ವಾರಣಾಸಿ: ಉತ್ತರ ಪ್ರದೇಶದ (Uttar Pradesh) ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು (ಡಿಸೆಂಬರ್ 13 ರಂದು) ಉದ್ಘಾಟಿಸಲಿದ್ದಾರೆ. 2014 ರ ಚುನಾವಣೆಯಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮನಿರ್ದೇಶನಗೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಕಾರಿಡಾರ್ ಭರವಸೆ ನೀಡಿದ್ದರು. ಡಿಸೆಂಬರ್ 13 ರಂದು ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಉದ್ಘಾಟಿಸುವ (Kashi Vishwanath Corridor Inauguration) ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಗಂಗಾ ಮಾತೆ ಮತ್ತು ಕಾಶಿಗೆ ಸಂಬಂಧಿಸಿದ ಅತಿದೊಡ್ಡ ಭರವಸೆಯನ್ನು ಈಡೇರಿಸಲಿದ್ದಾರೆ.
11 ಅರ್ಚಕರೊಂದಿಗೆ ಬಾಬಾ ವಿಶ್ವನಾಥರ ಪ್ರತಿಷ್ಠಾಪನೆ:
ಪ್ರಧಾನಮಂತ್ರಿ ನರೇಂದ್ರ ಮೋದಿಯವರ (Narendra Modi) ಆಗಮನದ ನಂತರ, ಮೊದಲನೆಯದಾಗಿ, ಕಾಶಿಯ ಕೊತ್ವಾಲ್ ಕಾಲಭೈರವ ದೇವಾಲಯದಲ್ಲಿ ದರ್ಶನ ಮತ್ತು ಪೂಜೆಯನ್ನು ಮಾಡುತ್ತಾರೆ. ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕ ಗಂಗಾ ನದಿಯ ದಡದಲ್ಲಿ ಬಂದಿಳಿಯಲಿದ್ದಾರೆ. ಕ್ರೂಸ್ ಮೂಲಕ ಪ್ರಧಾನಿ ಮೋದಿ ಲಲಿತಾ ಘಾಟ್ ತಲುಪಲಿದ್ದಾರೆ. ಲಲಿತಾ ಘಟ್ಟದಿಂದ ಕಲಶದಲ್ಲಿ ಗಂಗಾಜಲ ತೆಗೆದುಕೊಂಡು ಕಾಶಿ ವಿಶ್ವನಾಥ ದೇವಸ್ಥಾನದ ಆವರಣಕ್ಕೆ ತೆರಳುವರು. 11 ಅರ್ಚಕರೊಂದಿಗೆ ಪ್ರಧಾನಿ ಮೋದಿ ಬಾಬಾ ವಿಶ್ವನಾಥನಿಗೆ ಜಲಾಭಿಷೇಕ ನೆರವೇರಿಸಲಿದ್ದಾರೆ. ಬಾಬಾ ವಿಶ್ವನಾಥನಿಗೆ ಪೂಜೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದಾರೆ. ಈ ಸಮಯದಲ್ಲಿ ಪಾಲ್ಗೊಳ್ಳಲು ದೇಶದೆಲ್ಲೆಡೆಯಿಂದ ಹಲವು ಸಾಧು-ಸಂತರಿಗೆ ಆಹ್ವಾನ ನೀಡಲಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯೊಂದಿಗೆ ಬಾಬಾ ವಿಶ್ವನಾಥನ ಪ್ರಸಾದವನ್ನು ಕಾಶಿಯಾದ್ಯಂತ ವಿತರಿಸಲಾಗುವುದು. ಪ್ರತಿ ಮನೆಗೂ ಪ್ರಸಾದ ತಲುಪಿಸುವ ಯೋಜನೆ ರೂಪಿಸಲಾಗಿದೆ.
ಕಾಶಿಯಲ್ಲಿ ಗಂಗಾ ಆರತಿ ಮಾಡಲಿರುವ ಪ್ರಧಾನಿ ಮೋದಿ:
ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಉದ್ಘಾಟಿಸಿದ (Kashi Vishwanath Corridor Inauguration) ನಂತರ ಪ್ರಧಾನಿ ನರೇಂದ್ರ ಮೋದಿ ಡಿಎಲ್‌ಡಬ್ಲ್ಯೂ ಅತಿಥಿ ಗೃಹಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 5:30 ರ ಸುಮಾರಿಗೆ ರವಿದಾಸ್ ಘಾಟ್ ತಲುಪಲಿರುವ ಪ್ರಧಾನಿ ಮೋದಿ, ಅಲ್ಲಿಂದ ಕ್ರೂಸ್ ಮೂಲಕ ದಶಾಶ್ವಮೇಧ ಘಾಟ್‌ಗೆ ತೆರಳಲಿದ್ದಾರೆ. ಇಲ್ಲಿ ಪ್ರಧಾನಿ ಮೋದಿ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗಂಗಾ ಆರತಿಯ ನಂತರ ವಿಹಾರದಲ್ಲಿಯೇ ಪ್ರಧಾನಿ ಮೋದಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ಪಟಾಕಿ ಮತ್ತು ಲೇಸರ್ ಶೋಗಳಂತಹ ಕಾರ್ಯಕ್ರಮಗಳು ಸಹ ಇರುತ್ತವೆ. ಬಳಿಕ ಪ್ರಧಾನಿ ಮೋದಿ ಡಿಎಲ್‌ಡಬ್ಲ್ಯು ಅತಿಥಿ ಗೃಹಕ್ಕೆ ತೆರಳಲಿದ್ದಾರೆ.
ಇದನ್ನೂ ಓದಿ- Bank Fraud: ಒಂದೇ ಒಂದು ಫೋನ್ ಕರೆಯಿಂದ 2.4 ಲಕ್ಷ ರೂಪಾಯಿ ವಂಚನೆ, ನೀವು ಇಂತಹ ತಪ್ಪು ಮಾಡುತ್ತಿದ್ದರೆ ಎಚ್ಚರ
ವಾರಣಾಸಿಯಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮ:
- ಮಧ್ಯಾಹ್ನ 12:00 ರಿಂದ 12:10 - ಕಾಲ ಭೈರವ ದೇವಾಲಯ ದರ್ಶನ-ಪೂಜಾ,
- ಮಧ್ಯಾಹ್ನ 1:00 ರಿಂದ 1:20ರವರೆಗೆ - ಶ್ರೀ ಕಾಶಿ ವಿಶ್ವನಾಥ ದೇವಾಲಯ ದರ್ಶನ-ಪೂಜಾ,
- ಮಧ್ಯಾಹ್ನ 1:25 ರಿಂದ ಮಧ್ಯಾಹ್ನ 2:25 - ಶ್ರೀ ಕಾಶಿ ವಿಶ್ವನಾಥ ಧಾಮದ ಉದ್ಘಾಟನಾ ಕಾರ್ಯಕ್ರಮ
- ಮಧ್ಯಾಹ್ನ 2:30 ರಿಂದ 3:50 ರವರೆಗೆ - ದಾರಿಯಲ್ಲಿರುವ ವಿವಿಧ ಕಟ್ಟಡಗಳ ಪರಿಶೀಲನೆ
- ಅಪರಾಹ್ನ 3:50 - ರವಿದಾಸ್ ಪಾರ್ಕ್ ಡಿಎಲ್‌ಡಬ್ಲ್ಯೂ ಅತಿಥಿ ಗೃಹಕ್ಕೆ ನಿರ್ಗಮನ,
- ಸಂಜೆ 4:00 ರಿಂದ 5:50 ರವರೆಗೆ - DLW ಅತಿಥಿ ಗೃಹದ ಸಮಯವನ್ನು ಕಾಯ್ದಿರಿಸಲಾಗಿದೆ
- ಸಂಜೆ 6:00 ರಿಂದ 8:45 ರವರೆಗೆ - ಕಾಯ್ದಿರಿಸಲಾಗಿದೆ, (ಗಂಗಾ ಆರತಿ ಮತ್ತು ಸಭೆ)
- ರಾತ್ರಿ 9:10 -DLW ಅತಿಥಿ ಗೃಹ, ವಾರಣಾಸಿ ಆಗಮನ.
ಬಾಪು ಅವರ ಕನಸು ಇಂದು ಈಡೇರಲಿದೆ - ಸಿಎಂ ಯೋಗಿ
ಮಹಾತ್ಮ ಗಾಂಧೀಜಿಯವರು ವಾರಣಾಸಿಗೆ (Varanasi) ಬಂದಿದ್ದಾಗ ಇಲ್ಲಿನ ಪರಿಸ್ಥಿತಿ ನೋಡಿ ಕಟುವಾದ ಟೀಕೆಗಳನ್ನು ಮಾಡಿದ್ದರು. ಆದರೆ 100 ವರ್ಷಗಳಲ್ಲಿ ಯಾರೂ ಅದರ ಬಗ್ಗೆ ಗಮನ ಹರಿಸಲಿಲ್ಲ. ಕಾಶಿ ವಿಶ್ವನಾಥ್ ವಿದೇಶಿ ಆಕ್ರಮಣಕಾರರನ್ನು ಎದುರಿಸಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇದನ್ನೂ ಓದಿ- ಕಾಶಿ ವಿಶ್ವನಾಥ್ ಕಾರಿಡಾರ್ ಗೆ ಅನುಮೋದನೆ ನೀಡಿದ್ದು ಸಮಾಜವಾದಿ ಪಕ್ಷದ ಸರ್ಕಾರ-ಅಖಿಲೇಶ್ ಯಾದವ್
ಕಾರಿಡಾರ್ನ ಕ್ರೆಡಿಟ್ಗಾಗಿ ಸ್ಪರ್ಧೆ
ಅದೇ ಸಮಯದಲ್ಲಿ, ಅಖಿಲೇಶ್ ಯಾದವ್ (Akhilesh Yadav) ಅವರು ಕಾಶಿ ವಿಶ್ವನಾಥ್ ಕಾರಿಡಾರ್‌ನ ಕಾಲಗಣನೆ: ಎಸ್‌ಪಿ ಸರ್ಕಾರದಲ್ಲಿ ಕೋಟಿಗಳನ್ನು ಮಂಜೂರು ಮಾಡಲಾಗಿತ್ತು, ಎಸ್‌ಪಿ ಸರ್ಕಾರದಲ್ಲಿ ಕಾರಿಡಾರ್‌ಗೆ ಕಟ್ಟಡಗಳ ಸ್ವಾಧೀನ ಪ್ರಾರಂಭವಾಯಿತು ಮತ್ತು ದೇವಾಲಯದ ಕಾರ್ಯಕರ್ತರಿಗೆ ಗೌರವಧನವನ್ನು ನಿಗದಿಪಡಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಎಸ್‌ಪಿ ಸರ್ಕಾರದ ವರುಣಾ ನದಿಯ ಸ್ವಚ್ಛತಾ ಅಭಿಯಾನವನ್ನು ಏಕೆ ನಿಲ್ಲಿಸಲಾಯಿತು ಮತ್ತು ಮೆಟ್ರೋ ಏನಾಯಿತು ಎಂದು 'ಪಾದಚಾರಿಗಳು' ಹೇಳುತ್ತಾರೆ? ಎಂದು ಟ್ವೀಟ್ ಮಾಡಿದ್ದಾರೆ.
काशी विश्वनाथ कॉरिडोर की क्रोनोलॉजी:
- सपा सरकार में करोड़ों का आवंटन हुआ
- सपा सरकार में कॉरिडोर हेतु भवनों का अधिग्रहण शुरू हुआ
- मंदिरकर्मियों के लिए मानदेय तय किया गया‘पैदलजीवी’ बताएं कि सपा सरकार के वरुणा नदी के स्वच्छता अभियान को क्यों रोका और मेट्रो का क्या हुआ।
— Akhilesh Yadav (@yadavakhilesh) December 12, 2021
ಇದಲ್ಲದೇ ಕಾಶಿ ವಿಶ್ವನಾಥ್ ಕಾರಿಡಾರ್ ಆರಂಭಿಸಿದ್ದೆವು, ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಎಸ್‌ಪಿ ಸರ್ಕಾರದಲ್ಲಿ ಸಂಪುಟದಿಂದ ಅಂಗೀಕರಿಸಲಾಗಿದೆ. ಅದರ ದಾಖಲೆಯನ್ನು ನಿಮ್ಮೆಲ್ಲರಿಗೂ ನೀಡುತ್ತೇವೆ. ಈಗ ಡಾಕ್ಯುಮೆಂಟ್ ಜೊತೆ ಮಾತುಕತೆ ಇರುತ್ತದೆ, ಡಾಕ್ಯುಮೆಂಟ್ ಇಲ್ಲದೆ ಏನೂ ಇರುವುದಿಲ್ಲ ಎಂದು ಅಖಿಲೇಶ್ ಯಾದವ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.