Covid-19 Cases: ವಿಶ್ವಾದ್ಯಂತ ಇತರ ರೂಪಾನ್ತರಿಗಳಿಗೆ ಹೋಲಿಸಿದರೆ, ಕರೋನಾದ ಹೊಸ XBB.1.5 ಆವೃತ್ತಿಯು ಭಾರಿ ತಲ್ಲಣ ಸೃಷ್ಟಿಸುತ್ತಿದೆ. ವ್ಯಾಕ್ಸಿನೇಷನ್ ಮತ್ತು ಕರೋನಾ ವೈರಸ್‌ನಿಂದ ಬಳಲುತ್ತಿರುವ ಜನರ ಮೇಲೆ ಇದರ ಅಪಾಯಕಾರಿ ಪರಿಣಾಮಗಳು ಗೋಚರುತ್ತಿವೆ ಎನ್ನಲಾಗಿದೆ. ಹೊಸ ಸಂಶೋಧನೆಯೊಂದು ಈ ಕುರಿತು ಮಾಹಿತಿ ಬಹಿರಂಗಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, XBB.1.5 ರೂಪಾಂತರದ ಪ್ರಕರಣಗಳು ಸುಮಾರು 38 ದೇಶಗಳಲ್ಲಿ ಕಂಡುಬಂದಿವೆ. ಅಮೆರಿಕಾದಲ್ಲಿ, ಶೇ.44 ರಷ್ಟು ಕರೋನಾ ಪ್ರಕರಣಗಳು ಈ ರೂಪಾಂತರಿಯ ಪ್ರಕರಣಗಳಾಗಿವೆ. ಈ ರೂಪಾಂತರಿಯು ಡೆನ್ಮಾರ್ಕ್‌ನಲ್ಲಿ ಶೇ.2 ಮತ್ತು ಬ್ರಿಟನ್‌ನಲ್ಲಿ ಶೇ.8 ರಷ್ಟು ಕರೋನಾ ಪ್ರಕರಣಗಳ ಹಿಂದೆ ಇದೆ ಎನ್ನಲಾಗಿದೆ. ಈ ರೂಪಾಂತರವು ಕರೋನಾ ಲಸಿಕೆ ತೆಗೆದುಕೊಂಡ ಅಥವಾ ಈಗಾಗಲೇ ಕರೋನಾ ಹೊಂದಿರುವ ಜನರ ಮೇಲೂ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.
ಭಾರಿ ವೇಗ ಪಡೆದುಕೊಳ್ಳುತ್ತಿದೆ
XBB.1.5 ಸ್ತ್ರೈನ್ Omicron ನ XBB ಆವೃತ್ತಿಯ ಕುಟುಂಬದ ಭಾಗವಾಗಿದೆ. ಇದು ಓಮಿಕ್ರಾನ್‌ನ BA.275 ಮತ್ತು BA.2.10.1 ಉಪ-ರೂಪಾಂತರಗಳ ಮರುಸಂಯೋಜನೆಯಾಗಿದೆ, ಅಂದರೆ, ಎರಡು ವಿಭಿನ್ನ ರೂಪಾಂತರಗಳಿಂದ ಜೀನ್‌ಗಳನ್ನು ಹೊಂದಿರುವ ವೈರಸ್‌ಗಳು. XBB, XBB.1.5 ನಲ್ಲಿದ್ದು, ಅಮೆರಿಕಾದಲ್ಲಿ ಶೇ.44 ರಷ್ಟು ಪ್ರಕರಣಗಳ ಹಿಂದೆ ಈ ವೈರಸ್ ಇದೆ ಎನ್ನಲಾಗುತ್ತಿದೆ.
ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಪ್ರಕಾರ, ಈ ಉಪ ರೂಪಾಂತರಿ ಪ್ರಸ್ತುತ ಇತರ ರೂಪಾಂತರಗಳಿಗಿಂತ US ನಲ್ಲಿ ಶೇ.12.5 ರಷ್ಟು ವೇಗವಾಗಿ ಹರಡುತ್ತಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ತನ್ನ ವರದಿಯಲ್ಲಿ ಜನವರಿ ಮೊದಲ ವಾರದಲ್ಲಿ ಬಂದ ಸುಮಾರು ಶೇ.30 ಪ್ರತಿಶತ ಪ್ರಕರಣಗಳು ಈ ಉಪ-ರೂಪಾಂತರಿಯ ಪ್ರಕರಣಗಳಾಗಿವೆ ಎಂದು ಹೇಳಿದೆ. ಈ ಅಂಕಿಅಂಶಗಳು ಸಿಡಿಸಿಯ ಅಂದಾಜು ಶೇ.27.6 ಅನ್ನು ಮೀರಿದೆ.
ಇದನ್ನೂ ಓದಿ-ಮಧುಮೇಹಿಗಳು ಮನೆಯಲ್ಲಿಯೇ ಬೆಳೆಸಬಹುದು ಈ ಇನ್ಸುಲಿನ್ ಸಸ್ಯ, ನೀಡುತ್ತೆ ಹಲವು ಲಾಭಗಳು
ಲಸಿಕೆ ಹಾಕಿಸಿಕೊಂಡವರು ಗುರಿಯಾಗುತ್ತಿದ್ದಾರೆ
ಒಂದು ಅಧ್ಯಯನದ ಪ್ರಕಾರ, XBB.1.5 ರೂಪಾಂತರವು ವೇಗವಾಗಿ ಹರಡುವ ರೂಪಾಂತರವಾಗಿದೆ. ಇತರ ರೂಪಾಂತರಗಳಿಗೆ ಹೋಲಿಸಿದರೆ, ಲಸಿಕೆ ಹಾಕಿದ ಅಥವಾ COVID-19 ರೋಗನಿರ್ಣಯ ಮಾಡಿದ ಜನರಿಗೆ ಇದು ಸೋಂಕು ತರುತ್ತಿದೆ.
ಇದನ್ನೂ ಓದಿ-ನೀವು ಆರೋಗ್ಯಕರ ಪದ್ಧತಿಯಲ್ಲಿ ನೀರು ಕುಡಿಯುತ್ತೀರಾ? ಈ ಬೇಸಿಕ್ ನಿಯಮಗಳು ನಿಮಗೆ ಗೊತ್ತಿರಲಿ
ಭಾರತದಲ್ಲಿ ಎಷ್ಟು ಪ್ರಕರಣಗಳಿವೆ?
ಮೂರು ದಿನಗಳ ಹಿಂದೆ INSACOG ಒಂದು ಡೇಟಾ ಬಿಡುಗಡೆಗೊಳಿಸಿತ್ತು. ಈ ಡೇಟಾ ಪ್ರಕಾರ, XBB.1.5 ರೂಪಾಂತರದ ಸುಮಾರು 26 ಪ್ರಕರಣಗಳು ಭಾರತದಲ್ಲಿ ಕಂಡುಬಂದಿವೆ. ಇದು ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡುಬಂದಿವೆ ಎನ್ನಲಾಗಿದೆ. ಇವುಗಳಲ್ಲಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ದೆಹಲಿ ಶಾಮೀಲಾಗಿವೆ. ಅಮೆರಿಕದಲ್ಲಿ ಕರೋನಾ ಪ್ರಕರಣಗಳ ತ್ವರಿತ ಹೆಚ್ಚಳದ ಹಿಂದೆ XBB.1.5 ರೂಪಾಂತರಿ ಇದೆ ಎನ್ನಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.