ICC ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಯಾರು? ಟಾಪ್ 5ರಲ್ಲಿ ಈ ಭಾರತೀಯನೇ ಅಗ್ರ...

Highest run scorer in ICC World Cup: ವಿಶ್ವಕ್ರಿಕೆಟ್ ಲೋಕದ ಅತಿ ದೊಡ್ಡ ಟೂರ್ನಮೆಂಟ್, ಚತುರ್ವಾರ್ಷಿಕ ICC ವಿಶ್ವಕಪ್ ಇನ್ನೇನು ಸಮೀಪಿಸುತ್ತಿದೆ. 2019 ರಲ್ಲಿ ಚೊಚ್ಚಲ ಕಪ್ ಗೆದ್ದಿರುವ ಇಂಗ್ಲೆಂಡ್ ಪ್ರಸ್ತುತ ಚಾಂಪಿಯನ್ ಆಗಿದೆ.

Written by - Bhavishya Shetty | Last Updated : Sep 9, 2023, 01:08 PM IST
    • 2023ರ ICC ODI ವಿಶ್ವಕಪ್‌’ಗೆ ಭಾರತ ಏಕೈಕ ಆತಿಥ್ಯ ವಹಿಸಿದೆ
    • ಚಾಂಪಿಯನ್‌ಶಿಪ್ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಒಂದು ತಿಂಗಳ ಕಾಲ ಇರುತ್ತದೆ.
    • ಈ ಪಂದ್ಯಾವಳಿ ಏಕದಿನ ಅಂತರಾಷ್ಟ್ರೀಯ ಸ್ವರೂಪವನ್ನು ಅನುಸರಿಸಿದೆ.
ICC ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಯಾರು? ಟಾಪ್ 5ರಲ್ಲಿ ಈ ಭಾರತೀಯನೇ ಅಗ್ರ... title=
Highest Run Scorer in World Cup

Highest run scorer in ICC World Cup: ವಿಶ್ವಕ್ರಿಕೆಟ್ ಲೋಕದ ಅತಿ ದೊಡ್ಡ ಟೂರ್ನಮೆಂಟ್, ಚತುರ್ವಾರ್ಷಿಕ ICC ವಿಶ್ವಕಪ್ ಇನ್ನೇನು ಸಮೀಪಿಸುತ್ತಿದೆ. 2019 ರಲ್ಲಿ ಚೊಚ್ಚಲ ಕಪ್ ಗೆದ್ದಿರುವ ಇಂಗ್ಲೆಂಡ್ ಪ್ರಸ್ತುತ ಚಾಂಪಿಯನ್ ಆಗಿದೆ. ಇನ್ನು ಈ ಟೂರ್ನಿಯಲ್ಲಿ ಅದೆಷ್ಟೋ ದಾಖಲೆಗಳು ಸೃಷ್ಟಿಯಾಗಿವೆ.

ಅಂದಹಾಗೆ 2023ರ ICC ODI ವಿಶ್ವಕಪ್‌’ಗೆ ಭಾರತ ಏಕೈಕ ಆತಿಥ್ಯ ವಹಿಸಿದೆ. ಎಲ್ಲಾ ಪಂದ್ಯಗಳು ದೇಶದಲ್ಲಿಯೇ ನಡೆಯಲಿವೆ. ಚಾಂಪಿಯನ್‌ಶಿಪ್ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಒಂದು ತಿಂಗಳ ಕಾಲ ಇರುತ್ತದೆ. ಇನ್ನು ಈ ಪಂದ್ಯಾವಳಿ ಏಕದಿನ ಅಂತರಾಷ್ಟ್ರೀಯ ಸ್ವರೂಪವನ್ನು ಅನುಸರಿಸಿದೆ.

ಇದನ್ನೂ ಓದಿ: ಲಂಡನ್ ಕಾಲೇಜಿನಲ್ಲಿ ಪದವಿ ಪಡೆದ ಪುತ್ರಿ: ಖುಷಿ, ಹೆಮ್ಮೆಯಿಂದ ಕುಣಿದಾಡಿದ ಟೀಂ ಇಂಡಿಯಾ ಮಾಜಿ ನಾಯಕ!

ನಾವಿಂದು ಈ ವರದಿಯಲ್ಲಿ ಅತ್ಯುನ್ನತ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡಿದ ಮತ್ತು ಹೆಚ್ಚು ರನ್ ಗಳಿಸಿದ ಕೆಲವೇ ಕೆಲವು ಬ್ಯಾಟರ್‌’ಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಐಸಿಸಿ ವಿಶ್ವಕಪ್‌’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯನ್ನು ಇನ್ನು ನೋಡೋಣ.

ಸಚಿನ್ ತೆಂಡೂಲ್ಕರ್:

ಭಾರತದ ಸರ್ವಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಅವರನ್ನು "ಕ್ರಿಕೆಟ್ ದೇವರು" ಎಂದು ಕರೆಯಲಾಗುತ್ತದೆ. ಟೆಸ್ಟ್ ಮತ್ತು ODI ಕ್ರಿಕೆಟ್‌’ನಲ್ಲಿ ಮಾತ್ರವಲ್ಲದೆ ವಿಶ್ವಕಪ್‌’ನಲ್ಲಿಯೂ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ತೆಂಡೂಲ್ಕರ್ ಹೆಸರಿನಲ್ಲಿ ಲೆಕ್ಕಕ್ಕೂ ಮೀರಿದ ದಾಖಲೆಗಳಿವೆ. ಸಚಿನ್ ತೆಂಡೂಲ್ಕರ್ 1992-2011ರ ಎರಡು ದಶಕಗಳ ಅವಧಿಯಲ್ಲಿ 44 ಇನ್ನಿಂಗ್ಸ್‌’ಗಳಲ್ಲಿ 2278 ರನ್ ಗಳಿಸಿದ್ದಾರೆ. ಅದರಲ್ಲಿ ಗರಿಷ್ಠ ಸ್ಕೋರ್ 152 ರನ್ ಆಗಿದೆ.

ರಿಕಿ ಪಾಂಟಿಂಗ್:

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್. ಆಧುನಿಕ ಕ್ರಿಕೆಟ್‌’ನ ಇನ್ನೊಬ್ಬ ದಂತಕಥೆ ಇವರು. ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಆಸ್ಟ್ರೇಲಿಯಾ ತಂಡ 2003 ಮತ್ತು 2007 ರಲ್ಲಿ ಎರಡು ವಿಶ್ವಕಪ್ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದರು ಪಾಂಟಿಂಗ್. ಇನ್ನು ICC ವಿಶ್ವಕಪ್‌’ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 42 ಇನ್ನಿಂಗ್ಸ್‌’ಗಳಲ್ಲಿ 1743 ರನ್ ಗಳಿಸಿದ್ದಾರೆ. ಇದರಲ್ಲಿ ಔಟಾಗದೆ 140 ರನ್ ಗಳಿಸಿದ್ದು ಇವರ ಶ್ರೇಷ್ಠತೆ. ಅಂದಹಾಗೆ ರಿಕಿ ಐದು ವಿಶ್ವಕಪ್‌’ಗಳಲ್ಲಿ ಆಡಿದ್ದಾರೆ.

ಕುಮಾರ ಸಂಗಕ್ಕಾರ:

ಶ್ರೀಲಂಕಾ ಕ್ರಿಕೆಟಿಗ ಕುಮಾರ ಸಂಗಕ್ಕಾರ 2011 ರ ವಿಶ್ವಕಪ್‌ ರನ್ನರ್-ಅಪ್‌ ತಂಡದ ಭಾಗವಾಗಿದ್ದರು. ಭಾರತದ ವಿರುದ್ಧ ಫೈನಲ್‌’ನಲ್ಲಿ ಸೋತಿದ್ದರೂ, ಸಂಗಕ್ಕಾರ ಆಡಿದ ರೀತಿ ಅನೇಕ ಹೃದಯ ಗೆದ್ದಿದ್ದು ಮಾತ್ರ ಸುಳ್ಳಲ್ಲ. 2015ರ ವಿಶ್ವಕಪ್‌’ನಲ್ಲೂ ಸತತ ನಾಲ್ಕು ಶತಕಗಳನ್ನು ಬಾರಿಸಿದ್ದರು ಸಂಗಕ್ಕಾರ. ಒಟ್ಟಾರೆಯಾಗಿ 33 ಇನ್ನಿಂಗ್ಸ್‌’ಗಳಲ್ಲಿ 124 ಸ್ಕೋರ್‌ ಗರಿಷ್ಟ ಸ್ಕೋರ್ ಜೊತೆಗೆ 1532 ರನ್ ಗಳಿಸಿದ್ದಾರೆ. 

ಬ್ರಿಯಾನ್ ಲಾರಾ:

ಸಚಿನ್ ತೆಂಡೂಲ್ಕರ್ ಬಳಿಕ ವೆಸ್ಟ್ ಇಂಡೀಸ್‌’ನ ಬ್ರಿಯಾನ್ ಲಾರಾ ಅವರನ್ನು ಶ್ರೇಷ್ಠ ಆಧುನಿಕ ಕ್ರಿಕೆಟಿಗ ಎಂದು ಪರಿಗಣಿಸಲಾಗುತ್ತದೆ. ಅಸಾಧಾರಣ ಬ್ಯಾಟಿಂಗ್‌ ಶೈಲಿಗೆ ಹೆಸರುವಾಸಿಯಾದ ಬ್ರಿಯಾನ್ ಲಾರಾ ಪ್ರಥಮ ದರ್ಜೆ ಕ್ರಿಕೆಟ್ (501*) ಮತ್ತು ಟೆಸ್ಟ್ ಕ್ರಿಕೆಟ್‌’ನಲ್ಲಿ (400*) ಗರಿಷ್ಠ ವೈಯಕ್ತಿಕ ಸ್ಕೋರ್‌ ದಾಖಲೆಗಳನ್ನು ಹೊಂದಿದ್ದಾರೆ. ಇನ್ನು ಕ್ರಿಕೆಟ್ ವಿಶ್ವಕಪ್‌ನಲ್ಲಿ, ಲಾರಾ 33 ಇನ್ನಿಂಗ್ಸ್‌’ಗಳಲ್ಲಿ 116 ಗರಿಷ್ಟ ಸ್ಕೋರ್‌’ನೊಂದಿಗೆ 1225 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಭಾರತ vs ಪಾಕಿಸ್ತಾನ ಸೂಪರ್ 4 ಫೈಟ್’ಗೆ ಪ್ಲೇಯಿಂಗ್ 11 ರೆಡಿ: ಸ್ಟಾರ್ ವೇಗಿ ಸೇರಿ ಇಬ್ಬರು ಔಟ್

ಎಬಿ ಡಿವಿಲಿಯರ್ಸ್:

ಐಸಿಸಿ ವಿಶ್ವಕಪ್‌’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಐದನೇ ಸ್ಥಾನದಲ್ಲಿದ್ದಾರೆ. ಡಿವಿಲಿಯರ್ಸ್ ಸ್ಫೋಟಕ ಮತ್ತು ಬಿರುಸಿನ ಬ್ಯಾಟಿಂಗ್‌’ಗೆ ಹೆಸರುವಾಸಿ. ಇನ್ನು ಇವರನ್ನು "ಮಿಸ್ಟರ್ 360” ಎಂದು ಕರೆಯುವುದುಂಟು. ಇನ್ನು ಡಿವಿಲಿಯರ್ಸ್ ಕೇವಲ 22 ಇನ್ನಿಂಗ್ಸ್ ಮತ್ತು ಮೂರು ವಿಶ್ವಕಪ್ ಆವೃತ್ತಿಗಳಲ್ಲಿ 1207 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News