Slowest Train in India: ಭಾರತದ ಅತ್ಯಂತ ನಿಧಾನವಾದ 'ಎಕ್ಸ್‌ಪ್ರೆಸ್' ರೈಲು, ಸೈಕಲ್ ಕೂಡ ಇದಕ್ಕಿಂತ ಜೋರಾಗಿ ಓಡುತ್ತೆ

Indian Railways Interesting Facts: ದೂರದ ರೈಲು ಪ್ರಯಾಣಕ್ಕಾಗಿ ಜನರು ಸಾಮಾನ್ಯವಾಗಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಆದರೆ ಭಾರತದಲ್ಲಿ ಗಂಟೆಗೆ 10 ಕಿ.ಮೀಗಿಂತ ಕಡಿಮೆ ವೇಗದಲ್ಲಿ ಚಲಿಸುವ ರೈಲೊಂದಿದೆ. ಭಾರತದ ಅತ್ಯಂತ ನಿಧಾನವಾದ 'ಎಕ್ಸ್‌ಪ್ರೆಸ್' ರೈಲು ಇದಾಗಿದೆ.   

Written by - Chetana Devarmani | Last Updated : Mar 24, 2023, 09:37 AM IST
  • ಭಾರತದ ಅತ್ಯಂತ ನಿಧಾನವಾದ 'ಎಕ್ಸ್‌ಪ್ರೆಸ್' ರೈಲು
  • ಸೈಕಲ್ ಕೂಡ ಇದಕ್ಕಿಂತ ಜೋರಾಗಿ ಓಡುತ್ತೆ
  • ಗಂಟೆಗೆ 10 ಕಿ.ಮೀಗಿಂತ ಕಡಿಮೆ ವೇಗದಲ್ಲಿ ಚಲಿಸುವ ಟ್ರೇನ್‌
Slowest Train in India: ಭಾರತದ ಅತ್ಯಂತ ನಿಧಾನವಾದ 'ಎಕ್ಸ್‌ಪ್ರೆಸ್' ರೈಲು, ಸೈಕಲ್ ಕೂಡ ಇದಕ್ಕಿಂತ ಜೋರಾಗಿ ಓಡುತ್ತೆ   title=
Mettapalayam Ooty Nilgiri Passenger Train

Mettapalayam Ooty Nilgiri Passenger Train: ಇಂದಿಗೂ ನಮ್ಮ ದೇಶದಲ್ಲಿ ದೂರದ ಪ್ರಯಾಣದ ವಿಷಯ ಬಂದಾಗ ಜನರು ಎಕ್ಸ್‌ಪ್ರೆಸ್ ರೈಲಿನಲ್ಲಿ ಮಾತ್ರ ಪ್ರಯಾಣಿಸಲು ಇಷ್ಟಪಡುತ್ತಾರೆ. ಇದಕ್ಕೆ ಕಾರಣ ರೈಲುಗಳು ಟ್ರಾಫಿಕ್ ಜಾಮ್ ಅನ್ನು ಎದುರಿಸಬೇಕಾಗಿಲ್ಲ ಮತ್ತು ಅವು ನಿಲ್ಲದೆ ಓಡುತ್ತವೆ. ಅಲ್ಲದೆ, ಅವುಗಳಲ್ಲಿ ಕುಳಿತು ಅಥವಾ ಮಲಗಿಕೊಂಡು ನೀವು ಪ್ರಯಾಣಿಸಬಹುದು. ಭಾರತದ ಅತ್ಯಂತ ನಿಧಾನವಾದ 'ಎಕ್ಸ್‌ಪ್ರೆಸ್' ರೈಲು ಇದಾಗಿದೆ. ಅದು 'ಎಕ್ಸ್‌ಪ್ರೆಸ್' ಆದರೆ ಅದರ ವೇಗ ಸೈಕಲ್‌ಗಿಂತ ನಿಧಾನವಾಗಿರುತ್ತದೆ. ಇದರ ನಡುವೆಯೂ ಅದರಲ್ಲಿ ಟಿಕೆಟ್ ಕಾಯ್ದಿರಿಸಲು ಜನ ಮುಗಿಬಿದ್ದಿರುತ್ತಾರೆ. ಈ ವಿಶಿಷ್ಟ ರೈಲಿನ ಬಗ್ಗೆ ಇಂದು ನಾವು ನಿಮಗೆ ವಿವರವಾಗಿ ಹೇಳಲಿದ್ದೇವೆ.

ಭಾರತದ ಈ ನಿಧಾನ ರೈಲಿನ ಹೆಸರು 'ಮೆಟ್ಟಪಾಳ್ಯಂ ಊಟಿ ನೀಲಗಿರಿ ಪ್ಯಾಸೆಂಜರ್ ಟ್ರೇನ್‌'. ಇದರ ವೇಗ ಗಂಟೆಗೆ 10 ಕಿಲೋಮೀಟರ್‌ಗಳಿಗಿಂತ ಕಡಿಮೆ. ವಾಸ್ತವವಾಗಿ ಇದು ಒಂದು ರೀತಿಯ ಆಟಿಕೆ ರೈಲು, ಇದು ಉಗಿ ಎಂಜಿನ್‌ನೊಂದಿಗೆ ಚಲಿಸುತ್ತದೆ. ಈ ರೈಲು ತಮಿಳುನಾಡಿನ ಊಟಿ ಪ್ರದೇಶದ ಬೆಟ್ಟಗಳಲ್ಲಿ ಚಲಿಸುತ್ತದೆ. ಈ ರೈಲು 46 ಕಿಮೀ ದೂರವನ್ನು ಕ್ರಮಿಸಲು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ರೈಲನ್ನು ನೀಲಗಿರಿ ಮೌಂಟೇನ್ ಟ್ರೈನ್/ರೈಲ್ವೆ ಎಂದೂ ಕರೆಯುತ್ತಾರೆ.

ಇದನ್ನೂ ಓದಿ : ರೋಜಗಾರ್ ಮೇಳದಲ್ಲಿ 50 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಣೆ

ಈ ರೈಲು ತಮಿಳುನಾಡಿನ ಮೆಟ್ಟುಪಾಳ್ಯಂ - ಊಟಿ ನಡುವೆ ಪ್ರತಿದಿನ ಚಲಿಸುತ್ತದೆ. ಕೆಲ್ಲರ್, ಕೂನೂರು, ವೆಲ್ಲಿಂಗ್ಟನ್, ಲವ್‌ಡೇಲ್ ಮತ್ತು ಊಟಕಮಂಡ್‌ನಂತಹ ನಿಲ್ದಾಣಗಳು ಅದರ ದಾರಿಯಲ್ಲಿ ಬರುತ್ತವೆ. ಸಾಮಾನ್ಯವಾಗಿ, ಈ ರೈಲು 46 ಕಿಲೋಮೀಟರ್‌ಗಳ ಪ್ರಯಾಣವನ್ನು 5 ಗಂಟೆಗಳಲ್ಲಿ ಪೂರ್ಣಗೊಳಿಸುತ್ತದೆ, ಆದರೂ ಕೆಲವೊಮ್ಮೆ ಮಳೆ ಅಥವಾ ಕೆಟ್ಟ ಹವಾಮಾನದಿಂದಾಗಿ ಸಮಯ 6-7 ಗಂಟೆಗಳವರೆಗೆ ಹೆಚ್ಚಾಗುತ್ತದೆ. ಯುನೆಸ್ಕೋದಲ್ಲಿಯೂ ಈ ರೈಲು ಸ್ಥಾನ ಪಡೆದಿದೆ. 

ಈ ರೈಲಿನಲ್ಲಿ, ಕೋಚ್‌ಗಳನ್ನು ಮರದಿಂದ ಮಾಡಲಾಗಿದ್ದು, ಇವುಗಳಿಗೆ ನೀಲಿ ಮತ್ತು ಕೆನೆ ಬಣ್ಣ ಬಳಿಯಲಾಗಿದೆ. ಈ ರೈಲಿನಲ್ಲಿ ದೊಡ್ಡ ಕಿಟಕಿಗಳಿದ್ದು, ಇವುಗಳಿಂದ ನೀವು ಹೊರಗಿನ ನೋಟವನ್ನು ಸುಲಭವಾಗಿ ನೋಡಬಹುದು. ಈ ರೈಲು ಪ್ರಥಮ ದರ್ಜೆ ಮತ್ತು ಸಾಮಾನ್ಯ ವರ್ಗಗಳೆರಡರ ಕೋಚ್‌ಗಳನ್ನು ಹೊಂದಿದೆ. ಈ ರೈಲು ಪ್ರತಿದಿನ ಬೆಳಗ್ಗೆ 7:10 ಕ್ಕೆ ಮೆಟ್ಟುಪಾಳ್ಯಂ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12 ಗಂಟೆಗೆ ಊಟಿಗೆ ತಲುಪುತ್ತದೆ. ಅದರ ನಂತರ ರೈಲು ಮಧ್ಯಾಹ್ನ 2 ಗಂಟೆಗೆ ಊಟಿಯಿಂದ ಹೊರಟು ಸಂಜೆ 5:30 ಕ್ಕೆ ಮೆಟ್ಟುಪಾಳ್ಯಂ ನಿಲ್ದಾಣಕ್ಕೆ ಹಿಂತಿರುಗುತ್ತದೆ.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ನೀಲಗಿರಿ ಮೌಂಟೇನ್ ರೈಲ್ವೇ ಏಷ್ಯಾದ ಅತ್ಯಂತ ಕಷ್ಟಕರವಾದ ಟ್ರ್ಯಾಕ್ ಎಂದು ಪರಿಗಣಿಸಲಾಗಿದೆ. ಈ ಮಾರ್ಗದಲ್ಲಿ ಗುಂಡಾಗಿ ಬೆಟ್ಟಗಳನ್ನು ಕತ್ತರಿಸಿ ರೈಲು ಮಾರ್ಗಕ್ಕೆ ಹಳಿಗಳನ್ನು ಹಾಕಲಾಗಿದೆ. ಜನರು ಈ ರೈಲ್ವೇ ಹಳಿಯನ್ನು ಎಂಜಿನಿಯರಿಂಗ್‌ನ ದೊಡ್ಡ ಪವಾಡ ಎಂದೂ ಕರೆಯುತ್ತಾರೆ. ಈ ರೈಲು ಎತ್ತರದ ಪರ್ವತಗಳು, ಸುಂದರವಾದ ಕಣಿವೆಗಳು ಮತ್ತು ದಟ್ಟವಾದ ಕಾಡುಗಳ ಮೂಲಕ ಹಾದುಹೋಗುತ್ತದೆ. ಸುಮಾರು 46 ಕಿ.ಮೀ ದೂರದಲ್ಲಿ, ಈ ರೈಲು 100 ಕ್ಕೂ ಹೆಚ್ಚು ಸೇತುವೆಗಳು ಮತ್ತು ಅನೇಕ ಸುರಂಗಗಳ ಮೂಲಕ ಹಾದುಹೋಗುತ್ತದೆ. ಈ ರೈಲು ದೇಶೀಯ ಮತ್ತು ವಿದೇಶಿ ಪ್ರವಾಸಿಗರಲ್ಲಿ ಬಹಳ ಜನಪ್ರಿಯವಾಗಿದೆ. ಊಟಿಗೆ ಯಾರು ಬಂದರೂ ಈ ರೈಲಿನಲ್ಲಿ ಕುಳಿತುಕೊಳ್ಳಲು ಮರೆಯುವುದಿಲ್ಲ. ಈ ರೈಲನ್ನು ಬ್ರಿಟಿಷರು 1899 ರಲ್ಲಿ ಪ್ರಾರಂಭಿಸಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News