Venus disappeared behind the Moon: ಶುಕ್ರ ಮತ್ತು ಗುರು ಗ್ರಹದ ನಡುವೆ ಇತ್ತೀಚೆಗೆ ಅಪರೂಪದ ಸಂಯೋಗವೊಂದು ಸಂಭವಿಸಿತ್ತು. ಇದರ ಬೆನ್ನಲ್ಲೇ ಬಾನಂಗಳದಲ್ಲಿ ಮತ್ತೊಂದು ಕೌತುಕ ಕಾಣಿಸಿಕೊಂಡಿದೆ. ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಗ್ರಹ ಶುಕ್ರ, ಚಂದ್ರನ ಸಮೀಪಕ್ಕೆ ಆಗಮಿಸಿದೆ. ಈ ದೃಶ್ಯ ಬಹಳ ಅಪರೂಪದ್ದಾಗಿದ್ದು, ನೀವೂ ಕೂಡ ನೋಡಿಕೊಳ್ಳಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Emotional Video: ಮರೆಯಾದ ಮಮತೆಗೆ ಹಂಬಲ! ಅಮ್ಮನ ಸಮಾಧಿ ಮುಂದೆ ಕಂದನ ಸ್ವಗತ; ಕಟುಕನ ಮನವೂ ಕರಗುವ ವಿಡಿಯೋ


ಶುಕ್ರ ಗ್ರಹವು ಚಂದ್ರನ ಕತ್ತಲೆಯ ಅಂಚಿನಲ್ಲಿ ನಿಧಾನವಾಗಿ ಕಣ್ಮರೆಯಾಗುತ್ತಿದ್ದಂತೆ ಕಾಣುತ್ತಿದೆ. ಸಾಮಾನ್ಯವಾಗಿ ಶುಕ್ರವು ಸಂಜೆ ವೇಳೆ ವಜ್ರದಂತೆ ಫಳಫಳ ಅಂತಾ ಆಕಾಶದಲ್ಲಿ ಪ್ರಕಾಶಮಾನವಾಗಿ ಹೊಳೆಯುವ ಗ್ರಹವಾಗಿದೆ. ಇದರ ಹೊಳಪು ಸುಮಾರು 250 ಪಟ್ಟು ಹೆಚ್ಚಾಗಲು ಕಾರಣ, ಇಂದು ಈ ಗ್ರಹವು ಚಂದಿರನ ಬಳಿಗೆ ಆಗಮಿಸಿರುವುದು.  


"ಇಂದು ಶುಕ್ರ ಮತ್ತು ಚಂದ್ರ ಗ್ರಹವು ಪರಸ್ಪರ ಹತ್ತಿರ ಬಂದಿರುವುದರಿಂದ ಇದೊಂದು ಮಹಾ ಸಂಯೋಗದಂತೆ ಗೋಚರವಾಗುತ್ತಿದೆ. ನೋಡಲು ಒಂದೇ ಪಥದಲ್ಲಿದ್ದಂತೆ ಕಾಣುತ್ತದೆ, ಆದರೆ ಅವುಗಳು ದೂರ ಇವೆ” ಎಂದು ಖಗೋಳ ಸೊಸೈಟಿ ಇಂಡಿಯಾ ಔಟ್‌ರೀಚ್ ಮತ್ತು ಎಜುಕೇಶನ್ ಟ್ವೀಟ್‌’ನಲ್ಲಿ ತಿಳಿಸಿದೆ.


ಚಂದ್ರನ ದೇಹವು ಅಮಾವಾಸ್ಯೆಯ ಹಂತದಲ್ಲಿದೆ, ಮೇಲ್ಮೈಯ ಕೇವಲ ಒಂಬತ್ತು ಪ್ರತಿಶತದಷ್ಟು ಗೋಚರಿಸುತ್ತಿದೆ. ಈ ಹಂತವನ್ನು ವ್ಯಾಕ್ಸಿಂಗ್ ಕ್ರೆಸೆಂಟ್ ಹಂತ ಎಂದು ಕರೆಯಲಾಗುತ್ತದೆ.


Slowest Train in India: ಭಾರತದ ಅತ್ಯಂತ ನಿಧಾನವಾದ 'ಎಕ್ಸ್‌ಪ್ರೆಸ್' ರೈಲು, ಸೈಕಲ್ ಕೂಡ ಇದಕ್ಕಿಂತ ಜೋರಾಗಿ ಓಡುತ್ತೆ


ಮಾರ್ಚ್‌ನ ಕೊನೆಯ ದಿನಗಳಲ್ಲಿ ಎಲ್ಲಾ ಐದು ಗ್ರಹಗಳು ಪರಸ್ಪರ ಸುತ್ತುವುದನ್ನು ಮುಂದುವರೆಸುತ್ತದೆ. ಮಾರ್ಚ್ 28 ರಂದು ನೀವು ಅವುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ ಎಂದು ಖಗೋಳ ಇಲಾಖೆಯ ಮೂಲಗಳು ತಿಳಿಸಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.