ದೈತ್ಯ ಮೊಸಳೆಯನ್ನು ಬೈಕ್ ಮೇಲೆ ಮಲಗಿಸಿ, ಬೈಕ್ ಸವಾರಿ! ಈ ವೈರಲ್ ವಿಡಿಯೋ ನೀವು ನೋಡಲೇಬೇಕು
Shocking Video: ನೀವು ಎಂದಾದರು ಹತ್ತಿರದಿಂದ ಮೊಸಳೆಯನ್ನು ನೋಡಿದ್ದೀರಾ? ಒಂದು ವೇಳೆ ನೋಡಿದ್ದಾರೂ ಕೂಡ ಅದರ ಮೇಲೆ ಸವಾರಿ ಎಂದಾದರು ನಡೆಸಿದ್ದೀರಾ? ಹೌದು, ವ್ಯಕ್ತಿಯೋರ್ವ ಯಾವುದೇ ಭಯವಿಲ್ಲದೆ ಮೊಸಳೆಯೊಂದನ್ನು ಸಲೀಸಾಗಿ ಬೈಕ್ ಮೇಲೆ ಮಲಗಿಸಿ, ಬಳಿಕ ಅದರ ಮೇಲೆ ಕುಳಿತು ಬೈಕ್ ಓಡಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
Crocodile Viral Video: ಅಪಾಯಗಳ ಜೊತೆಗೆ ಚೆಲ್ಲಾಟವಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಪರದೆಯ ಮೇಲೆ ಅಂತಹ ಅಪಾಯಗಳನ್ನು ವೀಕ್ಷಿಸುವಷ್ಟು ಸುಲಭ ಅಲ್ಲವೇ ಅಲ್ಲ. ಕಣ್ಣೆದುರಲ್ಲೇ ಅಪಾಯಕಾರಿ ಸಂಗತಿ ಕಂಡರೆ, ಕೆಲವರು ನಿಂತಲ್ಲೇ ಬೆವರುತ್ತಾರೆ. ಭೂಮಿಯ ಮೇಲೆ ಇರುವ ಕೆಲ ಜೀವಿಗಳನ್ನು ನೋಡಿದರೆ ಸಾಕು ಜನರು ಅವುಗಳಿಂದ ತಪ್ಪಿಸಿಕೊಳ್ಳಲು ದೂರ ಹೋಗಲು ಬಯಸುತ್ತಾರೆ. ಸಿಂಹ, ಚಿರತೆ, ಆನೆ, ಹಾವು ಮುಂತಾದ ಜೀವಿಗಳನ್ನು ನೋಡಿದ ನಂತರ ಜನರ ಉಸಿರೇ ನಿಂತುಹೋಗುತ್ತದೆ, ಆದರೆ ನೀವು ಎಂದಾದರೂ ಮೊಸಳೆಯನ್ನು ಹತ್ತಿರದಿಂದ ನೋಡಿದ್ದೀರಾ? ಒಂದು ವೇಳೆ ನೋಡಿದ್ದರೂ ಕೂಡ ಅದರ ಸವಾರಿ ಮಾಡಿದ್ದೀರಾ? ಕೇಳಲು ಏನಿದು ಹುಚ್ಚಾಟ ಎನಿಸಿರಬಹುದು. ಹೌದು, ಯಾವುದೇ ಭಯವಿಲ್ಲದೇ ವ್ಯಕ್ತಿಯೊಬ್ಬ ಮೊಸಳೆಯನ್ನು ಬೈಕ್ ಮೇಲೆ ಮಲಗಿಸಿ ನಂತರ ಅದರ ಮೇಲೆ ಕುಳಿತು ಬೈಕ್ ಓಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ-ಎಚ್ಚರ...! ಕೊರೊನಾ ಲಸಿಕೆ ಹಾಕಿಸಿಕೊಂಡವರನ್ನೂ ಕೂಡ ಬಿಡ್ತಿಲ್ಲ ಈ ಹೊಸ ಕೊರೊನಾ ರೂಪಾಂತರಿ
ಮೊಸಳೆಯ ಮೇಲೆ ಕುಳಿತು ಬೈಕ್ ಸವಾರಿ ಮಾಡಿದ ಯುವಕ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋವೊಂದನ್ನು ನೋಡಿದರೆ ಮೈಮೇಲಿನ ರೋಮಗಳು ಎದ್ದು ನಿಲ್ಲುತ್ತವೆ. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಯುವಕನೊಬ್ಬ ಮೊಸಳೆಯೊಂದಿಗೆ ಯಾವುದೇ ಭಯವಿಲ್ಲದೆ ರಸ್ತೆಯಲ್ಲಿ ಬೈಕ್ ಸವಾರಿ ಮಾಡುತ್ತಿರುವುದನ್ನು ನೀವು ನೋಡಬಹುದು. ಈ ಯುವಕ ತನ್ನ ಬೈಕ್‌ನಲ್ಲಿ ಭಯಾನಕ ಮತ್ತು ದೈತ್ಯ ಮೊಸಳೆಯನ್ನು ಕಟ್ಟಿದ್ದಾರೆ. ಮೊಸಳೆಯನ್ನು ಬೈಕ್‌ನ ಸೀಟಿನ ಮೇಲೆ ಕೂರುವಂತೆ ಮಾಡಿ, ನಂತರ ತಾನೂ ಅದರ ಮೇಲೆ ಕುಳಿತುಕೊಂಡಿದ್ದಾನೆ. ಯುವಕ ಮೊಸಳೆಯ ಬಾಯಿಯನ್ನು ಕಟ್ಟಿ ರಸ್ತೆಯಲ್ಲಿ ಅತಿವೇಗದಲ್ಲಿ ವಾಹನ ಚಲಾಯಿಸುತ್ತಿದ್ದಾನೆ. ಹಿಂದಿನಿಂದ ಯಾರೋ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಅವರ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಪ್ರಸ್ತುತ ಈ ವಿಡಿಯೋ ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ಗಮನಿಸಿದರೆ ಯುವಕ ತನ್ನ ಬೈಕ್‌ನಲ್ಲಿ ಕಟ್ಟಿ ಹಾಕಿರುವ ಮೊಸಳೆಯನ್ನು ಕಳ್ಳಸಾಗಾಣಿಕೆಗೆ ತೆಗೆದುಕೊಂಡು ಹೋಗುತ್ತಿರುವಂತಿದೆ. ಆದರೆ, ಈ ವಿಡಿಯೋ ಎಲ್ಲಿಂದ ಹೊರಹೊಮ್ಮಿದೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ, ಆದರೆ ಇದನ್ನು ಮೀಮ್ ಪೇಜ್ ಮೂಲಕ ಹಂಚಿಕೊಳ್ಳಲಾಗಿದೆ. ಇದನ್ನು oy._.starrr ಹೆಸರಿನ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದುವರೆಗೆ ಒಂದು ಲಕ್ಷ 41 ಸಾವಿರ ಮಂದಿ ಇದನ್ನು ಲೈಕ್ ಮಾಡಿದ್ದಾರೆ, ಲಕ್ಷಾಂತರ ವೀಕ್ಷಣೆಗಳು ಬಂದಿವೆ. ವೀಡಿಯೋ ನೋಡಿ ಹಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿರುವ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರ, "ಇದು ಕ್ರೌರ್ಯ. ಜನರು ಇದರಲ್ಲಿ ತಮಾಷೆಯ ವಿಷಯವನ್ನು ಹೇಗೆ ಹುಡುಕುತ್ತಾರೆ ಎಂಬುದು ಊಹಿಸಲು ಸಾಧ್ಯವಿಲ್ಲ. ಸ್ವಲ್ಪ ಮಾನವೀಯತೆಯನ್ನು ತೋರಿಸಿ." ಎಂದು ಬರೆದುಕೊಂಡಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.