ್ನು ಭಾರತದಲ್ಲಿ “ಬ್ರಿಟನ್ ಪ್ರಧಾನಿ ಭಾರತದ ಅಳಿಯ” ಎಂದು ಕರೆಯುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. "ಇದು ನಿಜವಾಗಿಯೂ ವಿಶೇಷ. ನನ್ನನ್ನು ಭಾರತದ ಅಳಿಯ ಎಂದು ಕರೆಯುವುದನ್ನು ನಾನು ಎಲ್ಲೋ ನೋಡಿದ್ದೇನೆ. ಹೀಗೆ ಪ್ರೀತಿಯಿಂದ ಕರೆಯುವುದನ್ನು ಇಷ್ಟಪಡುತ್ತೇನೆ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.