ನಾವು ದೇವಸ್ಥಾನಗಳ ಜೊತೆಗೆ ಬಡವರ ಮನೆಗಳನ್ನು ಸಹ ನಿರ್ಮಿಸುತ್ತಿದ್ದೇವೆ: ಪ್ರಧಾನಿ ಮೋದಿ
‘ಸೋಮನಾಥನಿಂದ ಹಿಡಿದು ವಿಶ್ವನಾಥನವರೆಗಿನ ಹನ್ನೆರಡನೆಯ ಜ್ಯೋತಿರ್ಲಿಂಗವನ್ನು ಸ್ಮರಿಸುವುದರಿಂದ ಅದು ಇಡೀ ಭಾರತವನ್ನು ಆವರಿಸಿರುವುದರಿಂದ ಎಲ್ಲ ಕಾರ್ಯಗಳು ನೆರವೇರುತ್ತವೆ’ ಎಂದು ಪ್ರಧಾನಿ ಮೋದಿ ಹೇಳಿದರು.
ನವದೆಹಲಿ: ನಾವು ದೇವಸ್ಥಾನಗಳ ಜೊತೆಗೆ ಬಡವರ ಮನೆಗಳನ್ನು ಸಹ ನಿರ್ಮಿಸುತ್ತೇವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರಪ್ರದೇಶದ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್‌ನ(Kashi Vishwanath Corridor) ಮೊದಲ ಹಂತವನ್ನು ಇಂದು (ಡಿ.13) ಉದ್ಘಾಟಿಸಿ ಅವರು ಮಾತನಾಡಿದರು. 339 ಕೋಟಿ ರೂ. ವೆಚ್ಚದಲ್ಲಿ ಈ ಕಾರಿಡಾರ್ ಸಿದ್ಧಪಡಿಸಲಾಗಿದೆ. 2014ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪ್ರಧಾನಿ ಮೋದಿ ಕಾಶಿಗೆ ಬಂದಿದ್ದಾಗ ಗಂಗಾಮಾತೆ ನನಗೆ ಕರೆ ನೀಡಿದ್ದಾರೆ ಎಂದು ಹೇಳಿದ್ದರು. ಕಾಶಿ ವಿಶ್ವನಾಥ್ ಕಾರಿಡಾರ್ ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾಗಿದೆ.
ಕಾಶಿ ವಿಶ್ವನಾಥ ಧಾಮವನ್ನು ದೇಶಕ್ಕೆ ಸಮರ್ಪಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ(Narendra Modi), ‘ಗಂಗಾಮಾತೆಯ ಶುದ್ಧೀಕರಣಕ್ಕಾಗಿ ಉತ್ತರಾಖಂಡದಿಂದ ಪಶ್ಚಿಮ ಬಂಗಾಳದವರೆಗೆ ಅನೇಕ ಪ್ರಯತ್ನಗಳು ನಡೆಯುತ್ತಿವೆ. ನಿಮ್ಮ ಎಲ್ಲಾ ಶಕ್ತಿಯಿಂದ ದೇಶವನ್ನು ರೂಪಿಸಲು, ನವೀನ ರೀತಿಯಲ್ಲಿ ಆವಿಷ್ಕರಿಸಲು ನಾನು ನಿಮ್ಮನ್ನು ಕರೆಯುತ್ತೇನೆ. ಪ್ರತಿಯೊಬ್ಬ ಭಾರತೀಯನು ಎಲ್ಲೇ ಇದ್ದರೂ ದೇಶಕ್ಕಾಗಿ ಹೊಸದನ್ನು ಪ್ರಯತ್ನಿಸುತ್ತಾನೆ. ಆಗ ಮಾತ್ರ ಹೊಸ ಮಾರ್ಗಗಳು ಸೃಷ್ಟಿಯಾಗುತ್ತವೆ. ಭಾರತವು ಸ್ವಾತಂತ್ರ್ಯದ 100ನೇ ವರ್ಷವನ್ನು ಆಚರಿಸುವಾಗ ಹೇಗಿರುತ್ತದೆ ಎಂಬುದರ ಕುರಿತು ಈಗಿನಿಂದಲೇ ಪ್ರಯತ್ನಗಳನ್ನು ಮಾಡಬೇಕಾಗಿದೆ’ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: SBI Special Current Account ವಹಿವಾಟು ಸೇರಿದಂತೆ ಸಿಗಲಿದೆ ಅನೇಕ ಪ್ರಯೋಜನ
‘ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ನಾವು ನಿರಂತರ ಪ್ರಯತ್ನಗಳನ್ನು ಮಾಡಬೇಕಾಗಿದೆ. ದೇವಸ್ಥಾನದಲ್ಲಿ ನಾವು ದೇವರನ್ನು ಹಲವು ಬಾರಿ ಏನನ್ನೋ ಕೇಳುತ್ತೇವೆ. ನನಗೆ ನನ್ನ ದೇಶದ ಜನರೇ ದೇವರ ರೂಪ. ನಮ್ಮ ದೇಶಕ್ಕಾಗಿ ಮೂರು ಪ್ರಮುಖ ನಿರ್ಣಯಗಳನ್ನು ಮಾಡುವಂತೆ ನಿಮ್ಮಲ್ಲಿ ವಿನಂತಿಸುತ್ತೇನೆ. ಸ್ವಾವಲಂಬಿ ಭಾರತಕ್ಕಾಗಿ ‘ಸ್ವಚ್ಛತೆ, ಸೃಷ್ಟಿ ಮತ್ತು ನಿರಂತರ ಪ್ರಯತ್ನ’. ಈ ಮೂರು ನಿರ್ಣಯಗಳನ್ನು ನಾವು ಇಂದು ಮಾಡಬೇಕಾಗಿದೆ. ವಿಶ್ವದ ಭೂಪಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನಮಾನವಿದ್ದು, ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ’ ಎಂದು ಮೋದಿ ಹೇಳಿದ್ದಾರೆ.
Shri Kashi Vishwanath Temple) ನಿರ್ಮಾಣವಾಗುತ್ತಿಲ್ಲ, ಬಡವರಿಗಾಗಿ ಮನೆಗಳನ್ನೂ ನಿರ್ಮಿಸಲಾಗುತ್ತಿದೆ. ಪೂರ್ಣ ಶ್ರದ್ಧೆಯಿಂದ ಕೆಲಸ ನಡೆದಿದೆ. ಇಂದಿನ ಭಾರತ ಕಳೆದು ಹೋದ ಪರಂಪರೆಯನ್ನು ಹುಡುಕುತ್ತಿದೆ. ಅನ್ನಪೂರ್ಣ ಮಾತೆಯ ಕೃಪೆಯಿಂದ ಕೊರೊನಾ ಕಾಲದಲ್ಲಿ ಉಚಿತ ಪಡಿತರ ವ್ಯವಸ್ಥೆ ಮಾಡಲಾಗಿತ್ತು’ ಅಂತಾ ಮೋದಿ ಸ್ಮರಿಸಿದರು.
ಇದನ್ನೂ ಓದಿ: Flipkart Realme Festive Days: ಈ 5G Smartphone ಮೇಲೆ ಸಿಗಲಿದೆ 20 ಸಾವಿರಗಳ ರಿಯಾಯಿತಿ
‘ಸೋಮನಾಥನಿಂದ ಹಿಡಿದು ವಿಶ್ವನಾಥನವರೆಗಿನ ಹನ್ನೆರಡನೆಯ ಜ್ಯೋತಿರ್ಲಿಂಗವನ್ನು ಸ್ಮರಿಸುವುದರಿಂದ ಅದು ಇಡೀ ಭಾರತವನ್ನು ಆವರಿಸಿರುವುದರಿಂದ ಎಲ್ಲ ಕಾರ್ಯಗಳು ನೆರವೇರುತ್ತವೆ’ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತವೆಂಬ ಪ್ರಜ್ಞೆ ಬಂದರೆ ಅಸಾಧ್ಯವಾದುದು ಎಲ್ಲಿಲ್ಲ? ಚಿಂತನೆ, ಸಂಕಲ್ಪ ಇದ್ದರೆ ಯಾವುದೂ ಅಸಾಧ್ಯವಲ್ಲ. ಪ್ರತಿಯೊಬ್ಬ ಭಾರತೀಯನ ತೋಳುಗಳಲ್ಲಿ, ಅಸಾಧ್ಯವಾದ ಪ್ರತಿಯೊಂದು ಕೆಲಸವನ್ನು ಸುಲಭಗೊಳಿಸುವ ಶಕ್ತಿಯಿದೆ. ಎಷ್ಟೇ ದೊಡ್ಡ ಸವಾಲು ಎದುರಾದರೂ ಭಾರತೀಯರು ಒಟ್ಟಾಗಿ ಅದನ್ನು ಎದುರಿಸುವ ಸಾಮರ್ಥ್ಯವಿದೆ. ನಾವು ನಮ್ಮನ್ನು ನೋಡುವಂತೆ ಜಗತ್ತು ನಮ್ಮನ್ನು ನೋಡುತ್ತದೆ’ ಅಂತಾ ಹೇಳಿದರು.
‘ಕಾಶಿಯಲ್ಲಿ ಸತ್ಯವೆಂದರೆ ಸಂಸ್ಕಾರ, ಕಾಶಿ ಎಂದರೆ ಅಲ್ಲಿ ಪ್ರೀತಿಯೇ ಸಂಪ್ರದಾಯ. ಕಾಶಿ(Vishwanath Mandir)ಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಈ ಕಾಶಿಯು ಶಿವಮಯಿ, ಇದು ಜ್ಞಾನಮಯವಾಗಿದೆ. ಭೂಮಂಡಲದಲ್ಲಿ ಕಾಶಿಯೇ ನನ್ನ ದೇಹ ಎಂದು ಸ್ವತಃ ಶಿವನೇ ಹೇಳಿದ್ದಾನೆ. ಅದಕ್ಕೇ ಇಲ್ಲಿನ ಪ್ರತಿ ಕಲ್ಲಿನಲ್ಲೂ ಶಂಕರನಿದ್ದಾನೆ. ಕಾಶಿಯಲ್ಲಿ ಎಲ್ಲೆಲ್ಲೂ ಪ್ರತಿ ಜೀವಿಗೂ ಶಿವನ ದರ್ಶನವಾಗುತ್ತದೆ ಎಂಬ ಶಾಸ್ತ್ರ ವಾಕ್ಯವಿದೆ. ಕಾಶಿಯು ಜೀವತ್ವವನ್ನು ಶಿವತ್ವದೊಂದಿಗೆ ಸಂಪರ್ಕಿಸುತ್ತದೆ’ ಅಂತಾ ಮೋದಿ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.