ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಪ್ರತಿಭಟನೆಯ ದಿನಗಳ ನಂತರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಬೇಡಿಕೆಗಳಿಗೆ ಒಪ್ಪಿಕೊಂಡು ವೈದ್ಯರನ್ನು ಕೆಲಸಕ್ಕೆ ಮರಳುವಂತೆ ಮನವಿ ಮಾಡಿಕೊಂಡಿದ್ದಾರೆ'ಸಾವಿರಾರು ಜನರು ವೈದ್ಯಕೀಯ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ ಆದ್ದರಿಂದ ಎಲ್ಲ ವೈದ್ಯರು ಕೆಲಸಕ್ಕೆ ಮರಳಬೇಕೆಂದು ಮನವಿ ಮಾಡುತ್ತೇನೆ' ಎಂದು ಮಮತಾ ಹೇಳಿದರು.


COMMERCIAL BREAK
SCROLL TO CONTINUE READING

ತಾವು ಕರೆದಿದ್ದ ಸಭೆಯಲ್ಲಿ ವೈದ್ಯರು ಹಾಜರಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ ''ನಾನು ನನ್ನ ಮಂತ್ರಿಗಳನ್ನು, ಪ್ರಧಾನ ಕಾರ್ಯದರ್ಶಿಯನ್ನು ವೈದ್ಯರನ್ನು ಭೇಟಿ ಮಾಡಲು ಕಳುಹಿಸಿದ್ದೇನೆ, ನಾನು ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೇನೆ ಮತ್ತು ಕಿರಿಯ ವೈದ್ಯರು ಸಭೆಯಲ್ಲಿ ಪಾಲ್ಗೊಳ್ಳಲು ಕಾಯುತ್ತಿದ್ದೆ. ಸಾಂವಿಧಾನಿಕ ಸಂಸ್ಥೆಗೆ ಗೌರವ ತೋರಿಸಬೇಕು" ಎಂದರು. 


ಕಿರಿಯ ವೈದ್ಯರ ಐದು ದಿನಗಳ ಮುಷ್ಕರದ ನಂತರವೂ ನಾವು ಎಸ್ಮಾ ಕಾಯ್ದೆಯನ್ನು ಕೈಗೊಂಡಿಲ್ಲ  ಅಥವಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ '' ಎಂದು ಮಮತಾ ಹೇಳಿದರು.ರಾಜ್ಯದಲ್ಲಿ ವೈದ್ಯಕೀಯ ಸೇವೆಗಳ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಮುಷ್ಕರ ಕುರಿತು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರದಿಂದ ವಿವರವಾದ ವರದಿಯನ್ನು ಕೋರಿತ್ತು.


ಇದಕ್ಕೂ ಮುನ್ನ ಮುಷ್ಕರ ಕಿರಿಯ ವೈದ್ಯರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜ್ಯ ಕಾರ್ಯದರ್ಶಿಯಲ್ಲಿ ಸಭೆಗೆ ಆಹ್ವಾನವನ್ನು ತಿರಸ್ಕರಿಸಿದರು,ಇದರಿಂದಾಗಿ  ಸತತ ಐದನೇ ದಿನವೂ ವೈದ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರು. ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರ ಮೇಲಿನ ಹಲ್ಲೆ ವಿರುದ್ಧ ಪ್ರತಿಭಟಿಸುತ್ತಿರುವ ವೈದ್ಯರು ಶುಕ್ರವಾರ ಬ್ಯಾನರ್ಜಿಯಿಂದ ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ಕೋರಿದ್ದರು ಮತ್ತು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ಆರು ಷರತ್ತುಗಳನ್ನು ವಿಧಿಸಿದ್ದರು.


ಮಮತಾ ಬ್ಯಾನರ್ಜೆ ಅವರು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಡಿದ ಹೇಳಿಕೆಗಳಿಗೆ ಅವರು ನಿಲ್ ರತನ್ ಸಿರ್ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಬಂದು ಬೇಷರತ್ತಾಗಿ ಕ್ಷಮೆಯಾಚಿಸಬೇಕಾಗುತ್ತದೆ ಎಂದು ಕಿರಿಯ ವೈದ್ಯರ ಜಂಟಿ ವೇದಿಕೆಯ ವಕ್ತಾರ ಅರಿಂದಮ್ ದತ್ತಾ ಪಿಟಿಐಗೆ ತಿಳಿಸಿದ್ದಾರೆ.